Thursday, 12th December 2024

Viral Video: 1 ವರ್ಷದ ಕಂದನಿಗೆ ಕಪಾಳಮೋಕ್ಷ ಮಾಡಿದ ದುಷ್ಟ ಅರೆಸ್ಟ್

ಮಕ್ಕಳು ದೇವರ ಸಮಾನ ಎನ್ನುತ್ತಾರೆ. ಆದರೆ ಇತ್ತೀಚೆಗೆ ಎಳೆ ಮಗುವಿನ ಮೇಲೆ ವಿಕೃತಿ ಮೆರೆಯುವವರೂ ಇದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ಸ್ಪೇನ್‍ನ ಬಾರ್ಸಿಲೋನಾದಲ್ಲಿ ನಡೆದಿದಿದೆ. 31 ವರ್ಷದ ಉತ್ತರ ಆಫ್ರಿಕಾದ ವ್ಯಕ್ತಿಯೊಬ್ಬ ತನ್ನ ಹೆತ್ತವರೊಂದಿಗೆ ವಾಕಿಂಗ್‍ಗೆ ತೆರಳಿದ್ದ ಒಂದು ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ವ್ಯಕ್ತಿ ಪುಟ್ಟ ಮಗುವಿನ ಮೇಲೆ ಹಲ್ಲೆ ಮಾಡುತ್ತಿರುವ ಘೋರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

Viral Video

ಅಕ್ಟೋಬರ್ 7ರಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಈ ವಿಡಿಯೊದಲ್ಲಿ, ಆರೋಪಿ ವ್ಯಕ್ತಿಯು ಮಗುವಿನ ಪೋಷಕರ ಬಳಿ ಬಂದು ಸಿಕ್ಕಾಪಟ್ಟೆ ಕಿರುಚಾಡಿದ್ದಾನೆ. ನಂತರ ಕೋಪಗೊಂಡ ಆತ ಅಲ್ಲಿದ್ದ ಆ ದಂಪತಿಯ ಒಂದು ವರ್ಷದ ಚಿಕ್ಕ ಮಗುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆತ ಮಗುವಿನ ಮೇಲೆ ಹಲ್ಲೆ ಮಾಡಿದ್ದನ್ನು ಕಂಡು ಪೋಷಕರು ದಂಗಾಗಿದ್ದಾರೆ. ತಕ್ಷಣ ಮಗುವಿನ ತಂದೆ ಮಗುವನ್ನು ಎತ್ತಿಕೊಂಡು ಆತನಿಂದ ದೂರ ಕರೆದುಕೊಂಡು ಹೋಗಿದ್ದಾರೆ. ಆಗ ಆತ “ಮುಂದಿನ ಬಾರಿ ನಾನು ಅದನ್ನು ಕೊಲ್ಲುತ್ತೇನೆ!” ಎಂದು ಬೆದರಿಕೆಯೊಡ್ದೆಡಿದ್ದಾನೆ.

ವರದಿ ಪ್ರಕಾರ ಆ ದಂಪತಿ ರಜೆಗಾಗಿ ಬಾರ್ಸಿಲೋನಾಗೆ ಪ್ರವಾಸಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ, ಪೊಲೀಸ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಹೆನ್ರಿ ಆರ್.ಸಿ ಎಂದು ಗುರುತಿಸಲಾಗಿದೆ.  ಈಗಾಗಲೇ ಆತ ಇದೇ ರೀತಿಯಲ್ಲಿ ಮೂರು ದಾಳಿಗಳನ್ನು ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಬಾರ್ಸಿಲೋನಾದಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.

Viral Video

ಇದನ್ನೂ ಓದಿ:ಮಲಗಿದ್ದ ನಾಯಿಮರಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ದುರುಳರು

ಇತ್ತೀಚೆಗೆ ಬಾರ್ಸಿಲೋನಾ ನಿವಾಸಿಗಳು ಪ್ರವಾಸೋದ್ಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮದ ಒಳಹರಿವಿಗಾಗಿ ಸರಕುಗಳ ಬೆಲೆ ಏರಿಕೆಯ ವಿರುದ್ಧ ಬಾರ್ಸಿಲೋನಾ ನಿವಾಸಿಗಳು ಪ್ರತಿಭಟಿಸಿದ್ದಾರೆ. ಬಾರ್ಸಿಲೋನಾ ಹೆಚ್ಚಾಗಿ ಪ್ರವಾಸಿಗರಿಂದ ಪ್ರಯೋಜನ ಪಡೆಯುತ್ತಿದೆ. ಆದ್ದರಿಂದ ಅವರು ಪ್ರತಿ ಸರಕುಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಈ ಕ್ರಮದಿಂದ ಬಾರ್ಸಿಲೋನಾ ನಿವಾಸಿಗಳಿಗೆ ಸಮಸ್ಯೆಯಾಗಿದೆ ಎಂದು ಹೇಳುತ್ತಾ ಜನರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದಿದ್ದಾರೆ ಮತ್ತು ಈ ಸಮಸ್ಯೆಯನ್ನು ನಿಭಾಯಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ  ಒತ್ತಾಯಿಸಿದ್ದಾರೆ.