Monday, 4th November 2024

Viral Video: ಹಿಜಾಬ್‌ ವಿರೋಧಿಸಿ ಮೈ ಮೇಲಿದ್ದ ಬಟ್ಟೆ ಬಿಚ್ಚಿ ವಿದ್ಯಾರ್ಥಿನಿ ಪ್ರತಿಭಟನೆ- ಇಲ್ಲಿದೆ ವಿಡಿಯೋ

Viral Video

ಟೆಹ್ರಾನ್‌: ಇರಾನ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ (Iran University Campus) ಆವರಣದಲ್ಲಿ ಹಿಜಾಬ್ (hijab Issue) ವಿರೋಧಿಸಿ ವಿದ್ಯಾರ್ಥಿನಿಯೊಬ್ಬಳು ತಾನು ಧರಿಸಿದ್ದ ಬಟ್ಟೆಯನ್ನು ಕಳಚಿ ಕೇವಲ ಒಳ ಉಡುಪಿನಲ್ಲಿ ಪ್ರತಿಭಟನೆ (protest against hijab) ನಡೆಸಿದ ಘಟನೆ ಶನಿವಾರ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯ ಕ್ಯಾಂಪಸ್ ಆವರಣದಲ್ಲಿ ಈ ಘಟನೆ ನಡೆದಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯು ಒಳಉಡುಪಿನಲ್ಲಿ ಕ್ಯಾಂಪಸ್ ಆವರಣದಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವುದನ್ನು ಕಾಣಬಹುದು. ವಿಶ್ವವಿದ್ಯಾನಿಲಯದ ವಕ್ತಾರ ಅಮೀರ್ ಮಹ್ಜಾಬ್ ಅವರು ಎಕ್ಸ್ ನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದು, ವಿದ್ಯಾರ್ಥಿನಿ ತೀವ್ರ ಒತ್ತಡದಲ್ಲಿದ್ದು, ಮಾನಸಿಕ ಅಸ್ವಸ್ಥತೆ ಎನ್ನಲಾಗಿದೆ.

ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆಕೆಯನ್ನು ಐಆರ್‌ಜಿಸಿ ಪಡೆಗಳು ಬಂಧಿಸಿದ್ದು, ಈ ವೇಳೆ ಆಕೆಗೆ ಥಳಿಸಲಾಗಿದೆ ಎನ್ನಲಾಗಿದೆ. ಯುವತಿಯ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಅಮ್ನೆಸ್ಟಿ ಇಂಟರ್‌ನ್ಯಾಶನಲ್, ಇರಾನ್‌ನ ಅಧಿಕಾರಿಗಳು ತಕ್ಷಣವೇ ಆಕೆಯನ್ನು ಬಿಡುಗಡೆ ಮಾಡಬೇಕು ಮತ್ತು ಚಿತ್ರಹಿಂಸೆಯಿಂದ ರಕ್ಷಿಸಬೇಕು. ಆಕೆಯ ಕುಟುಂಬ ಮತ್ತು ವಕೀಲರಿಗೆ ಕಾನೂನು ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

ಇದರ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಸಾಮಾಜಿಕ ಕಾರ್ಯಕರ್ತೆ ಮತ್ತು ಸಂಗೀತಗಾರ್ತಿ ಎಲಿಕಾ ಲೆ ಬಾನ್, ಇರಾನ್‌ನಲ್ಲಿ ಹಿಜಾಬ್ ಧರಿಸದಿದ್ದಕ್ಕಾಗಿ ಯುವತಿಯೊಬ್ಬಳು ನೈತಿಕ ಪೊಲೀಸರಿಂದ ಹಲ್ಲೆಗೊಳಗಾಗಿದ್ದಾಳೆ. ಆಕೆಯನ್ನು ಐಆರ್‌ಜಿಸಿ ಪಡೆಗಳು ಬಂಧಿಸಿದ್ದು, ಬಳಿಕ ಕಣ್ಮರೆಯಾಗಿದ್ದಾಳೆ. ಇದು ನಿಜವಾದ ಪ್ರತಿರೋಧದ ಕೆಚ್ಚೆದೆಯ ನಡೆ ಎಂದು ಹೇಳಿದ್ದಾರೆ.

ಈ ವಿಡಿಯೋ ಎರಡು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ ಹಲವಾರು ಪ್ರತಿಕ್ರಿಯೆಗಳೂ ಬಂದಿವೆ. ಒಬ್ಬ ಬಳಕೆದಾರ, ಧೈರ್ಯಶಾಲಿ ಮಹಿಳೆ. ಅವಳು ಕಣ್ಮರೆಯಾದ ಅನಂತರ ಅವಳಿಗೆ ಏನಾಗಿದೆ ಎಂದು ತಿಳಿಯಬೇಕು ಎಂದಿದ್ದರೆ, ಇನ್ನೊಬ್ಬರು, ಮಹಿಳೆಯ ಧೈರ್ಯವನ್ನು ಮೆಚ್ಚಬೇಕು ಎಂದಿದ್ದಾರೆ.

ಹಿಜಾಬ್‌ಗೆ ವಿರೋಧ

ಇರಾನ್‌ನಲ್ಲಿ ಹಿಜಾಬ್ ಕಡ್ಡಾಯವಾಗಿದ್ದು, ಇದನ್ನು ಇರಾನ್ ಮಹಿಳೆಯರು ಕಳೆದ 2 ವರ್ಷಗಳಿಂದ ವಿರೋಧಿಸುತ್ತಿದ್ದಾರೆ. 2022ರ ಸೆಪ್ಟೆಂಬರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಅನೇಕ ಮಹಿಳೆಯರು ಹಿಜಾಬ್ ಅನ್ನು ಬಹಿಷ್ಕರಿಸಿದ್ದರು. ಈ ವೇಳೆ ಮಹಿಳೆಯರನ್ನು ಬಂಧಿಸಲಾಗಿತ್ತು. ಈ ವೇಳೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಪ್ರತಿಭಟನೆ ತೀವ್ರ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಕೈಗೊಂಡ ಕಠಿಣ ಕ್ರಮದ ಬಳಿಕ ಅನೇಕ ಮಹಿಳೆಯರು ಸಾವನ್ನಪ್ಪಿರುವುದು ವರದಿಯಾಗಿತ್ತು.ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆದ ಬಳಿಕ ಮತ್ತೆ ಹಿಜಾಬ್ ಕುರಿತು ದೇಶಾದ್ಯಂತ ಚರ್ಚೆ ಆರಂಭವಾಗಿದೆ.

Viral Video: ರಾಂಗ್ ಆದ ಯುವಕ; ಯುವತಿಯ ಜುಟ್ಟು ಹಿಡಿದು ಎಲ್ಲರೆದುರೇ ಥಳಿಸಿದ ಕಿಡಿಗೇಡಿ; ವಿಡಿಯೋ ಇದೆ

ವಿಶ್ವವಿದ್ಯಾಲಯ ಸ್ಪಷ್ಟನೆ

ವಿದ್ಯಾರ್ಥಿನಿಯ ವರ್ತನೆ ಕುರಿತು ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾನಿಲಯದ ವಕ್ತಾರ ಅಮೀರ್ ಮಹ್‌ಜಾಬ್, ವಿದ್ಯಾರ್ಥಿನಿ ಮಾನಸಿಕ ಒತ್ತಡದಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಮನೋರೋಗ ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.