Monday, 16th September 2024

ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ: 15 ಮಂದಿ ಸಾವು

ಗೋಮಾ: ಕಾಂಗೋ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಸಂಭವಿಸಿದ ಜ್ವಾಲಾಮುಖಿಯಿಂದ ಲಾವಾರಸ ಉಕ್ಕಿ, 15 ಮಂದಿ ಮೃತ ಪಟ್ಟು, 500ಕ್ಕೂ ಹೆಚ್ಚು ಮನೆಗಳು ನಾಶವಾಗಿದೆ.

ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ ಕಾಣಿಸಿಕೊಳ್ಳುತ್ತಿದ್ದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ರವಾಂಡಾದ ಗಡಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಈ ಘಟನೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಸಂತ್ರಸ್ಥರಾಗಿದ್ದು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ 2002 ರಲ್ಲೂ ಗೋಮಾ ಪ್ರಾಂತ್ಯದಲ್ಲಿ ಜ್ವಾಲಾಮುಖಿ ಉಕ್ಕಿ ಹರಿದು ನೂರಾರು ಮಂದಿ ಮೃತಪಟ್ಟು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮನೆ ಮಠ ಕಳೆದುಕೊಂಡಿದ್ದರು.

 

Leave a Reply

Your email address will not be published. Required fields are marked *