ಭಾರೀ ಗಾತ್ರದ ಪೆಂಗ್ವಿನ್ ಮರಿಯೊಂದು (Baby Penguin) ಈಗ ಎಲ್ಲರ ಗಮನ ಸೆಳೆದಿದೆ. ಇದರ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral News) ಆಗಿದ್ದು, ಸಾಕಷ್ಟು ನೆಟ್ಟಿಗರನ್ನು ಆಕರ್ಷಿಸಿದೆ.
ಸುಮಾರು 22.5 ಕೆ.ಜಿ. ತೂಕವಿರುವ ಒಂಬತ್ತು ತಿಂಗಳ ಮರಿ ಪೆಂಗ್ವಿನ್ ಪೆಸ್ಟೊ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಈವರೆಗೆ ನೋಡಿರುವ ಅತೀ ದೊಡ್ಡ ಪೆಂಗ್ವಿನ್ ಆಗಿದೆ. ಮೈಕೆಲಾ ಸ್ಮೇಲ್ ಎಂಬವರು ಈ ಪೆಂಗ್ವಿನ್ ಅನ್ನು ಸಾಕುತ್ತಿದ್ದಾರೆ.
ಕಂದು ಬಣ್ಣದ ಈ ಮರಿ ಪೆಂಗ್ವಿನ್ ಇತರ ಪೆಂಗ್ವಿನ್ ಗಳಿಗಿಂತ ಎತ್ತರವಾಗಿದೆ. ಬೃಹತ್ ತೂಕಕ್ಕಾಗಿ ಈಗ ದೇಶಾದ್ಯಂತ ಖ್ಯಾತಿ ಪಡೆದಿದೆ. ಸೀ ಲೈಫ್ ಮೆಲ್ಬೋರ್ನ್ ಇದುವರೆಗೆ ನೋಡಿದ ಅತೀ ದೊಡ್ಡ ಪೆಂಗ್ವಿನ್ ಆಗಿರುವ ಇದು ದಿನಕ್ಕೆ 25 ಮೀನುಗಳನ್ನು ಆಹಾರವಾಗಿ ಸೇವಿಸುತ್ತದೆ.
ಪೆಸ್ಟೊ ಮೊಟ್ಟೆಯೊಡೆದು ಹೊರಬಂದಾಗ 200 ಗ್ರಾಂ ತೂಕವಿತ್ತು. ಕಿಂಗ್ ಪೆಂಗ್ವಿನ್ ಮರಿಗಳು ತಂಪಾದ ಅಂಟಾರ್ಕ್ಟಿಕ್ ತಾಪಮಾನದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೃಹತ್ ಪ್ರಮಾಣದಲ್ಲಿರುತ್ತವೆ ಎಂದು ಸ್ಮೇಲ್ ತಿಳಿಸಿದ್ದಾರೆ.
ಪೆಸ್ಟೊ ತಳಿಯೇ ಅದರ ಬೃಹತ್ ಗಾತ್ರಕ್ಕೆ ಕಾರಣವಾಗಿರುತ್ತದೆ. ಅದರ ಪೂರ್ವಜರು ಅಕ್ವೇರಿಯಂನಲ್ಲಿ ಇರಿಸಿರುವ ಕೆಲವು ದೊಡ್ಡ ಮತ್ತು ಹಳೆಯ ಪೆಂಗ್ವಿನ್ ಗಳಾಗಿವೆ.
ಮರಿಗಳಿಗೆ ವಯಸ್ಸಾದಂತೆ ಅವುಗಳು ತಮ್ಮ ನಯವಾದ ಕಂದು ಬಣ್ಣದ ಹೊರ ಪದರವನ್ನು ಚೆಲ್ಲುತ್ತವೆ. ಇವುಗಳಲ್ಲಿ ಕಿಂಗ್ ಪೆಂಗ್ವಿನ್ಗಳು ಅಂಟಾರ್ಕ್ಟಿಕಾದ ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅವುಗಳ ಸಂಖ್ಯೆಯು ಸುಮಾರು 1.6 ಮಿಲಿಯನ್ ನಷ್ಟಿವೆ.
Eco Friendly Home: 16,000 ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರಸ್ನೇಹಿ ಮನೆ ನಿರ್ಮಿಸಿದ ಯುವತಿಯರು!
19 ಮತ್ತು 20 ನೇ ಶತಮಾನಗಳಲ್ಲಿ ಕಿಂಗ್ ಪೆಂಗ್ವಿನ್ ಸಂಖ್ಯೆಯು ಬಹುತೇಕ ನಾಶವಾಯಿತು. ಯಾಕೆಂದರೆ ಅವುಗಳನ್ನು ಮಾಂಸ, ಎಣ್ಣೆಗಾಗಿ ಹೆಚ್ಚು ಬೇಟೆಯಾಡಲಾಯಿತು.