ಇಸ್ಲಾಮಾಬಾದ್: ಇತ್ತೀಚೆಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿರುತ್ತವೆ. ಕೆಲವರು ವೈರಲ್ ಆಗಲೆಂದೇ ಏನಾದರೂ ಮಾಡುತ್ತಿರುತ್ತಾರೆ. ಇಲ್ಲೊಬ್ಬ ಮಹಿಳೆ(Women) ಅಂಗಡಿಯಲ್ಲಿ ತನಗೆ ಬೇಕಾದ ವಸ್ತುಗಳನ್ನು ಖರೀದಿಸಿ ಅದಕ್ಕೆ ಹಣ ನೀಡದೆ ಅಂಗಡಿ ಮಾಲೀಕನಿಗೆ(Shop Keeper) ಮುತ್ತು(Kiss) ಕೊಡುವಂತೆ ಹೇಳಿದ್ದಾಳೆ. ಈ ಕುರಿತ ವಿಡಿಯೊ ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.(Viral News)
ಈ ಘಟನೆಯು ಇತ್ತೀಚೆಗೆ ಪಾಕಿಸ್ತಾನದಲ್ಲಿ(Pakistan) ನಡೆದಿದೆ ಎನ್ನಲಾಗಿದೆ. ಮಹಿಳೆಯೊಬ್ಬಳು ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದಾಳೆ. ಅಂಗಡಿಯಲ್ಲಿ ಸಾವಿರ ರುಪಾಯಿ ವೆಚ್ಚದ ಹತ್ತಾರು ವಸ್ತುಗಳನ್ನೆಲ್ಲ ಖರೀದಿಸಿದ್ದಾಳೆ. ಕೊನೆಗೆ ಅಂಗಡಿ ಮಾಲೀಕ ಇಷ್ಟು ಬಿಲ್ ಆಗಿದೆ ಎಂದಿದ್ದು,ಹಣ ಕೊಡುವಂತೆ ಕೇಳಿದ್ದಾನೆ. ನನ್ನ ಬಳಿ ಹಣವಿಲ್ಲ ಎಂದು ಹೇಳಿರುವ ಮಹಿಳೆ ಅಂಗಡಿಯವನಿಗೆ ಕಿಸ್ ಆಫರ್ ಮಾಡಿದ್ದಾಳೆ. ಅಂಗಡಿಯವನು ಎರಡು ಮೂರು ಬಾರಿ ಎಳೆದುಕೊಂಡು ಮುತ್ತು ಕೊಟ್ಟಿದ್ದಾನೆ. ಈ ಮುತ್ತುಗಳಿಗೆ ಹಣವನ್ನು ವಜಾ ಮಾಡಿಕೊಳ್ಳಿ ಎಂದು ಮಹಿಳೆ ಹೇಳಿದ್ದಾಳೆ ಎನ್ನಲಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು,ನೆಟ್ಟಿಗರು “ಪಾಕಿಸ್ತಾನದಲ್ಲಿ ಬಡತನ ಕಿತ್ತು ತಿನ್ನುತ್ತಿದೆ” “ಅಬ್ಬಬ್ಬಾ ಲಾಟರಿ” ಎಂದೆಲ್ಲ ಕಾಮೆಂಟ್ಸ್ ಹಾಕಿದ್ದಾರೆ.
ವಾಕಿಂಗ್ ಮಾಡುತ್ತಿದ್ದ ಮಹಿಳೆಗೆ ಕಿಸ್ ಕೊಟ್ಟ ಕಾಮುಕ
ಕೆಲ ತಿಂಗಳುಗಳ ಹಿಂದೆ, ಬೆಂಗಳೂರಿನ ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ವರದಿಯಾಗಿತ್ತು. ಮಹಿಳೆಗೆ ಕಿಸ್ ಕೊಟ್ಟು ಆತ ಪರಾರಿಯಾಗಿದ್ದ. ಈ ವಿಡಿಯೊ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬೆಳಗಿನ ಜಾವ ಮಹಿಳೆಯು ಮನೆಯ ಬಳಿಯಲ್ಲೇ ವಾಕಿಂಗ್ ಮಾಡುವಾಗ ಘಟನೆ ನಡೆದಿದೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು ಎನ್ನಲಾಗಿದೆ.
ಮಹಿಳೆಯು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಜೋರಾಗಿ ಕೂಗುತ್ತಾ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹಾಗೆಯೇ, ನಗರದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿತ್ತು. ಜನ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನೂ ಓದಿ:Nehru’s Letters: ನೆಹರು ಪತ್ರಗಳನ್ನು ಹಿಂದಿರುಗಿಸುವಂತೆ ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಸೂಚನೆ