Indian Researcher: ಹಮಾಸ್ ಜೊತೆ ನಂಟು ಹೊಂದಿದ ಆರೋಪ; ಭಾರತೀಯ ಸಂಶೋಧಕನ ಗಡಿಪಾರು ಆದೇಶಕ್ಕೆ ಕೋರ್ಟ್ ತಡೆ
Indian Researcher: ಅಮೆರಿಕದಿಂದ ಭಯೋತ್ಪಾಕದ ಸಂಘಟನೆಯೆಂದು ಗುರುತಿಸಲಾದ ಹಮಾಸ್ ಜೊತೆಗೆ ನಂಟು ಇರಿಸಿಕೊಂಡ ಆರೋಪದ ಮೇಲೆ ಭಾರತೀಯ ಸಂಶೋಧಕರೊಬ್ಬರನ್ನು ಗಡಿಪಾರು ಮಾಡಲು ಹೊರಟಿದ್ದ ಅಮೆರಿಕ ಸರ್ಕಾರದ ನಿರ್ಧಾರಕ್ಕೆ ಅಲ್ಲಿನ ನ್ಯಾಯಾಧೀಶರು ಗುರುವಾರ ತಡೆ ನೀಡಿದ್ದಾರೆ.

ಬದರ್ ಖಾನ್ ಸೂರಿ

ವಾಷಿಂಗ್ಟನ್: ಅಮೆರಿಕ( America)ದಿಂದ ಭಯೋತ್ಪಾದಕ ಸಂಘಟನೆ(Terrorist Organization)ಯೆಂದು ಗುರುತಿಸಲಾದ ಹಮಾಸ್( Hamas) ಜೊತೆಗೆ ನಂಟು ಇರಿಸಿಕೊಂಡ ಆರೋಪದ ಮೇಲೆ ಭಾರತೀಯ ಸಂಶೋಧಕ(Indian Researcher)ರೊಬ್ಬರನ್ನು ಗಡಿಪಾರು(Deportation ) ಮಾಡಲು ಹೊರಟಿದ್ದ ಅಮೆರಿಕ ಸರ್ಕಾರದ( American Government) ನಿರ್ಧಾರಕ್ಕೆ ಅಲ್ಲಿನ ನ್ಯಾಯಾಧೀಶರು(Judge) ಗುರುವಾರ ತಡೆ(Stay) ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಧಿಕಾರ ವಹಿಸಿಕೊಂಡ ಎರಡು ತಿಂಗಳ ನಂತರ ಸಂಶೋಧನೆ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಎಂಬ ಆತಂಕಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತ ಮೂಲದ ವ್ಯಕ್ತಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿರುವ ಬದರ್ ಖಾನ್ ಸೂರಿ(Badar Khan Suri) ಅವರನ್ನು ಬಂಧಿಸಲಾಗಿದೆ.
ಈ ಬಂಧನವು ದುರುದ್ದೇಶಪೂರಿತವಾಗಿದ್ದು, ಪ್ರತೀಕಾರದ ಭಾವನೆಯಿಂದ ಮಾಡಲಾಗಿದೆ ಎಂದು ಬದರ್ ಖಾನ್ ಪರ ವಕೀಲರು ವಾದಿಸಿದ್ದು, ಅವರ ಬಿಡುಗಡೆಗೆ ಒತ್ತಾಯಿಸಿದ್ದಾರೆ. “ಪ್ಯಾಲೆಸ್ಟೀನಿಯನ್ ಹಕ್ಕುಗಳಿಗೆ ಬೆಂಬಲ ವ್ಯಕ್ತಪಡಿಸುವ ಬದರ್ ಖಾನ್ ಅವರ ಭಾಷಣಗಳನ್ನು ಮುಚ್ಚಿ ಹಾಕಲು ಹಾಗೂ ಅವರ ಧ್ವನಿಯನ್ನು ಹತ್ತಿಕ್ಕಲು ಮಾಡಿರುವ ಬಂಧನ” ಎಂದು ಅವರು ಹೇಳಿದ್ದಾರೆ.
ಗಡಿಪಾರು ತಡೆಗೆ ತುರ್ತು ಅರ್ಜಿಯನ್ನು ಸಲ್ಲಿಸಿರುವ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU), ಬದರ್ ಖಾನ್ ಅವರನ್ನು ಲೂಸಿಯಾನದಲ್ಲಿರುವ ವಲಸಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಹೇಳಿದೆ. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ವರ್ಜೀನಿಯಾ ನ್ಯಾಯಾಲಯವು, “ಕೋರ್ಟ್ ಮುಂದಿನ ಆದೇಶ ನೀಡುವವರೆಗೆ ಬದರ್ ಖಾನ್ ಅವರನ್ನು ಅಮೆರಿಕದಿಂದ ಗಡಿಪಾರು ಮಾಡಬಾರದು” ಎಂದು ಆದೇಶ ಹೊರಡಿಸಿದರು.
ಈ ಸುದ್ದಿಯನ್ನು ಓದಿ Viral Video: ಸನ್ಯಾಸಿಯಾದರೇ ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗೀಯ? ವೈರಲ್ ವಿಡಿಯೋ ಹಿಂದಿನ ಅಸಲೀಯತ್ತೇನು?
ಸಂವಿಧಾನ ಬಾಹಿರ ಎಂದ ACLU:
"ಅವರ ಮನೆ ಮತ್ತು ಕುಟುಂಬದಿಂದ ಯಾರನ್ನಾದರೂ ಹೊರಹಾಕುವುದು, ಅವರ ವಲಸೆ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ರಾಜಕೀಯ ದೃಷ್ಟಿಕೋನದ ಆಧಾರದ ಮೇಲೆ ಅವರನ್ನು ಬಂಧಿಸುವುದು, ಟ್ರಂಪ್ ವಿರುದ್ಧದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸ್ಪಷ್ಟ ಪ್ರಯತ್ನವಾಗಿದೆ" ಎಂದು ACLU ವಲಸೆ ಹಕ್ಕುಗಳ ವಕೀಲೆ ಸೋಫಿಯಾ ಗ್ರೆಗ್ ಹೇಳಿದರು. "ಅದು ಸ್ಪಷ್ಟವಾಗಿ ಸಂವಿಧಾನಬಾಹಿರವಾಗಿದೆ" ಎಂದು ಅವರು ಪುನರುಚ್ಛರಿಸಿದರು.
ಬುಧವಾರ, ಹೂಸ್ಟನ್‌ನಲ್ಲಿ ಆಯೋಜಿಸಲಾದ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದ ಫ್ರೆಂಚ್ ಬಾಹ್ಯಾಕಾಶ ವಿಜ್ಞಾನಿಯೊಬ್ಬರ ಸ್ಮಾರ್ಟ್‌ಫೋನ್ ಅನ್ನು ಅಧಿಕಾರಿಗಳು ಶೋಧಿಸಿದ್ದರು. ಈ ವೇಳೆ ಆ ಫೋನ್‌ನಲ್ಲಿ ಯುಎಸ್ ನೀತಿಯ ವಿರುದ್ಧ "ದ್ವೇಷಪೂರಿತ" ಸಂದೇಶಗಳು ಪತ್ತೆಯಾದ ನಂತರ ಅವರನ್ನು ಗಡೀಪಾರು ಮಾಡಲಾಗಿತ್ತು. ಅಮೆರಿಕಾದ ಈ ನಿರ್ಧಾರವನ್ನು ಫ್ರೆಂಚ್ ಸರ್ಕಾರ ಬಲವಾಗಿ ಖಂಡಿಸಿತ್ತು.
"ಡಾ. ಖಾನ್ ಸೂರಿ ಒಬ್ಬ ಭಾರತೀಯ ಪ್ರಜೆಯಾಗಿದ್ದು, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ಕುರಿತ ಡಾಕ್ಟರೇಟ್ ಸಂಶೋಧನೆ ಮುಂದುವರಿಸಲು ಅವರಿಗೆ ವೀಸಾ ನೀಡಲಾಗಿದೆ. ಅವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಕುರಿತು ನಮಗೆ ತಿಳಿದಿಲ್ಲ, ಮತ್ತು ಅವರ ಬಂಧನಕ್ಕೆ ಕಾರಣವನ್ನೂ ನಮಗೆ ತಿಳಿಸಿಲ್ಲ" ಎಂದು ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಪ್ರಕಾರ, ಜಾರ್ಜ್‌ಟೌನ್‌ನ ಅಲ್ವಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ-ಕ್ರಿಶ್ಚಿಯನ್ ಅಂಡರ್‌ಸ್ಟಾಂಡಿಂಗ್‌ನಲ್ಲಿ ಸಂಶೋಧಕರಾಗಿರುವ ಬದರ್ ಖಾನ್ ಸೂರಿ ಅವರನ್ನು ಸೋಮವಾರ ವರ್ಜೀನಿಯಾದ ಆರ್ಲಿಂಗ್ಟನ್‌ನಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಗಿದೆ ಎಂದು ಪೊಲಿಟಿಕೊ ವರದಿ ಮಾಡಿದೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಕ್ತಾರರಾದ ಟ್ರಿಸಿಯಾ ಮೆಕ್‌ಲಾಫ್ಲಿನ್, “ಬದರ್ ಖಾನ್ ಸೂರಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿನಿಮಯ ವಿದ್ಯಾರ್ಥಿಯಾಗಿದ್ದು, ಹಮಾಸ್ ಪರ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯೆಹೂದಿ ವಿರೋಧಿ ಪ್ರಚಾರ ಮಾಡುತ್ತಿದ್ದರು. ಹಮಾಸ್‌ನ ಹಿರಿಯ ಸಲಹೆಗಾರರಾಗಿರುವ ಪರಿಚಿತ ಅಥವಾ ಶಂಕಿತ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು" ಎಂದು ಆರೋಪಿಸಿದ್ದಾರೆ.