ಕ್ಯಾಲಿಫೋರ್ನಿಯಾ: ಹಣಕಾಸು ಸೇವೆ ಒದಗಿಸುತ್ತಿರುವ ವೀಸಾ ಮತ್ತು ಮಾಸ್ಟರ್ಕಾರ್ಡ್ ಕಂಪನಿಗಳು ರಷ್ಯಾ ಬ್ಯಾಂಕ್ಗಳಿಗೆ ನೀಡುತ್ತಿದ್ದ ಸೇವೆಯನ್ನು ರದ್ದುಪಡಿಸಿವೆ. ಪುಮಾ ಸಹ ರಷ್ಯಾದಲ್ಲಿದ್ದ ಮಳಿಗೆ ಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಎರಡೂ ಕಂಪನಿಗಳು ಕಠಿಣ ನಿಲುವು ತಳೆದಿವೆ.
‘ರಷ್ಯಾದೊಳಗಿನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ತನ್ನ ಪಾಲುದಾರರೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ವಹಿವಾಟಿಗೆ ನಿರ್ಬಂಧ ಹೇರಲಾಗುತ್ತದೆ. ರಷ್ಯಾದ ಹಣಕಾಸು ಸಂಸ್ಥೆಗಳಿಂದ ವಿತರಣೆ ಮಾಡಲ್ಪಟ್ಟ ವೀಸಾ ಕಾರ್ಡ್ಗಳು ದೇಶದ ಹೊರಗೆ ಸೇವೆಯನ್ನು ಒದಗಿಸುವು ದಿಲ್ಲ. ರಷ್ಯಾದ ಹೊರಗೆ ವಿತರಣೆ ಮಾಡಲಾದ ವೀಸಾ ಕಾರ್ಡ್ಗಳು ರಷ್ಯಾದೊಳಗೆ ಕಾರ್ಯ ನಿರ್ವಹಣೆ ಮಾಡುವುದಿಲ್ಲ’ ಎಂದು ಹೇಳಿದೆ.