Wednesday, 6th November 2024

US presidential elections 2024: ಭಾರತೀಯ ನಟಿ ಅಮೆರಿಕದಲ್ಲಿ ವೋಟಿಂಗ್‌; ನೆಟ್ಟಿಗರು ಫುಲ್‌ ಸರ್ಪ್ರೈಸ್‌!

Akansha Ranjan Kapoor

ವಾಷಿಂಗ್ಟನ್‌: ಭಾರತೀಯ ಮೂಲದ ನಟಿಯೊಬ್ಬರು (India based actress) ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ (US presidential elections 2024) ಮತ ಚಲಾಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆದ ಬಳಿಕ ಆಕೆ ಅಮೆರಿಕನ್ ಪ್ರಜೆ ಎಂದು ತಿಳಿದು ಸಾಕಷ್ಟು ಮಂದಿ ಆಶ್ಚರ್ಯ ವ್ಯಕ್ತಪಡಿಸಿದರು. ನಟಿ ಆಕಾಂಕ್ಷ ರಂಜನ್ ಕಪೂರ್ (Akansha Ranjan Kapoor) ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಕಮಲಾ ಹ್ಯಾರಿಸ್‌ಗೆ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ.

31 ವರ್ಷದ ನಟಿ ಆಕಾಂಕ್ಷ ಯುನೈಟೆಡ್ ಸ್ಟೇಟ್ಸ್ ನ 47ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಮಂಗಳವಾರ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು. 2024 ರ ಅಮೆರಿಕದ ಚುನಾವಣೆಯನ್ನು ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.

ಮುಂಬೈ ಮೂಲದ ನಟಿ ಆಕಾಂಕ್ಷ ರಂಜನ್ ಕಪೂರ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನಾನು ಮತ ಚಲಾಯಿಸಿದೆ” ಎನ್ನುವ ಬ್ಯಾಡ್ಜ್ ಅನ್ನು ತೋರಿಸಿದ್ದಾರೆ. ಇದರಲ್ಲಿ ತಾವು ಕಮಲಾ ಹ್ಯಾರಿಸ್ ಅವರಿಗೆ ಮತ ಚಲಾಯಿಸಿದೆ ಎಂದು ಹೇಳಿಕೊಂಡಿದ್ದಾರೆ.

ಆಕಾಂಕ್ಷ ಅವರು ರಂಜನ್ ಕಪೂರ್ ಅಮೆರಿಕಾದ ಪ್ರಜೆ ಎಂದು ತಿಳಿದು ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ಆಕಾಂಕ್ಷ ರಂಜನ್ ಕಪೂರ್ ಯುಎಸ್ ಪ್ರಜೆಯಾ ? ಎಂದು ಪ್ರಶ್ನಿಸಿದ್ದಾರೆ. ಬೇರೆ ದೇಶಗಳ ಪೌರತ್ವವನ್ನು ಹೊಂದಿರುವ ಭಾರತ ಮೂಲದ ಸೆಲೆಬ್ರಿಟಿಗಳ ವಿವರಣೆಯಿಂದ ಈ ಪೋಸ್ಟ್ ತುಂಬಿ ಹೋಗಿತ್ತು. ಇತ್ತೀಚೆಗೆ ಕೆನಡಾದ ಪೌರತ್ವವನ್ನು ತ್ಯಜಿಸಿದ ಅಕ್ಷಯ್ ಕುಮಾರ್, ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದ ಆಲಿಯಾ ಭಟ್ ಕುರಿತು ಇಲ್ಲಿ ಅನೇಕರು ಕಾಮೆಂಟ್ ಮಾಡಿದ್ದರು.

Akansha Ranjan Kapoor

ಕಪೂರ್ ಅವರು ಆಲಿಯಾ ಭಟ್ ಅವರ ಆಪ್ತ ಸ್ನೇಹಿತರಾಗಿದ್ದು, ಇಬ್ಬರೂ ಶಾಲೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದಾರೆ ಎನ್ನಲಾಗಿದೆ. ಆಕಾಂಕ್ಷ ಅವರು ನಟ, ನಿರ್ದೇಶಕ ಶಶಿ ರಂಜನ್ ಮತ್ತು ಅನು ರಂಜನ್ ಅವರ ಪುತ್ರಿ. ಮುಂಬೈನಲ್ಲಿ ಜನಿಸಿದ ಆಕಾಂಕ್ಷ ಜಾಮ್ನಾಬೈ ನಾರ್ಸೀ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.ಗಿಲ್ಟಿ, ಮೋನಿಕಾ ಒ ಮೈ ಡಾರ್ಲಿಂಗ್, ಜಿಗ್ರ, ಮಾಯೆನ್ ಸಿನಿಮಾಗಳು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

Anushka Sharma: ಕೊಹ್ಲಿ ಬರ್ತ್‌ಡೇ ಪ್ರಯುಕ್ತ ಮಗ ಅಕಾಯ್‌ನ ಮೊದಲ ಪೋಸ್ಟ್‌ ಶೇರ್‌ ಮಾಡಿದ ಅನುಷ್ಕಾ ಶರ್ಮಾ