ಇಸ್ಲಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ಪಾಕಿಸ್ತಾನ(Pakistan Crisis) ಇತೀಚಿನ ದಿನಗಳಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಪಾಕಿಸ್ತಾನವು ಕೆಲವೊಮ್ಮೆ ತನ್ನ ಭಯೋತ್ಪಾದನೆ ಮತ್ತು ಕೆಲವೊಮ್ಮೆ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಸುದ್ದಿಯಲ್ಲಿದೆ. ಇಲ್ಲಿನ ಜನರ ಚಿತ್ರ ವಿಚಿತ್ರ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವು ದಿನಗಳ ಹಿಂದೆಯಷ್ಟೇ ಹೊಸದಾಗಿ ಓಪನ್ ಆಗಿದ್ದ ಮಾಲ್‌ಗೆ ನುಗ್ಗಿ ಜನ ಬಟ್ಟೆ-ಬರೆಗಳನ್ನು ದೋಚಿದ ಘಟನೆ ವರದಿಯಾಗಿತ್ತು. ಇದೀಗ ಯುವತಿಯೊಬ್ಬಳ ತಲೆ ಮೇಲೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ವಿಡಿಯೋ ಎಲ್ಲೆಡೆ ವೈರಲ್(Viral video) ಆಗುತ್ತಿದೆ.
ಈ ವೈರಲ್ ವೀಡಿಯೊಗಳನ್ನು ನೋಡಿದ ಇಂಟರ್ನೆಟ್ ಬಳಕೆದಾರರು ಇದು ಪಾಕಿಸ್ತಾನದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಇದರಲ್ಲಿ, ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾವನ್ನು ಧರಿಸಿದ್ದಾಳೆ ಮತ್ತು ಪಾಕಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತನ್ನ ಕುಟುಂಬವು ಭದ್ರತೆಯ ದೃಷ್ಟಿಯಿಂದ ಈ ಕ್ಯಾಮೆರಾವನ್ನು ಅಳವಡಿಸಿದೆ ಎಂದು ಹೇಳುತ್ತಿದ್ದಾಳೆ. ಪಾಕಿಸ್ತಾನದಲ್ಲಿ ಏನಾಯಿತು ಎಂಬುದನ್ನೂ ಅವರು ಉಲ್ಲೇಖಿಸುತ್ತಿದ್ದಾರೆ.
ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ಕುಟುಂಬವು ತನ್ನ ತಲೆಯ ಮೇಲೆ ಸಿಸಿಟಿವಿಯನ್ನು ಹಾಕಿದೆ ಮತ್ತು ಅದರ ಸಹಾಯದಿಂದ ಅವರು ಹುಡುಗಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಬಾಲಕಿ ಹೇಳುತ್ತಿದ್ದಾಳೆ. ಕುಟುಂಬವು ಹುಡುಗಿಯ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ, ಆದ್ದರಿಂದ ಅವಳು ಎಲ್ಲಿಗೆ ಹೋದರೂ, ಅವಳು ಯಾರನ್ನು ಭೇಟಿಯಾದರೂ, ಅವಳ ಕುಟುಂಬಕ್ಕೆ ಅದರ ಬಗ್ಗೆ ತಿಳಿದಿದೆ.
ಪಾಕಿಸ್ತಾನಿ ಹುಡುಗಿಯ ಈ ವೀಡಿಯೊ ಬಹಳ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ಸೆಪ್ಟೆಂಬರ್ 6 ರಂದು ಅಪ್ಲೋಡ್ ಮಾಡಲಾಗಿದೆ. ಇದುವರೆಗೆ ಸಾವಿರಾರು ವ್ಯೂಸ್ ಬಂದಿವೆ. ಇದು ಪಾಕಿಸ್ತಾನದಲ್ಲಿ ಮಾತ್ರ ಸಂಭವಿಸಬಹುದು ಎಂದು ಕೆಲವರು ಹೇಳುತ್ತಿದ್ದರೆ, ಮತ್ತೂ ಕೆಲವರು ಇಂತಹ ವ್ಯವಸ್ಥೆ ಭಾರತದಲ್ಲೂ ಬರಬೇಕೆಂದು ಹೇಳಿದ್ದಾರೆ.
Pakistan🫡😭
— Ghar Ke Kalesh (@gharkekalesh) September 6, 2024
pic.twitter.com/Hdql8R2ejt
ಇನ್ನು ನೆರೆಯ ರಾಷ್ಟ್ರ ಪಾಕಿಸ್ತಾನದ ಸ್ಥಿತಿ ದಿನೇ ದಿನೇ ಹೇಳತೀರದಂತಿದೆ. ದೇಶ ಆರ್ಥಿಕ ದಿವಾಳಿಗೆ ತುತ್ತಾಗಿರುವ ಹಿನ್ನೆಲೆ ಕನಿಷ್ಟ ಸೌಲಭ್ಯಕ್ಕೂ ಜನ ಪರದಾಡುವಂತಹ ಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೇ ಬೇರೆ ದಾರಿ ಕಾಣದೇ ಜನ ಕಳ್ಳತನ ಲೂಟಿಗೂ ಇಳಿದಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಕೆಲವು ದಿನಗಳ ಹಿಂದೆ ಕರಾಚಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಹೊಸದಾಗಿ ತೆರೆದಿರುವ ಮಾಲ್‌ಗೆ ನುಗ್ಗಿ ಜನ ಬಟ್ಟೆಗಳನ್ನು ಲೂಟಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.
ಸ್ಥಳೀಯ ವರದಿಗಳ ಪ್ರಕಾರ, ವಿದೇಶಿ ಉದ್ಯಮಿಯೋರ್ವ ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್ ಬಜಾರ್ ಎಂಬ ಮಾಲ್‌ವೊಂದನ್ನು ತೆರದಿದ್ದಾನೆ. ಉದ್ಘಾಟನೆ ದಿನವಾದ ನಿನ್ನೆ ವಿಶೇಷ ಆಫರ್ ಕೂಡ ಘೋಷಿಸಿದ್ದ. ರಿಯಾಯಿತಿ ದರದಲ್ಲಿ ಬಟ್ಟೆಗಳು ಸಿಗುತ್ತವೆ ಎಂದು ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದ್ದ. ಇದನ್ನು ನೋಡಿದ ಜನ ಏಕಾಏಕಿ ಮಾಲ್‌ಗೆ ನುಗ್ಗಿದ್ದರು.
ಈ ಸುದ್ದಿಯನ್ನೂ ಓದಿ: Pakistan Crisis: ಪಾಕ್ ಸ್ಥಿತಿ ಅಯೋಮಯ; ಮಾಲ್‌ಗೆ ನುಗ್ಗಿ ಬಟ್ಟೆಗಳನ್ನು ಲೂಟಿ ಮಾಡಿದ ಜನ; ಕೊನೆಗೆ ಲಾಠಿಚಾರ್ಜ್!