ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಕೊರೋನಾ ರೆಸ್ಪಾನ್ಸ್ ಟೀಂಗೆ ಭಾರತೀಯ ಮೂಲದ ವಿದುರ್ ಶರ್ಮಾ ಅವರು ಆಯ್ಕೆಯಾಗಿದ್ದಾರೆ.
ವಿದುರ್ ಶರ್ಮಾ ನೀತಿ ಸಲಹೆಗಾರರನ್ನಾಗಿ ನೇಮಕ ಮಾಡಿ ಶ್ವೇತ ಭವನದಿಂದ ಪ್ರಕಟಣೆ ಹೊರಡಿಸಲಾಗಿದೆ. ಒಬಾಮಾ ಆಡಳಿತದ ಅವಧಿಯಲ್ಲಿ ಶರ್ಮಾ ದೇಶಿಯ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಯಲ್ಲಿ ಪ್ರೊಟೆಕ್ಟ್ ಅವರ್ ಕೇರ್ ನಲ್ಲಿ ಉಪ ಸಂಶೋಧನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಕಾರ್ಯಕ್ರಮವನ್ನ ಮೇಲ್ವಿಚಾರಣೆ ಮಾಡುವ ಸಲುವಾಗಿ ಈ ರೆಸ್ಪಾನ್ಸ್ ತಂಡವನ್ನ ರಚನೆ ಮಾಡಲಾಗಿದೆ.
ಮಿನ್ನೆಸೋಟಾದಲ್ಲಿ ಬೆಳೆದ ಶರ್ಮಾ ಪೋಷಕರು ಭಾರತೀಯ ಮೂಲದವರಾಗಿದ್ದಾರೆ. ವಿದುರ್ ಶರ್ಮಾ ಹಾರ್ವಡ್ ಟಿ.ಹೆಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಲ್ಯೂಯಿಸ್ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.