Friday, 25th October 2024

ಅಮೆರಿಕ: ಮನೆಯೊಂದರಲ್ಲಿ 6 ಮಂದಿ ಶವವಾಗಿ ಪತ್ತೆ

ಸೆಕ್ವಾಚಿ: ಅಮೆರಿಕದಲ್ಲಿ ಸೆಕ್ವಾಚಿಯ ಟೆನ್ನೆಸ್ಸಿ ಎಂಬಲ್ಲಿನ ಒಂಟಿ ಮನೆಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ.

ಮನೆಗೆ ಬೆಂಕಿ ಹಚ್ಚಲಾಗಿದ್ದು, ದಾಳಿಯಲ್ಲಿ ಗುಂಡೇಟಿಗೆ ತೀವ್ರ ಗಾಯ ಗೊಂಡಿದ್ದ 7ನೇ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒಂಟಿ ಮನೆಯಲ್ಲಿ ನಡೆದ ಗುಂಡಿನ ದಾಳಿ ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮನೆ ಬೆಂಕಿಗೆ ಆಹುತಿಯಾದಾಗ ಜನರು ನೀಡಿದ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮಕ್ಕಳು ಸೇರಿ 6 ಮಂದಿ ಸಾವನ್ನಪ್ಪಿದ್ದು, ಓರ್ವ ತೀವ್ರ ಗಾಯಗೊಂಡಿದ್ದು ಗೊತ್ತಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಗಾಯಗೊಂಡಾತ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.