ಬೆಂಗಳೂರು: ಚೀನಾ ನಿರ್ಮಿಸುತ್ತಿದ್ದ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆ (Nuclear Attack Submarine) ಈ ವರ್ಷದ ಆರಂಭದಲ್ಲಿ ಮುಳುಗಿದೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಇದು ತನ್ನ ಮಿಲಿಟರಿ ಪರಾಕ್ರಮವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ನರೆಯ ದೇಶದಕ್ಕೆ ಸಂಭಾವ್ಯಹಿನ್ನಡೆ ಉಂಟು ಮಾಡಿದೆ. ಝೌ-ಕ್ಲಾಸ್ ಜಲಾಂತರ್ಗಾಮಿ ನೌಕೆಯು ಮೇ ಮತ್ತು ಜೂನ್ ನಡುವೆ ಮುಳುಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಚೀನಾದ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಈ ಘಟನೆಯು ವಿಶೇಷವಾಗಿ ವಿವಾದಿತ ಪ್ರದೇಶಗಳಲ್ಲಿ ಅಧಿಕಾರ ಪ್ರದರ್ಶಿಸುವ ಚೀನಾದ ಮಹತ್ವಾಕಾಂಕ್ಷೆಗಳಿಗೆ ಬಿದ್ದ ಹೊಡೆತವಾಗಿದೆ.
ಯುಎಸ್ ರಕ್ಷಣಾ ತಜ್ಞರು ವಿಶ್ಲೇಷಿಸಿದ ಪ್ಲಾನೆಟ್ ಲ್ಯಾಬ್ಸ್ ಪಿಬಿಸಿಯ ಉಪಗ್ರಹ ಚಿತ್ರಗಳು ಜಲಾಂತರ್ಗಾಮಿ ನೌಕೆಯು ಯಾಂಗ್ಟ್ಸೆ ನದಿಯ ವುಚಾಂಗ್ ಶಿಪ್ ಯಾರ್ಡ್ ಬಳಿ ಮುಳುಗಿರುವುದು ತೋರಿಸಿದೆ. ಜೂನ್‌ನಲ್ಲಿ ತೆಗೆದ ಚಿತ್ರಗಳು ಹಡಗು ಬಹುತೇಕ ನೀರಿನಲ್ಲಿ ಮುಳುಗಿರುವುದನ್ನು ತೋರಿಸುತ್ತದೆ. ಆದರೆ ಆಗಸ್ಟ್ ನಂತರದ ಚಿತ್ರಗಳು ಅದೇ ಹಡಗುಕಟ್ಟೆಯಲ್ಲಿ ನೌಕೆಯ ಕಂಡಿದೆ. ಇದು ಅದೇ ಹಡಗು ಅಥವಾ ಮತ್ತೊಂದು ಜಲಾಂತರ್ಗಾಮಿ ನೌಕೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: United Nations : ವಿಶ್ವ ಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಫ್ರಾನ್ಸ್ ಬಳಿಕ ಇದೀಗ ಬ್ರಿಟನ್ ಬೆಂಬಲ
2022ರ ಹೊತ್ತಿಗೆ ಆರು ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳು, ಆರು ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳು ಮತ್ತು 48 ಡೀಸೆಲ್ ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಒಳಗೊಂಡಿದ್ದ ಚೀನಾ ಮುಂಬರುವ ವರ್ಷಗಳಲ್ಲಿ ಗಣನೀಯವಾಗಿ ಬೆಳೆಯುವ ಉದ್ದೇಶ ಇಟ್ಟುಕೊಂಡಿತ್ತು. ಯುಎಸ್ ಮಿಲಿಟರಿ ಅಂದಾಜಿನ ಪ್ರಕಾರ ಚೀನಾದ ನೌಕಾಪಡೆಯು 2025ರ ವೇಳೆಗೆ 65 ಮತ್ತು 2035 ರ ವೇಳೆಗೆ 80 ಜಲಾಂತರ್ಗಾಮಿ ನೌಕೆಗಳನ್ನು ಹೊಂದಲಿದೆ.
ಅಮೆರಿಕದ ಹೇಳಿಕೆಗೆ ಚೀನಾ ತಿರುಗೇಟು
ಜಲಾಂತರ್ಗಾಮಿ ಮುಳುಗುವುದನ್ನು ಚೀನಾ ಸರ್ಕಾರ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ವಕ್ತಾರರು, ನೀವು ಉಲ್ಲೇಖಿಸಿದ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿಲ್ಲ. ಪ್ರಸ್ತುತ ಒದಗಿಸಲು ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.