ಪುರೋಹಿತರು ಬೆಳಿಗ್ಗೆ ದೇವಾಲಯ ತಲುಪಿದಾಗ, ದೇವಾಲಯದ ಮುಂಭಾಗದ ಗೋಡೆ ಮುರಿದು ಹೋಗಿರುವುದನ್ನು ಮತ್ತು ಗೇಟ್ನಲ್ಲಿ ಖಲಿಸ್ತಾನಿ ಧ್ವಜ ನೇತುಹಾಕಿರುವುದನ್ನು ಗಮನಿಸಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾದಲ್ಲಿ ಎರಡು ತಿಂಗಳ ಖಲಿಸ್ತಾನ್ ಚಟುವಟಿಕೆಗಳು ಶಾಂತಗೊಂಡ ನಂತರ ಈ ಘಟನೆ ನಡೆದಿದೆ.
ದೇವಾಲಯವನ್ನು ತಲುಪಿದ ಹ್ಯಾರಿಸ್ ಪಾರ್ಕ್ ನಿವಾಸಿ ಸೆಜಲ್ ಪಟೇಲ್, ‘ನಾನು ಬೆಳಿಗ್ಗೆ ಪ್ರಾರ್ಥನೆಗಾಗಿ ಬಂದಾಗ, ಮುಂಭಾಗದ ಗೋಡೆ ಮುರಿದಿರುವುದನ್ನು ನೋಡಿದೆ.
‘ವಿಧ್ವಂಸಕ ಕೃತ್ಯವನ್ನು ನೋಡಿದ ನಂತರ, ನಾನು ದೇವಾಲಯದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದೇನೆ. ನಂತರ ಎನ್ ಎಸ್ ಡಬ್ಲ್ಯೂ ಪೊಲೀಸರಿಗೆ ಮಾಹಿತಿ ನೀಡಲಾಯಿತು ಅಂತ ತಿಳಿಸಿದ್ದಾರೆ.