Saturday, 14th December 2024

Viral News: ನಾರ್ವೆಯ ಯುವರಾಜನೊಂದಿಗೆ ಹ್ಯಾಂಡ್‍ಶೇಕ್‌ ಮಾಡಲೊಪ್ಪದ ಮುಸ್ಲಿಂ ಮಹಿಳೆ!

Viral News

ನಾರ್ವೆ: ಇತ್ತೀಚೆಗೆ ನಾರ್ವೆಯಲ್ಲಿ ನಡೆದ ಪೌರತ್ವ ಸಮಾರಂಭದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಉಲ್ಲೇಖಿಸಿ ನಾರ್ವೆಯ ಯುವರಾಜನೊಂದಿಗೆ ಹ್ಯಾಂಡ್‍ಶೇಖ್‍ ಮಾಡಲು ನಿರಾಕರಿಸಿದ್ದಾರೆ.  ಈ ನಿರಾಕರಣೆಯು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ. ಇದು ಬಹುಸಂಸ್ಕೃತಿಯ ಸಮಾಜಗಳಲ್ಲಿ ವೈಯಕ್ತಿಕ ನಂಬಿಕೆ ಮತ್ತು ಸಾಮಾಜಿಕ ಪದ್ಧತಿಗಳ ನಡುವಿನ ಅಂತರವನ್ನು ಬೆಳಕಿಗೆ ತರುತ್ತದೆ.

ಮುಸ್ಲಿಂ ಸಂಪ್ರದಾಯದಲ್ಲಿ ಸಂಬಂಧವಿಲ್ಲದ ಪುರುಷರು ಮತ್ತು ಮಹಿಳೆಯರ ನಡುವಿನ ದೈಹಿಕ ಸ್ಪರ್ಶವನ್ನು ಹೆಚ್ಚಾಗಿ “ಹರಾಮ್” (ನಿಷೇಧಿತ) ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮಹಿಳೆ ತನ್ನ ಧರ್ಮದ ನಂಬಿಕೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಯುವರಾಜನಿಗೆ ಹ್ಯಾಂಡ್‍ಶೇಕ್‌ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಆದರೆ ನಾರ್ವೆ ಮತ್ತು ಇತರ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಹ್ಯಾಂಡ್‍ಶೇಕ್‌ ಅನ್ನು ಗೌರವ ಮತ್ತು ಸೌಜನ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಮಾರಂಭಗಳಲ್ಲಿ ಹ್ಯಾಂಡ್‍ಶೇಕ್‌ ಮಾಡುವ ಮೂಲಕ ಒಬ್ಬರು ಇನ್ನೊಬ್ಬರಿಗೆ ಗೌರವ ನೀಡುತ್ತಾರೆ.

ಈ ಘಟನೆಯು ಧರ್ಮಗಳ ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ನಿಯಮಗಳ ಮೂಲಕ ಮಹಿಳೆಯರ ಮೇಲೆ ನಡೆಯುವ ಶೋಷಣೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಹ್ಯಾಂಡ್‍ಶೇಕ್‌ ಮಾಡುವುದು ಗೌರವದ ಸಂಕೇತವೆಂದುಕೊಂಡವರಿಗೆ  ಆ ಮಹಿಳೆ ಮಾಡಿದ್ದು ತಪ್ಪು ಎಂದು ಕಾಣಿಸುತ್ತದೆ, ಆದರೆ  ಮುಸ್ಲಿಂ ಧರ್ಮದ ನಂಬಿಕೆಯನ್ನು ಪಾಲಿಸುವ ಆ ಮಹಿಳೆಯ ಈ ನಡವಳಿಕೆ ಸರಿ ಎಂದು ಅನೇಕರು ವಾದಿಸಿದ್ದಾರೆ.

ಇದನ್ನೂ ಓದಿ:1 ವರ್ಷದ ಕಂದನಿಗೆ ಕಪಾಳಮೋಕ್ಷ ಮಾಡಿದ ದುಷ್ಟ ಅರೆಸ್ಟ್

ಈ ಘಟನೆಯ ಬಗ್ಗೆ ಜನರು ಮಿಶ‍್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಬೇರೆಯವರೊಂದಿಗೆ ಹ್ಯಾಂಡ್‍ಶೇಕ್‌ ಮಾಡಬೇಡಿ ಎಂದು ಎಂದಿಗೂ ಇಸ್ಲಾಂ ಹೇಳುವುದಿಲ್ಲ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. ಹಾಗೆಯೇ ಮುಸ್ಲಿಂ ಧರ್ಮದಲ್ಲಿ ಹರಾಮ್ ಅಂದರೆ ಏನು ಎಂಬುದನ್ನು ಕೆಲವರು ಕಾಮೆಂಟ್ ಮೂಲಕ  ವಿವರಿಸಿ ತಿಳಿಸಿದ್ದಾರೆ. ಕೆಲವರು ಸಮಾಜದಲ್ಲಿ ಹ್ಯಾಂಡ್‍ಶೇಕ್‌ ಮಾಡಲು ತಿರಸ್ಕರಿಸಿದರೆ ಇದು ಮತ್ತೊಬ್ಬರಿಗೆ ಅವಮಾನ ಮಾಡಿದಂತಾಗುತ್ತದೆ. ಹಾಗಾಗಿ ಕೆಲಸದ ಸ್ಥಳಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಹ್ಯಾಂಡ್‍ಶೇಕ್‌ ಮಾಡಲೇಬೇಕಾದ ಪರಿಸ್ಥಿತಿ ಬಂದರೆ ಅದನ್ನು ನೀವು ಮಾಡಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ.