ವಾಷಿಂಗ್ಟನ್: ಒಂದು ಸ್ಪೂರ್ತಿದಾಯಕ ಕಥೆಯನ್ನು ನೀವೆಲ್ಲಾ ಕೇಳಿರಬಹುದು, ಒಬ್ಬ ಕುರುಡ ‘ನನಗೆ ಕಣ್ಣು ಕಾಣಿಸುವುದಿಲ್ಲ, ದಯವಿಟ್ಟು ಸಹಾಯ ಮಾಡಿ..’ ಎಂಬ ಫಲಕವನ್ನು ಹಿಡಿದುಕೊಂಡು ಜನನಿಬಿಡ ರಸ್ತೆ ಬದಿಯಲ್ಲಿ ಕುಳಿತಿದ್ದ. ಆದರೆ ಯಾರೂ ಅವನತ್ತ ಗಮನಿಸುತ್ತಲೂ ಇರಲಿಲ್ಲ, ಆತನಿಗೆ ಹಣವನ್ನು ಹಾಕುತ್ತಲೂ ಇರಲಿಲ್ಲ. ಹೀಗಿರುವಾಗ ಒಬ್ಬ ವ್ಯಕ್ತಿ ಇದನ್ನು ಗಮನಿಸಿ, ಆ ಕುರುಡನ ಬಳಿ ಬಂದು ಆತನ ಫಲಕದ ಇನ್ನೊಂದು ಬದಿಯಲ್ಲಿ ಏನನ್ನೋ ಬರೆದು ಅದನ್ನು ಆ ಕುರುಡನ ಕೈಗಿಟ್ಟು ಹೋಗುತ್ತಾನೆ. ಸಾಯಂಕಾಲ ಆ ವ್ಯಕ್ತಿ ಅದೇ ದಾರಿಯಲ್ಲಿ ಬಂದು ನೋಡಿದಾಗ ಆ ಕುರುಡನ ಬಳಿ ಸಾಕಷ್ಟು ಹಣ ಸಂಗ್ರಹವಾಗಿರುತ್ತದೆ. ಅಷ್ಟಕ್ಕೂ ಆ ವ್ಯಕ್ತಿ ಆ ಫಲಕದಲ್ಲಿ ಬರೆದಿದ್ದೇನೆಂದರೆ, ‘ಈ ವಸಂತ ಮಾಸದಲ್ಲಿ ಪ್ರಕೃತಿ ಎಷ್ಟು ಸೌಂದರ್ಯದಿಂದ ಕಂಗೊಳಿಸುತ್ತಿದೆ ; ಆದರೆ ಅದನ್ನು ನೋಡುವ ಸೌಭಾಗ್ಯ ನನಗಿಲ್ಲ..!’ ಎಂದಾಗಿತ್ತು. ಇದನ್ನಿಲ್ಲಿ ಹೇಳಿದ್ದಕ್ಕೆ ಒಂದು ಕಾರಣವಿದೆ. ಇಲ್ಲೊಬ್ಬರು ತಾತಪ್ಪ ಹಣ ಸಂಗ್ರಹಿಸಲು ಸಖತ್ ಕ್ರಿಯೇಟಿವ್ ಪ್ಲ್ಯಾನ್ ಒಂದನ್ನು ಮಾಡಿದ್ದು, ಅವರ ಈ ಪ್ಲ್ಯಾನ್ ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಅಮೆರಿಕಾದ ಲಾಸ್ ವೆಗಾಸ್ ನಲ್ಲಿ (Las Vegas) ಹಿರಿಯ ಪ್ರಾಯದ ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಫಲಕದಲ್ಲಿರುವ ಬರಹವೊಂದು ಇದೀಗ ಎಲ್ಲರನ್ನೂ ವಿಸ್ಮಯಗೊಳಿಸುತ್ತಿದೆ. ‘ನಿಮ್ಮ ಹುಡುಗಿ ಹಾಟ್ ಆಗಿದ್ದರೆ ನನಗೆ ಟಿಪ್ಸ್ ನೀಡಿ..’ (‘Tip Me If Your Girl Is Hot’) ಎಂಬ ಬರಹವುಳ್ಳ ಫಲಕವನ್ನು ಹಿಡಿದುಕೊಂಡ ಈ ವ್ಯಕ್ತಿ ಇಲ್ಲಿನ ಫೇಮಸ್ ಹೊಟೇಲೊಂದರ ಹೊರಗಡೆ ನಿಂತಿರುವ ಫೊಟೋ ಇದಾಗಿದೆ.
ಈ ಹಿರಿಯ ವ್ಯಕ್ತಿ ಖಂಡಿತವಾಗಿಯೂ ಸಖತ್ ತಲೆಯವರೇ ಆಗಿರ್ಬೇಕು. ಯಾಕಂದ್ರೆ ಇವರು ಹಿಡ್ಕೊಂಡಿದ್ದ ಫಲಕದಲ್ಲಿದ್ದ ಬರಹವನ್ನು ಓದಿದವರೆಲ್ಲರೂ, ಅದ್ರಲ್ಲೂ ಜೋಡಿ ಹಕ್ಕಿಗಳು ಇವರಿಗೆ ಟಿಪ್ಸ್ ನೀಡಿಯೇ ಮುಂದೆ ಹೋಗ್ತಿದ್ದಾರಂತೆ!
ತಮ್ಮ ಸಂಗಾತಿಯ ಜೊತೆ ಹೋಗುವ ಬಾಯ್ ಫ್ರೆಂಡ್ಸ್ ಅಂತೂ ಈ ತಾತಪ್ಪನಿಗೆ ಟಿಪ್ಸ್ ಕೊಡದೇ ಮುಂದೆ ಹೋದ್ರೆ ಅವರ ಸಂಗಾತಿಯ ಸಿಟ್ಟಿಗೆ ಗುರಿಯಾಗೋದಂತು ಗ್ಯಾರಂಟಿ. ಯಾಕಂದ್ರೆ ಈ ತಾತಪ್ಪ ಬರೆದಿರೋ ಹಾಗೆ, ಇವರಿಗೆ ಟಿಪ್ಸ್ ಹಾಕದಿದ್ರೆ ಅಂತವರ ಗರ್ಲ್ ಫ್ರೆಂಡ್ ‘ಹಾಟ್’ ಅಲ್ಲ ಅಂತ ಆಯ್ತಲ್ವ..? ಇದನ್ನು ಯಾವ ಗರ್ಲ್ ಫ್ರೆಂಡ್ ಆದ್ರೂ ಸಹಿಸಿಕೊಳ್ತಾಲಾ ನೀವೇ ಹೇಳಿ..? ಅಷ್ಟರಮಟ್ಟಿಗೆ ಈ ತುಂಟ ತಾತಪ್ಪನ ಕ್ಲೆವರ್ ಪ್ಲ್ಯಾನ್ ವರ್ಕೌಟ್ ಆಗಿದೆ!
ಇದನ್ನೂ ಓದಿ: Aamir Khan: ಉಪೇಂದ್ರ ಸಿನಿಮಾದ ಟ್ರೇಲರ್ ನೋಡಿ ʼನಾನು ಉಪೇಂದ್ರ ಅಭಿಮಾನಿʼ ಎಂದ ಆಮೀರ್ ಖಾನ್!
ಈ ವೈರಲ್ ವಿಡಿಯೊದಲ್ಲಿರುವಂತೆ, ಈ ತಾತಪ್ಪನ ಬಳಿಯಿಂದ ಹಾದು ಹೋಗುವ ಜೊಡಿಯೊಂದು, ಇವರ ಕೈಯಲ್ಲಿದ್ದ ಫಲಕವನ್ನು ನೋಡಿ, ಆತನ ಜೊತೆಯಲ್ಲಿದ್ದ ಬೆಡಗಿ ತನ್ನ ಬಾಯ್ ಫ್ರೆಂಡ್ ಗೆ ತಾತಪ್ಪನಿಗೆ ಟಿಪ್ ನೀಡುವಂತೆ ಸೂಚಿಸಿದ್ದಾಳೆ. ಮೊದಲಿಗೆ ಅವಳ ಮಾತಿಗೆ ಕೇರ್ ಮಾಡದ ಆ ಬಾಯ್ ಫ್ರೆಂಡ್ ಬಳಿಕ ಮುಂದಾಗಬಹುದಾದ ಅನಾಹುತವನ್ನು ನೆನೆದು, ಕೂಡಲೇ ಹಿಂತಿರುಗಿ ಬಂದು ಈ ತಾತನಿಗೆ ಟಿಪ್ಸ್ ನೀಡಿ ಮುಂದೆ ಹೊಗಿದ್ದಾನೆ. ಅಷ್ಟರಮಟ್ಟಿಗೆ ಈ ತಾತಪ್ಪನ ‘ಕ್ರಿಯೇಟಿವ್ ಪ್ಲ್ಯಾನ್’ ಸಿಕ್ಕಾಪಟ್ಟೆ ವರ್ಕೌಟ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ವೈರಲ್ ಆಗುತ್ತಿದ್ದಂತೆ ಈ ಕ್ರಿಯೇಟಿವ್ ಬರಹಕ್ಕೆ ಮತ್ತು ತಾತನ ಸೂಪರ್ ಕ್ರಿಯೇಟಿವಿಟಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ‘ಕಷ್ಟ್ಪಟ್ಟು ಮಾತ್ರವಲ್ಲ, ಸ್ಮಾರ್ಟ್ ಆಗಿಯೂ ಕೆಲಸ ಮಾಡ್ಬೇಕು’ ಎಂದು ಒಬ್ರು ಕಮೆಂಟ್ ಮಾಡಿದ್ದರೆ, ‘ಲೆಜೆಂಡ್ ಗಳು ಏಕಾಂಗಿಯಾಗಿರ್ತಾರೆ, ಆದರೆ ಅವರು ಕಾರಣವಿಲ್ಲದೇ ಟಿಪ್ ಕೇಳ್ತಾರೆ’ ಅಂತ ಇನ್ನೊಬ್ರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿಯಲ್ಲಿ ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.