Monday, 16th December 2024

Viral Video: ಸಾಂತಾಕ್ಲಾಸ್ ವೇಷ ಧರಿಸಿ ಚಿಮಣಿಯೊಳಗೆ ಅಡಗಿ ಕುಳಿತ ಡ್ರಗ್ ಡೀಲರ್! ಈ ವಿಡಿಯೊ ಭಾರೀ ವೈರಲ್‌

Drug Dealer Arrest

ನ್ಯೂಯಾರ್ಕ್‌: ಕ್ರಿಸ್ಮಸ್ ಹಬ್ಬಕ್ಕೂ ಮುನ್ನ ಸಾಂತಾಕ್ಲಾಸ್ ಬಂದು ತಮಗೆ ಉಡುಗೊರೆಗಳನ್ನು ನೀಡುತ್ತಾರೆ ಎಂದು ಪುಟಾಣಿ ಮಕ್ಕಳು ಕಾಯುತ್ತಿರುತ್ತಾರೆ. ಆದರೆ ಈಶಾನ್ಯ ಅಮೆರಿಕದ ಮ್ಯಾಸಚೂಸೆಟ್ಸ್‌ ರಾಜ್ಯದಲ್ಲಿ ಡ್ರಗ್‍ ಡೀಲರ್‌ ಒಬ್ಬ ಸಾಂತಾಕ್ಲಾಸ್‍ನ ವೇಷ ಧರಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿಮಣಿಯಲ್ಲಿ ಅಡಗಿಕೊಂಡಿದ್ದ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ(Drug Dealer Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮ್ಯಾಸಚೂಸೆಟ್ಸ್‌ನ ಫಾಲ್ ರಿವರ್‌ನಲ್ಲಿ ಈ ಘಟನೆ ನಡೆದಿದ್ದು, ಫಾಲ್ ರಿವರ್ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿಗಳು ಮಾದಕವಸ್ತು ಹೊಂದಿರುವ ಮತ್ತು ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಮನೆಯನ್ನು ಪರಿಶೀಲಿಸಲು ಸ್ಥಳಕ್ಕೆ ತಲುಪಿದಾಗ ಈ ಘಟನೆ ನಡೆದಿದೆ. ಪೊಲೀಸರನ್ನು ನೋಡಿದ ಮನೆಯವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಈ ಸರ್ಚ್ ವಾರಂಟ್ ಅರ್ಜಿಯನ್ನು ತೆಗೆದುಕೊಂಡು  ಪೊಲೀಸರು ಆರೋಪಿಗಳ ಮನೆಗೆ ಹೋದಾಗ  ಇಬ್ಬರು ಪುರುಷರು ಮನೆಯಿಂದ ಮೇಲ್ಛಾವಣಿಯ ಮೂಲಕ ಓಡಿಹೋಗಿದ್ದಾರೆ. ಆದರೆ ಶಂಕಿತರಲ್ಲಿ ಒಬ್ಬನು ಸಾಂತಾಕ್ಲಾಸ್‍ನ ವೇಷ ಧರಿಸಿಕೊಂಡು ಬಂಧನದಿಂದ ತಪ್ಪಿಸಿಕೊಳ್ಳಲು ಚಿಮಣಿಯೊಳಗೆ ಅಡಗಿಕೊಂಡಿದ್ದಾನಂತೆ.  ಆದರೆ ಆ ವ್ಯಕ್ತಿಗೆ ಚಿಮಣಿಯಿಂದ ಹೊರಗೆ ಬರಲು ಸಾಧ್ಯವಾಗದೆ ಸಹಾಯಕ್ಕಾಗಿ ಕೂಗಿದ್ದಾನೆ. ಕೊನೆಗೆ ಪೊಲೀಸ್ ಅಧಿಕಾರಿಗಳು ಅವನನ್ನು ಹೊರಗೆ ತೆಗೆದು ಬಂಧಿಸಿದ್ದಾರೆ. ರಾಬರ್ಟ್ ಲ್ಯಾಂಗ್ಲೈಸ್ (ವಯಸ್ಸು 33), ಸಾಂತಾಕ್ಲಾಸ್‍ನ ವೇಷಧರಿಸಿ  ಚಿಮಣಿಯೊಳಗೆ ಅಡಗಿಕೊಳ್ಳಲು ಪ್ರಯತ್ನಿಸಿದ ಆರೋಪಿ.  

ಈ ಸುದ್ದಿಯನ್ನೂ ಓದಿ:‘ಬೆರಳುಗಳು ಕಾಣೆಯಾಗಿವೆ’ ಎಂದು ದೂರು ಕೊಟ್ಟ ಭೂಪಾ! ಪೊಲೀಸ್‌ ವಿಚಾರಣೆ ವೇಳೆ ಈತನ ಕಿತಾಪತಿ ಬಯಲು

ಕ್ಲಾಸ್ ಬಿ ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ರಾಬರ್ಟ್ ಲ್ಯಾಂಗ್ಲೈಸ್ ಜೊತೆಗಿದ್ದ ತನಿಶಾ ಇಬೆ (ವಯಸ್ಸು 32) ಅವನನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.