ವಾಷಿಂಗ್ಟನ್: ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್‌ಫೆಲ್ಡ್ (88) ನಿಧನರಾಗಿದ್ದಾರೆ. ಅವರು ಎರಡು ಬಾರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಯಾಗಿದ್ದರು.
ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕೆಲ ಕಾಲ ಶ್ವೇತಭವನದ ಮುಖ್ಯಸ್ಥರಾಗಿದ್ದರು ಮತ್ತು 2001ರಿಂದ 2006ರವರೆಗೆ ಅಧ್ಯಕ್ಷ ಜಾರ್ಜ್ ಬುಷ್ ಅವರ ಜತೆಗೂ ಕೂಡ ಸೇವೆ ಸಲ್ಲಿಸಿದ್ದರು.
2003ರ ಇರಾಕ್ ಆಕ್ರಮಣದ ಪ್ರಮುಖ ರೂವಾರಿ, 1975ರಿಂದ 1977ರವರೆಗೆ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ನೇತೃತ್ವದಲ್ಲಿ ಡೊನಾಲ್ಡ್ ಎರಡು ಬಾರಿ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಒಸಾಮಾ ಬಿನ್ ಲಾಡೆನ್ ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಅಧಿಕಾರದಲ್ಲಿದ್ದ ಐದು ವರ್ಷಗಳ ಅವಧಿಯಲ್ಲಿ ಅವರ ಯತ್ನ ವಿಫಲವಾಗಿತ್ತು.
ಪ್ರಸ್ತುತ ಪೆಂಟಗನ್ ಮುಖ್ಯಸ್ಥ ಲಾಯ್ಡ್ ಆಸ್ಟಿನ್, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.