Sunday, 24th November 2024

ವಿಯೆನ್ನಾ ಉಗ್ರರ ದಾಳಿ: ಮೂವರ ಸಾವು, ಹದಿನೈದು ಮಂದಿಗೆ ಗಾಯ

ವಿಯೆನ್ನಾ: ಆಸ್ಟ್ರಿಯಾ ರಾಜಧಾನಿ ವಿಯೆನ್ನಾದ ಕೆಫೆಗಳು ಮತ್ತು ರೆಸ್ಟೊರೆಂಟ್‌ ಮೇಲೆ ಸೋಮವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಹದಿನೈದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಯೆನ್ನಾ ಪೊಲೀಸರು ಒಬ್ಬ ಉಗ್ರನನ್ನು ಕೊಂದು ಹಾಕಿದ್ದಾರೆ. ಕೆಲವರು ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ನಾನು ಉಗ್ರರ ಕೃತ್ಯದ ಸಂತ್ರಸ್ತನಾಗಿದ್ದೇನೆ. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದವು’ ಎಂದು ಆಸ್ಟ್ರಿಯಾದ ಚಾನ್ಸಲರ್‌ ವಿವರಿಸಿದ್ದಾರೆ.

ವಿಯೆನ್ನಾದ ಯಹೂದಿ ಸಮುದಾಯದ ಮುಖ್ಯಸ್ಥ ಓಸ್ಕರ್ ಡಾಯ್ಚ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ‘ಆದರೆ, ಇದು ಯಹೂದಿಗಳನ್ನು ಗುರಿಯಾಗಿಸಿಕೊಂಡು ಮಾಡಿರುವ ದಾಳಿ ಮಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂದು ಕುರ್ಜ್ ಹೇಳಿದ್ದಾರೆ.

ವಿಯೆನ್ನಾ ನಗರದ ಹೊರವಲಯದಲ್ಲಿರುವ ಪ್ರಮುಖ ಯಹೂದಿಗಳ ಪ್ರಾರ್ಥನಾ ಮಂದಿರದ ಮೇಲೆ ಮೊದಲು ಗುಂಡಿನ ದಾಳಿ ನಡೆಯಿತು. ರಾತ್ರಿ ವೇಳೆಯಾದ್ದರಿಂದ ಮಂದಿರವನ್ನು ಮುಚ್ಚಲಾಗಿತ್ತು. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.