Thursday, 12th December 2024

ಬಾಂಬ್ ದಾಳಿಯಲ್ಲಿ ಅಮೆರಿಕದ ಪ್ರಜೆ ಬಲಿ

ವಾಷಿಂಗ್ಟನ್: ರಷ್ಯಾ ಉಕ್ರೇನ್ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಚರ್ನಿಹಿವ್‍ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಅಮೆರಿಕದ ಪ್ರಜೆ ಮೃತಪಟ್ಟಿದ್ದಾರೆ.

ಮಾ.17ರಂದು ಉಕ್ರೇನ್‍ನ ಚನ್ರಿಹಿವ್‍ನಲ್ಲಿ ಕ್ಷಿಪಣಿ ದಾಳಿ ನಡೆಸಿದ ವೇಳೆ ಅಮೆರಿಕದ ಪ್ರಜೆ ಜೇಮ್ಸ್ ವಿಟ್ನಿಹಿಲ್ ಮೃತಪಟ್ಟಿದ್ದಾರೆ. ವಿಟ್ನಿಹಿಲ್ ಉಕ್ರೇನ್ ಮೂಲದ ಸಹಚರರ ಜೊತೆ ಕಳೆದ ಡಿಸೆಂಬರ್‍ನಲ್ಲಿ ಆಗಮಿಸಿದ್ದರು.

ರಾತ್ರಿ ವೇಳೆ ಬೀಳುವ ಬಾಂಬ್‍ಗಳು ಯಾವುದೇ ಅಪಾಯವನ್ನು ಉಂಟು ಮಾಡಬಹುದು ಎಂದು ಫೇಸ್‍ಬುಕ್‍ನಲ್ಲಿ ಬರೆದು ಕೊಂಡಿದ್ದರು. ಈಗ ರಷ್ಯಾದ ನಡೆಸಿದ ಕ್ಷಿಪಣಿ ದಾಳಿಯಿಂದ ವಿಟ್ನಿಹಿಲ್ ಮೃತಪಟ್ಟಿದ್ದಾರೆ.