Thursday, 22nd February 2024

ಭಾರತೀಯ, ಚೀನಿ ಪ್ರವಾಸಿಗರಿಗೆ 30 ದಿನ ವೀಸಾ ಮುಕ್ತ ಪ್ರವೇಶ: ಮಲೇಷ್ಯಾ ಸರ್ಕಾರ

ಕ್ವಾಲಾಲಂಪುರ: ಭಾರತೀಯ ಮತ್ತು ಚೀನಿ ಪ್ರವಾಸಿಗರಿಗೆ ಡಿಸೆಂಬರ್ 1ರಿಂದ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ.

ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ.

ವೀಸಾ ಮುಕ್ತವಾಗಿದ್ದರೂ ಪ್ರವಾಸಿಗರು ನಿಗದಿತ ಭದ್ರತಾ ತಪಾಸಣೆಗಳನ್ನು ಪೂರೈಸಲೇಬೇಕು ಎಂದು ಹೇಳಿದ್ದಾರೆ. ಈ ಮೂಲಕ ಏಷ್ಯಾ ಖಂಡದ 8 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ.

ವಾರ್ಷಿಕವಾಗಿ ಮಲೇಷ್ಯಾ 16.1 ಮಿಲಿಯನ್‌ಗೆ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹಾಕಿಕೊಂಡಿದೆ. ಭಾರತದ ಪ್ರವಾಸಿಗರ ಸಂಖ್ಯೆಯೇ ಅಧಿಕವಿದೆ.

2022 ರಲ್ಲಿ 3,24,548 ಭಾರತೀಯರು ಮಲೇಷ್ಯಾಕ್ಕೆ ಭೇಟಿ ನೀಡಿದ್ದರು. ಪ್ರಸ್ತುತ ಭಾರತ ಮತ್ತು ಮಲೇಷ್ಯಾ ನಡುವೆ ಪ್ರತಿ ವಾರ 158 ವಿಮಾನಗಳು ಹಾರಾಟ ನಡೆಸುತ್ತವೆ.

Leave a Reply

Your email address will not be published. Required fields are marked *

error: Content is protected !!