ಹಮಾಸ್ ಮುಖ್ಯಸ್ಥ ( Hamas chief) ಯಾಹ್ಯಾ ಸಿನ್ವಾರ್‌ನನ್ನು (Yahya Sinwar) ಇತ್ತೀಚೆಗೆಷ್ಟೇ ಇಸ್ರೇಲ್ (Israel Attack) ಸೇನೆ ಕೊಂದು ಹಾಕಿತ್ತು. 2023ರ ಅಕ್ಟೋಬರ್ 7ರಂದು ಇಸ್ರೇಲ್ ಸೇನೆ ಹಮಾಸ್ ಮೇಲೆ ದಾಳಿ ನಡೆಸುವ ಮೊದಲು ಯಾಹ್ಯಾ ಸಿನ್ವಾರ್ ತನ್ನ ಪತ್ನಿ, ಮಕ್ಕಳೊಂದಿಗೆ ಓಡಿ ಹೋಗುತ್ತಿರುವ ವಿಡಿಯೋವನ್ನು (Viral Video) ಇಸ್ರೇಲ್ ಸೇನೆ (Israel Army) ಬಿಡುಗಡೆ ಮಾಡಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಬೇರೊಂದು ಕಾರಣಕ್ಕೆ ವೈರಲ್ ಆಗಿದೆ. ಅದುವೆ ಸಿನ್ವಾರ್ ಪತ್ನಿಯ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಗ್.
ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅವಿಚಾಯ್ ಅಡ್ರೇ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ಯಾಹ್ಯಾ ಸಿನ್ವಾರ್ ಹೊಂದಿದ್ದ ಐಷಾರಾಮಿ ವಸ್ತುಗಳು ಮತ್ತು ಗಾಜಾದಲ್ಲಿನ ಭೀಕರ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. ಗಾಜಾದಲ್ಲಿ ಅನೇಕರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೆಣಗಾಡುತ್ತಿದ್ದಾರೆ. ಆದರೆ ಸಿನ್ವಾರ್ ಅವರ ಪತ್ನಿ ದುಬಾರಿ ಹ್ಯಾಂಡ್ ಬ್ಯಾಗ್ ಹೊತ್ತುಕೊಂಡು 2023ರ ಅಕ್ಟೋಬರ್ 6 ರಂದು ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಸುರಂಗ ಪ್ರವೇಶಿಸಿದ್ದಾರೆ ಎಂದು ಅಡ್ರೇ ಹೇಳಿದ್ದಾರೆ.
هل زوجة السنوار دخلت معه إلى النفق في السادس من أكتوبر وبحوزتها حقيبة لشركة بيركين التي تقدر كلفتها بنحو 32 ألف دولار؟! أترك لكم التعليق.
— افيخاي ادرعي (@AvichayAdraee) October 19, 2024
بينما لا يملك سكان غزة الأموال الكافية لخيمة أو للمواد الأساسية نرى أمثلة كثيرة لحب يحيي السنوار وزوجته الخاص للأموال… pic.twitter.com/sGft4Qg9s8
ಈ ವಿಡಿಯೋದಲ್ಲಿ ಅಕ್ಟೋಬರ್ 7ರ ದಾಳಿಗೆ ಕೆಲವೇ ಗಂಟೆಗಳ ಮೊದಲು ಸಿನ್ವಾರ್ ಮತ್ತು ಅವರ ಕುಟುಂಬ ಓಡಿಹೋಗುವುದನ್ನು ಕಾಣಬಹುದು. ಸುರಂಗದೊಳಗೆ ಸಿನ್ವಾರ್ ಸರಳವಾದ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಆತನ ಇಬ್ಬರು ಮಕ್ಕಳು ಮತ್ತು ಹೆಂಡತಿ ಜೊತೆಗಿದ್ದರು. ಯಾಹ್ಯಾ ಸಿನ್ವಾರ್ ಪತ್ನಿ 32,000 ಡಾಲರ್ ಮೌಲ್ಯದ ಅಂದರೆ ಸರಿಸುಮಾರು 27 ಲಕ್ಷ ರೂ. ನ ಹ್ಯಾಂಡ್ ಬ್ಯಾಗ್ ಹಿಡಿದಿರುವುದನ್ನು ಚಿತ್ರದಲ್ಲಿ ಕಾಣಬಹುದು.
ಅವರು ಸುರಂಗದೊಳಗೆ ಹಲವು ಗಂಟೆಗಳ ಕಾಲ ಸಮಯ ಕಳೆದಿದ್ದಾರೆ. ಅಗತ್ಯ ವಸ್ತುಗಳನ್ನು ಈ ಸಂದರ್ಭದಲ್ಲಿ ಅವರು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಶೌಚಾಲಯ, ಸ್ನಾನಗೃಹ ಮತ್ತು ಅಡುಗೆ ಮನೆಯನ್ನು ಹೊಂದಿರುವ ಭೂಗತ ಸುರಂಗದೊಳಗೆ ಆಹಾರ ಸಾಮಗ್ರಿ, ನಗದು ಮತ್ತು ಕೆಲವು ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ವಿಡಿಯೋ ಬಿಡುಗಡೆಯಾದ ಕೆಲವೇ ದಿನಗಳ ಬಳಿಕ ಸಿನ್ವಾರ್‌ನನ್ನು ದಕ್ಷಿಣ ಗಾಜಾ ನಗರವಾದ ರಫಾದಲ್ಲಿ ಕೊಲ್ಲಲಾಯಿತು.
🎥DECLASSIFIED FOOTAGE:
— LTC Nadav Shoshani (@LTC_Shoshani) October 19, 2024
Sinwar hours before the October 7 massacre: taking down his TV into his tunnel, hiding underneath his civilians, and preparing to watch his terrorists murder, kindap and rape. pic.twitter.com/wTAF9xAPLU
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಬ್ಯಾಗ್ ಅಷ್ಟೊಂದು ದುಬಾರಿಯಲ್ಲ. ಈ ಚಿತ್ರವನ್ನು ಈಜಿಪ್ಟ್, ಜೋರ್ಡಾನ್ ಅಥವಾ ಟರ್ಕಿಯಲ್ಲಿರುವ ಯಾವುದೇ ಸಿರಿಯನ್ ಶೂ ಕಾರ್ಖಾನೆಗೆ ಕಳುಹಿಸಿ. ಅವರು ಇದೇ ಬ್ರ್ಯಾಂಡ್‌ನ ನಕಲಿ ಬ್ಯಾಗ್ ಅನ್ನು ಕೇವಲ 10 ಡಾಲರ್ ಗೆ ತಯಾರಿಸುತ್ತಾರೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
Viral Video: ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ; ವಿಡಿಯೊ ವೈರಲ್
ಯಾಹ್ಯಾ ಸಿನ್ವಾರ್ ಸಂಪತ್ತು
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ನಿವ್ವಳ ಸಂಪತ್ತನ್ನು ಹೊಂದಿದ್ದ ಎನ್ನಲಾಗಿದೆ. ಗಾಜಾ ಜನರ ಸಂಕಷ್ಟದ ನಡುವೆ ಆತನ ಕುಟುಂಬದ ಸಂಪತ್ತಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದು ಸಾಕಷ್ಟು ಮಂದಿಯ ಗಮನವನ್ನು ಸೆಳೆದಿದೆ. ಕೆಲವು ಬಳಕೆದಾರರು ಈ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.