Sunday, 15th December 2024

ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ

ಠ್ಮಂಡು (ನೇಪಾಳ): ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.

ಬಜುರಾದ ದಹಕೋಟ್‌ನಲ್ಲಿ ಮೊದಲು 4.8 ತೀವ್ರತೆಯ ಭೂಕಂಪ ಹಾಗೂ ಎರಡನೇ ಭಾರೀ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಜಿಲ್ಲಾ ಪೊಲೀಸ್ ಕಛೇರಿ ಬಾಜೂರದ ಪ್ರಕಾರ, ಭೂಕಂಪನದ ಸಮಯದಲ್ಲಿ ಸ್ಥಳೀಯರು ತಮ್ಮ ಮನೆಗಳಿಂದ ಹೊರಗೆ ಓಡಿ ಹೋದರು. ಪಶ್ಚಿಮ ನೇಪಾಳದ ಪಕ್ಕದ ಜಿಲ್ಲೆಗಳಾದ ಬಾಜುರಾ ಕೂಡ ನೆಲದ ನಡುಗುವಿಕೆಗೆ ಸಾಕ್ಷಿಯಾಗಿದೆ.

‘ನಾವು ಭೂಕಂಪದ ಪರಿಣಾಮವನ್ನು ಖಚಿತಪಡಿಸುತ್ತಿದ್ದೇವೆ. ಇಲ್ಲಿಯವರೆಗೂ ಸಾವು-ನೋವಿನ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ಕಚೇರಿ ಬಾಜುರಾ ತಿಳಿಸಿದ್ದಾರೆ.