Thursday, 12th December 2024

Unique Tradition: ಇಲ್ಲಿನ ರಾಜನಿಗೆ ಪ್ರತಿ ವರ್ಷವೂ ಮದುವೆ; ನಗ್ನ ನೃತ್ಯದಲ್ಲಿ ಗೆಲ್ಲುವಾಕೆ ಆತನ ಹೊಸ ಪತ್ನಿ!

Unique Tradition

ರಾಜರ ಆಡಳಿತ (rule of kings) ವ್ಯವಸ್ಥೆಯು ಬಹುತೇಕ ದೇಶಗಳಲ್ಲಿ ಇಲ್ಲವಾಗಿದೆ. ಆದರೆ ಕೆಲವೇ ಕೆಲವು ಬೆರಳೆಣಿಕೆಯ ರಾಷ್ಟ್ರಗಳಲ್ಲಿ ಇದು ಸೀಮಿತ ಅಥವಾ ಕೆಲವು ಸಾಂವಿಧಾನಿಕ ಅಧಿಕಾರಗಳೊಂದಿಗೆ ನಡೆಸಲ್ಪಡುತ್ತಿದೆ. ಆದರೆ ಅವರಿಗೆ ರಾಜರು ಅಥವಾ ರಾಣಿಯರು (kings or queens) ಎಂಬ ಹೆಸರು ಮಾತ್ರ ಹೊಂದಿರುತ್ತಾರೆ. ಅವರ ಕೆಲವೊಂದು ಆಚರಣೆಗಳು, ಸಂಪ್ರದಾಯಗಳು (Unique Tradition) ವಿಚಿತ್ರವಾಗಿರುತ್ತದೆ. ಅಂತಹ ಒಂದು ಸಂಪ್ರದಾಯ ಈ ದೇಶದಲ್ಲಿದೆ.

ಹೆಚ್ಚಿನ ದೇಶಗಳಲ್ಲಿ ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಇಲ್ಲಿ ನಾಗರಿಕರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸರ್ಕಾರಗಳು ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದರೆ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಬಹುದು. ಆದರೂ ಇನ್ನೂ ಕೆಲವು ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಗಿಲ್ಲ. ರಾಜರು ಇನ್ನೂ ಆಳ್ವಿಕೆ ನಡೆಸುತ್ತಾರೆ. ತಮ್ಮದೇ ಆದ ಅಗತ್ಯಗಳಿಗೆ ಸರಿಹೊಂದುವಂತೆ ಕಾನೂನುಗಳನ್ನು ರಚಿಸುತ್ತಾರೆ.

Unique Tradition

ಅಂತಹ ಒಂದು ಪ್ರದೇಶ ಆಫ್ರಿಕನ್ ದೇಶವಾದ (african countries) ಸ್ವಾಜಿಲ್ಯಾಂಡ್ (Swaziland) . ಇದನ್ನು ಈಗ ಎಸ್ವಾಟಿನಿ ಸಾಮ್ರಾಜ್ಯ ಎಂದು ಕರೆಯಲಾಗುತ್ತದೆ. ಈ ರಾಷ್ಟ್ರದ ರಾಜ ಒಂದು ವಿಚಿತ್ರವಾದ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾನೆ. ಇಲ್ಲಿನ ರಾಜ ಪ್ರತಿ ವರ್ಷ ಕನ್ಯೆ ಹುಡುಗಿಯನ್ನು ಮದುವೆಯಾಗುತ್ತಾನೆ. ಹೀಗಾಗಿ ಆತನಿಗೆ ಅಸಂಖ್ಯಾತ ಪತ್ನಿಯರು ಹಾಗೂ ಲೆಕ್ಕವಿಲ್ಲದಷ್ಟು ಮಕ್ಕಳಿದ್ದಾರೆ.

2018 ರಲ್ಲಿ ಸ್ವಾಜಿಲ್ಯಾಂಡ್‌ನ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವದಂದು, ರಾಜನು ದೇಶದ ಹೆಸರನ್ನು ಇಸ್ವಾಟಿನಿ ಸಾಮ್ರಾಜ್ಯ ಎಂದು ಬದಲಾಯಿಸಿದ್ದ, ಈ ಸಣ್ಣ ದೇಶವು ದಕ್ಷಿಣ ಆಫ್ರಿಕಾ ಮತ್ತು ಮೊಜಾಂಬಿಕ್ ಬಳಿ ಇದೆ.

ಇಸ್ವಾಟಿನಿ ರಾಜನ ಕಾರಣದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಪ್ರತಿ ವರ್ಷ, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಇಲ್ಲಿ ಉಮ್ಲಂಗಾ ಸಮಾರಂಭವನ್ನು ರಾಜಮನೆತನದ ಲುಡ್ಜಿಡ್ಜಿನಿ ಗ್ರಾಮದಲ್ಲಿ ನಡೆಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ 10,000 ಕ್ಕಿಂತ ಹೆಚ್ಚು ಕನ್ಯೆಯರು ಭಾಗವಹಿಸುತ್ತಾರೆ. ರಾಜನ ಮುಂದೆ ನೃತ್ಯ ಮಾಡುತ್ತಾರೆ.
ರಾಜನು ಪ್ರತಿ ವರ್ಷ ಈ ಹುಡುಗಿಯರಲ್ಲಿ ಒಬ್ಬಳನ್ನು ತನ್ನ ಹೊಸ ರಾಣಿಯಾಗಿ ಆರಿಸಿಕೊಳ್ಳುತ್ತಾನೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಈ ಹುಡುಗಿಯರು ರಾಜ ಮತ್ತು ಇಡೀ ಸಮುದಾಯದ ಮುಂದೆ ಬಟ್ಟೆ ಇಲ್ಲದೆ ಈ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುತ್ತಾರೆ.

Unique Tradition

ಈ ಸಂಪ್ರದಾಯವು ದೇಶದ ಅನೇಕ ಯುವತಿಯರಿಂದ ಟೀಕೆಗಳನ್ನು ಎದುರಿಸಿದೆ ಮತ್ತು ಕೆಲವರು ಮೆರವಣಿಗೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಈ ಪ್ರತಿಭಟನೆಯ ಬಗ್ಗೆ ರಾಜನಿಗೆ ತಿಳಿದಾಗ ಅವರ ಕುಟುಂಬಗಳಿಗೆ ಭಾರಿ ದಂಡ ವಿಧಿಸಿದ್ದಾನೆ. ದೇಶದ ಜನಸಂಖ್ಯೆಯ ಹೆಚ್ಚಿನ ಭಾಗವು ತೀವ್ರ ಬಡತನದಿಂದ ಹೋರಾಡುತ್ತಿರುವಾಗ ರಾಜ ಐಷಾರಾಮಿ ಜೀವನಶೈಲಿ ನಡೆಸುತ್ತಿದ್ದಾನೆ ಎನ್ನುವ ಆರೋಪಗಳೂ ಇಲ್ಲಿನ ರಾಜನ ಮೇಲಿದೆ.

Unique Tradition: ಈ ನಗರದ ಗಡಿಯಾರದಲ್ಲಿ 12 ಸಂಖ್ಯೆಯೇ ಇಲ್ಲ!

2015ರಲ್ಲಿ ಇಸ್ವಾಟಿನಿ ದೊರೆ ಮೂರನೇ ರಾಜ ಮಸ್ವತಿ III ಭಾರತ- ಆಫ್ರಿಕಾ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದ. ಅವನು ತನ್ನ 15 ಹೆಂಡತಿಯರು, ಮಕ್ಕಳು ಮತ್ತು 100 ಸೇವಕರೊಂದಿಗೆ ಬಂದಿದ್ದ. ಅವರ ವಾಸ್ತವ್ಯಕ್ಕಾಗಿ ದೆಹಲಿಯ ಪಂಚತಾರಾ ಹೊಟೇಲ್ ನಲ್ಲಿ 200 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.