Sunday, 17th November 2024

Viral Video: ಆರಾಮಾಗೇ ಟೇಕ್‌ ಆಫ್‌ ಆಗಿದ್ದ ವಿಮಾನದಲ್ಲಿ ಏಕಾಏಕಿ ಆಗಿದ್ದೇನು? ಪ್ರಯಾಣಿಕರೆಲ್ಲಾ ಕಿರುಚಾಡಿದ್ದೇಕೆ? ಶಾಕಿಂಗ್‌ ವಿಡಿಯೊ ವೈರಲ್‌

Viral Video

ಗ್ರೀನ್‌ಲ್ಯಾಂಡ್‌: ಹವಾಮಾನ ವೈಪರಿತ್ಯದಿಂದಾಗಿ (Turbulence) ವಿಮಾನದೊಳಗಿನ ವಸ್ತುಗಳು ಹಾರಲು ಪ್ರಾರಂಭಿಸಿದ್ದು, ಪ್ರಯಾಣಿಕರು ಆತಂಕಗೊಂಡ ಘಟನೆ ಸ್ಟಾಕ್‌ಹೋಮ್‌ನಿಂದ ಮಿಯಾಮಿಗೆ (Stockholm to Miami) ಸಂಚರಿಸುತ್ತಿದ್ದ ವಿಮಾನದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ (Viral Video) ಆಗಿದೆ.

ಸ್ಟಾಕ್‌ಹೋಮ್‌ನಿಂದ ಮಿಯಾಮಿಗೆ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ವಿಮಾನವು (Scandinavian Airlines ) ಗ್ರೀನ್‌ಲ್ಯಾಂಡ್‌ನಲ್ಲಿದ್ದಾಗ (Greenland) ವಾಯು ಪ್ರಕ್ಷುಬ್ಧತೆಗೆ ಒಳಗಾಯಿತು. ಇದರಿಂದ ವಿಮಾನವನ್ನು ಕೋಪನ್ ಹ್ಯಾಗನ್ ಗೆ ತಿರುಗಿಸಲಾಯಿತು. ವಿಮಾನದಲ್ಲಿ ಪ್ರಯಾಣಿಸುವಾಗ ಸಾಮಾನ್ಯವಾಗಿ ವಾಯು ಪ್ರಕ್ಷುಬ್ಧತೆ ಉಂಟಾಗುತ್ತದೆ. ಹೆಚ್ಚಿನ ಬಾರಿ ಇದು ದೊಡ್ಡ ತೊಂದರೆಯನ್ನು ಉಂಟು ಮಾಡುವುದಿಲ್ಲ. ಆದರೆ ಕೆಲವೊಮ್ಮೆ ಭಾರಿ ತೊಂದರೆಯುಂಟಾಗಿ ವಿಮಾನವು ಅಪಘಾತಕ್ಕೆ ಈಡಾಗುವ ಸಂಭವವಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನವು ಬಲವಾದ ವಾಯು ಪ್ರಕ್ಷುಬ್ಧತೆಗೆ ಒಳಗಾಗಿರುವುದನ್ನು ತೋರಿಸಿದೆ. ವಿಮಾನದ ಕ್ಯಾಬಿನ್‌ನೊಳಗೆ ವಸ್ತುಗಳು ಹಾರಾಡುತ್ತಿರುವುದನ್ನು ಕಂಡ ಪ್ರಯಾಣಿಕರು ಭಯಭೀತರಾಗಿ ಕಿರುಚುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸ್ಟಾಕ್‌ಹೋಮ್‌ನಿಂದ ಮಿಯಾಮಿಗೆ ಪ್ರಯಾಣಿಸುತ್ತಿದ್ದ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ವಿಮಾನ ಎಸ್ ಎಎಸ್ ಎ330 ರಲ್ಲಿ ಈ ಘಟನೆ ಸಂಭವಿಸಿದೆ. ತೀವ್ರ ವಾಯು ಪ್ರಕ್ಷುಬ್ಧತೆಯ ಕಾರಣದಿಂದ ಸ್ಕ್ಯಾಂಡಿನೇವಿಯನ್ ಏರ್ ಲೈನ್ಸ್ ವಿಮಾನವನ್ನು ಕೋಪನ್ ಹ್ಯಾಗನ್ ಗೆ ತಿರುಗಿಸಲು ನಿರ್ಧರಿಸಿತು.

Israel-Hezbollah war: ಇಸ್ರೇಲ್ ಪ್ರಧಾನಿ ನೆತನ್ಯಾಹು ನಿವಾಸದ ಮೇಲೆ ಮತ್ತೆ ಹೆಜ್ಬುಲ್ಲಾ ಅಟ್ಯಾಕ್‌- ವಿಡಿಯೊ ಇದೆ

ವಿಮಾನವನ್ನು ಸರಿಯಾಗಿ ಪರಿಶೀಲನೆ ನಡೆಸಲು ಮತ್ತು ವಿಮಾನಕ್ಕೆ ಆದ ಹಾನಿಯ ಬಗ್ಗೆ ತೀರ್ಮಾನಿಸಲು ಮಿಯಾಮಿಯಲ್ಲಿ ಸ್ವತ್ತುಗಳಿಲ್ಲದ ಕಾರಣ ವಿಮಾನವನ್ನು ಕೋಪನ್ ಹ್ಯಾಗನ್‌ಗೆ ಕೊಂಡೊಯ್ಯಲು ನಿರ್ಧರಿಸಲಾಯಿತು. ಕೋಪನ್ ಹ್ಯಾಗನ್ ವಿಮಾನ ನಿಲ್ದಾಣದಲ್ಲಿ ತಪಾಸಣೆಗಾಗಿ ಅತ್ಯುತ್ತಮ ಸೌಲಭ್ಯಗಳು ಮತ್ತು ಸಿಬ್ಬಂದಿ ಲಭ್ಯವಿದ್ದರು ಎಂದು ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ತಿಳಿಸಿದೆ.