20,000ಕ್ಕೂ ಹೆಚ್ಚು ಜನರಿರುವ ವಿಶ್ವದ ಅತೀ ದೊಡ್ಡ ವಸತಿ ಕಟ್ಟಡದ (World’s Largest Residential Building) ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ (Viral News) ಆಗಿದೆ. ಚೀನಾದ (China) ಕಿಯಾನ್‌ಜಿಯಾಂಗ್ ಸೆಂಚುರಿ ಸಿಟಿಯಲ್ಲಿರುವ ರೀಜೆಂಟ್ ಇಂಟರ್‌ನ್ಯಾಶನಲ್ (Regent International) ಕಟ್ಟಡದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.
675 ಅಡಿ ಎತ್ತರವಿರುವ ಈ ಕಟ್ಟಡವನ್ನು ಮೊದಲು ಉನ್ನತ ಮಟ್ಟದ ಹೊಟೇಲ್‌ಗಾಗಿ ರೂಪುಗೊಳಿಸಲಾಗಿತ್ತು. ಬಳಿಕ ಇದನ್ನು ವಿಸ್ತಾರವಾದ ಅಪಾರ್ಟ್‌ಮೆಂಟ್ ಆಗಿ ಮರುರೂಪಿಸಲಾಯಿತು. ಎಸ್ ಆಕಾರದಲ್ಲಿರುವ ರೀಜೆಂಟ್ ಇಂಟರ್‌ನ್ಯಾಷನಲ್ ಕಟ್ಟಡವು 1.47 ಮಿಲಿಯನ್ ಚದರ ಮೀಟರ್‌ಗಳನ್ನು ವ್ಯಾಪಿಸಿದೆ. 39 ಅಂತಸ್ತಿನ ದುಬಾರಿ ಅಪಾರ್ಟ್‌ಮೆಂಟ್‌ನಲ್ಲಿ 20,000ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ.
self contained community ಎಂದೇ ಕರೆಯಲ್ಪಡುವ ಈ ಬೃಹತ್ ಕಟ್ಟಡ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಟ್ಟಡ ನಿವಾಸಿಗಳ ದೈನಂದಿನ ಅಗತ್ಯಗಳನ್ನು ಆವರಣದಲ್ಲೇ ಪೂರೈಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ವಸತಿ ಸಂಕೀರ್ಣದೊಳಗೆ ಶಾಪಿಂಗ್ ಕೇಂದ್ರಗಳು, ರೆಸ್ಟೋರೆಂಟ್, ಶಾಲೆ, ಆಸ್ಪತ್ರೆ ಮತ್ತು ಮನರಂಜನಾ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇದಲ್ಲದೆ ಅತ್ಯಾಧುನಿಕ ಫಿಟ್‌ನೆಸ್ ಸೆಂಟರ್, ಫುಡ್ ಕೋರ್ಟ್, ಒಳಾಂಗಣ ಈಜುಕೊಳ, ಕಿರಾಣಿ, ಸಲೂನ್‌ಗಳೂ ಇದ್ದು, ವಿಸ್ತಾರವಾದ ಉದ್ಯಾನವನವನ್ನೂ ಹೊಂದಿದೆ.
ಚೀನಾದಲ್ಲಿರುವ ಜಗತ್ತಿನ ಈ ಅತಿ ದೊಡ್ಡ ವಸತಿ ಕಟ್ಟಡದಲ್ಲಿ 20,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂಬ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಅತ್ಯಂತ ದೊಡ್ಡದಾಗಿರುವ ರೀಜೆಂಟ್ ಇಂಟರ್‌ನ್ಯಾಷನಲ್ ಅನ್ನು ಇನ್ನೂ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಗರಿಷ್ಠ ಸಾಮರ್ಥ್ಯ 30,000 ಜನರೊಂದಿಗೆ ಹೆಚ್ಚುವರಿ 10,000 ನಿವಾಸಿಗಳಿಗೆ ಸಮುದಾಯ ಸೇರಲು ಅವಕಾಶ ಕಲ್ಪಿಸಲಿದೆ.
🚨 More than 20,000 people are living in this world's biggest residential building in China. pic.twitter.com/O3nBToayx4
— Indian Tech & Infra (@IndianTechGuide) October 6, 2024
ಎಕ್ಸ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಒಬ್ಬರು, ಇದು ನಂಬಲಸಾಧ್ಯವಾಗಿದೆ. ಆಧುನಿಕ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಕಟ್ಟಡವು ಒಂದೇ ಸೂರಿನಡಿ ಅನೇಕ ಜನರನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂದು ಪ್ರಶ್ನಿಸಿದ್ದು, ಇದು ನೋಡಲು ಅದ್ಭುತವಾಗಿದೆ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ ಇದು ಆಕರ್ಷಕವಾಗಿದೆ. ಒಂದೇ ವಸತಿ ಕಟ್ಟಡದಲ್ಲಿ 20,000 ಕ್ಕೂ ಹೆಚ್ಚು ಜನರು ವಾಸಿಸುವ ಕಲ್ಪನೆಯು ನಂಬಲಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು, ಓಹ್ ಇದು ಒಂದು ಸಣ್ಣ ಪಟ್ಟಣದಂತಿದೆ. ಇಲ್ಲಿ ನೆರೆಹೊರೆಯವರೊಂದಿಗೆ ಎಲಿವೇಟರ್‌ನಲ್ಲಿ ಓಡಾಡಬಹುದು ಎಂದಿದ್ದಾರೆ.
Viral Video: ಇನ್ ಶರ್ಟ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನಿಗೆ ಬಿತ್ತು ಗೂಸಾ!
ಈ ಕಟ್ಟಡವು 2013ರಲ್ಲಿ ಉದ್ಘಾಟನೆಯಾಗಿದ್ದು, ವೈವಿಧ್ಯಮಯ ನಿವಾಸಿಗಳ ಸಮುದಾಯವನ್ನು ಆಕರ್ಷಿಸಿದೆ. ಚೀನಾದ ಸುದ್ದಿ ಸಂಸ್ಥೆಯಾದ ಸಿನಾ ಪ್ರಕಾರ, ಇದರ ಬೆಲೆ ವಿವಿಧ ರೀತಿಯಲ್ಲಿದೆ. ಇದರಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ತಿಂಗಳಿಗೆ ಕನಿಷ್ಠ 17,959 ರೂ. ನಿಂದ 47,891 ರೂ.ವರೆಗೆ ಬಾಡಿಗೆ ನಿಗದಿಪಡಿಸಲಾಗಿದೆ.