Friday, 15th November 2024

Viral Video: ಸಂಸತ್​ನಲ್ಲಿ ಮಸೂದೆಯ ಪ್ರತಿ ಹರಿದು ಕುಣಿದು ಕುಪ್ಪಳಿಸಿದ ಸಂಸದೆ; ಭಾರೀ ವೈರಲಾಗ್ತಿದೆ ಈ ವಿಡಿಯೊ

ನ್ಯೂಜಿಲೆಂಡ್: ರಾಜಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಯುವ ಸಮೂಹ ತೊಡಗಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ಕಡೆ ಯುವ ಸಮೂಹ ರಾಜಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ಸಂಸತ್ತಿನ ಅತೀ ಕಿರಿಯ ಸಂಸದೆಹಾನಾ ರಾಫಿಟಿ ಮೈಪಿ ಕ್ಲಾರ್ಕ್‌ ಭಾರಿ ಚರ್ಚೆಯಲ್ಲಿದ್ದು, ಈ ಹಿಂದೆ ಸಂಸತ್ತಿನಲ್ಲಿ ಮಾಡಿದ ಭಾಷಣ ಹಾಗೂ ಸ್ಥಳೀಯ ಭಾಷೆಯಲ್ಲಿ ಹಾಡಿದ ಆವೇಶಭರಿತ ಹಾಡು ಸದ್ದು ಮಾಡಿತ್ತು.

ಇದೀಗ ಮತ್ತೆ ಈಕೆ ಸೋಷಿಯಲ್ ಮೀಡಿಯಾ(social media) ದಲ್ಲಿ ಸೆನ್ಷೇಷನ್ ಕ್ರಿಯೆಟ್ ಮಾಡಿದ್ದು, ಸಂಸತ್(parliament) ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರೊಟೆಸ್ಟ್ ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ನ್ಯೂಜಿಲೆಂಡ್(New Zealand) ಸರ್ಕಾರದ ವಿವಾದಾತ್ಮಕ ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಹನ್ನಾ ಮೌರಿ ಹಾಕಾದ ಸಾಂಪ್ರದಾಯಿಕ ಡಾನ್ಸ್​ ಮಾಡಿ ಮತ್ತೆ ಸುದ್ದಿಯಾಗಿದ್ದು, ಸ್ಥಳೀಯ ಒಪ್ಪಂದ ಮಸೂದೆಯ ಅಂಗೀಕಾರಕ್ಕಾಗಿ ನ್ಯೂಜಿಲೆಂಡ್ ಸರ್ಕಾರ ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಹನಾ ರವೈಟಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ಸರ್ಕಾರ ಮೌರಿ ಬುಡಕಟ್ಟು ಸಮುದಾಯದೊಂದಿಗೆ ಹಾಗೂ ಸರ್ಕಾರದೊಂದಿಗೆ ಒಂದು ಉತ್ತಮ ಬಾಂಧವ್ಯ ಸೃಷ್ಟಿಸುವ ಸಲುವಾಗಿ 1840ರ ವೈಟಾಂಗಿ ಒಪ್ಪಂದದ ಬಗ್ಗೆ ಮಸೂದೆ ಮಂಡನೆ ಮಾಡಿತ್ತು. ಆದರೆ ಅದೇ ಸಮುದಾಯದ ಸಂಸದೆಯಾಗಿರುವ ಹನಾ ರವೈಟಿ ಈ ಮಸೂದೆಯನ್ನು ವಿರೋಧಿಸಿದ್ದು, ಅದನ್ನು ಖಂಡಿಸುವ ಭರದಲ್ಲಿಯೇ ಮಸೂದೆಯ ಪ್ರತಿಯನ್ನು ಹರಿದು ನ್ಯೂಜಿಲೆಂಡ್​ನ ಸಾಂಪ್ರದಾಯಿಕ ನೃತ್ಯವಾದ ಹಕಾ ಡಾನ್ಸ್ ಮಾಡಿರುವ ವಿಡೀಯೋ ವೈರಲ್(video viral) ಆಗಿದೆ

ಸದ್ಯ ಅವರ ನೃತ್ಯದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದು, ಹಾಕಾ ನೃತ್ಯ ಇಡೀ ಸಂಸತ್ತಿನಲ್ಲಿ ಸದ್ದು ಮಾಡುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಜನರನ್ನು ಅಧಿಕಾರಿಗಳು ಹೊರಗೆ ದೂಡಿದ್ದಾರೆ. ಅಲ್ಲದೇ ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಕ್ಕೆ ಸಭಾಪತಿಯವರು ಸಂಸದೆ ಹಾನಾ ರಾಫಿಟಿ ಮೈಪಿ ಕ್ಲಾರ್ಕ್‌ ಅವರನ್ನು ಅಮಾನತು ಮಾಡಿದ್ದು, ಈ ಗಲಾಟೆಯ ನಡುವೆಯೂ ಸಂಸತ್ತಿನಲ್ಲಿ ಮಸೂದೆಯ ಮೊದಲ ಮಂಡನೆಯು ಆಗಿದೆ. ಮತ್ತೊಂದು ಸುತ್ತು ಮತಕ್ಕೆ ಹಾಕುವುದಕ್ಕೂ ಮುನ್ನ ಮಸೂದೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಕ್ಕೆ ಕಾದಿರಿಸಲಾಗಿದೆ. ಅಂದಹಾಗೇ, ಕಳೆದ ವರ್ಷ ಸಂಸದೆ ಹಾನಾ ರಾಫಿಟಿ ತಮ್ಮ ಚೊಚ್ಚಲ ಭಾಷಣದಲ್ಲಿ ‘ಹಾಕಾ’ ಪ್ರದರ್ಶನ ಮಾಡಿದ್ದರು.

ಇನ್ನು 1853 ಬಳಿಕ ನ್ಯೂಜಿಲೆಂಡ್ ಕಂಡ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎಂದು ಹನಾ ರವೈಟಿ ಗುರುತಿಸಿಕೊಂಡಿದ್ದು, ನ್ಯೂಜಿಲೆಂಡ್ ಸಂಸತ್ತಿನ 170 ವರ್ಷದ ಇತಿಹಾಸದಲ್ಲಿ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಅತ್ಯಂತ ಕಿರಿಯ ಸಂಸದೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 21 ವರ್ಷದ ಹನ್ನಾ, 2023ರ ಅಕ್ಟೋಬರ್ ತಿಂಗಳಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದು, ಹೌರಾಕಿ-ವೈಕಾಟೊ ಕ್ಷೇತ್ರದಿಂದ ಹನ್ನಾ ಸಂಸತ್ತಿಗೆ ಪ್ರವೇಶಪಡೆದಿದ್ದಾರೆ. 2008ರಿಂದ ಇಲ್ಲೀವರೆಗೆ ಈ ಕ್ಷೇತ್ರದಿಂದ ಹಿರಿಯ ನಾಯಕರು, ಜನಪ್ರಿಯ ನಾಯಕರು ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು. ಇದೇ ಮೊದಲ ಬಾರಿಗೆ ಅತೀ ಕಿರಿಯ ನಾಯಕಿ ಹನ್ನಾ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದಾರೆ ಎಂಬ ಖ್ಯಾತಿಯೂ ಇವರಿಗಿದೆ.

ಈ ಹಿಂದೆಯೂ ಕೂಡ ಇವರು ಇದೇ ರೀತಿ ಸಂಸತ್​ನಲ್ಲಿ ಡಾನ್ಸ್​ ಮಾಡಿದ್ದರು, ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ನ್ಯೂಜಿಲೆಂಡ್‌ ಸಂಸತ್ತಿನಲ್ಲಿ ‘ಮೌರಿ’ ಸಂಪ್ರದಾಯದ ‘ಹಾಕಾ’ ನೃತ್ಯ ಮಾಡುವ ಮೂಲಕ ಮಸೂದೆಯೊಂದರ ಪ್ರಸ್ತಾಪಕ್ಕೆ ವಿರೋಧ ತೋರಿದ್ದಾರೆ. ಆರ್ಭಟಿಸಿದಂತೆ ಕಾಣುವ ಅವರ ಹಾಡು ಮತ್ತು ನೃತ್ಯದ ವಿಡಿಯೋ ಭಾರೀ ವೈರಲ್‌ ಆಗಿದೆ.

ತಮರಿಕಿ ಮಾವೋರಿ ಭಾಷೆಗೆ ಯಾವುದೇ ಮಾನ್ಯತೆ ಸಿಕ್ಕಿಲ್ಲ. ಈ ಕುರಿತು ಹನ್ನಾ ಬೆಳಕು ಚೆಲ್ಲಿದ್ದಾರೆ. ಆಕ್ಲೆಂಡ್ ಹಾಗೂ ಹ್ಯಾಮಿಲ್ಟನ್ ನಗರದ ನಡುವೆ ಬರುವ ಸಣ್ಣ ಪಟ್ಟಣದಲ್ಲಿ ಮಾವೋರಿ ಸಮುದಾಯವಿದೆ. ತಮ್ಮ ಗ್ರಾಮದಲ್ಲಿ ಮಕ್ಕಳಿಗೆ ಸಮುದಾಯದ ಭಾಷೆ, ಸಂಸ್ಕೃತಿ ಕುರಿತು ಶಿಕ್ಷಣ ನೀಡುತ್ತಿದ್ದ ಹನ್ನಾ ಇದೀಗ ಸಂಸದೆಯಾಗಿ ತಮ್ಮ ಸಮುದಾಯ ಹಾಗೂ ಸ್ಥಳೀಯ ಭಾಷೆಯಲ್ಲಿ ಭಾಷಣ ಹಾಗೂ ಸಂಸ್ಕೃತಿ ಬಿಂಬಿಸುವ ಹಾಡು ಹೇಳಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿನ ಹಲವು ಸ್ಥಳೀಯ ಸಮುದಾಯಗಳ ಪ್ರಮುಖ ವಿಶೇಷತೆಗಳಲ್ಲಿ ಇದೇ ರೀತಿಯ ಆವೇಷ ಭರಿತ ಹಾಡು ಸಾಮಾನ್ಯ. ನ್ಯೂಜಿಲೆಂಡ್ ರಾಷ್ಟ್ರೀಯ ಕ್ರೀಡೆ ರಗ್ಬಿಯ ಆರಂಭದಲ್ಲೇ ಸಾಂಪ್ರದಾಯಿಕ ಹಾಕ ನೃತ್ಯ ಸಾಮಾನ್ಯವಾಗಿದೆ. ಹಾಕಾ ಹಾಡು ಹಾಗೂ ನೃತ್ಯದ ರೀತಿಯಲ್ಲೇ ಇರುವ ಮಾವೋರಿ ಸಮುದಾಯದ ಬಿಂಬಿಸುವ ಈ ಹಾಡನ್ನು ಸಂಸತ್ತಿನಲ್ಲಿ ಹಾಡುವ ಮೂಲಕ ಭಾರಿ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ: India Canada Row : ಭಾರತಕ್ಕೆ ಬೆದರಿದ ಕೆನಡಾ; ನಿಜ್ಜರ್‌ ಕೊಲೆಯಲ್ಲಿ ಭಾರತ ಭಾಗಿಯಾಗಿದ್ದಕ್ಕೆ ಸಾಕ್ಷಿಗಳೇ ಇಲ್ಲ ಎಂದ ಪ್ರಧಾನಿ ಟ್ರುಡೊ!