Thursday, 12th December 2024

ಸಿಐಎ ನಿರ್ದೇಶಕರಾಗಿ ವಿಲಿಯಂ ಬರ್ನ್ಸ್ ನೇಮಕ

ವಾಷಿಂಗ್ಟನ್: ಶಕ್ತಿಯುತ ಬೇಹುಗಾರಿಕೆ ಸಂಸ್ಥೆ ಅಮೆರಿಕದ ಸಿಐಎ ನಿರ್ದೇಶಕರಾಗಿ ಅನುಭವಿ ರಾಜತಾಂತ್ರಿಕ ವಿಲಿಯಂ ಬರ್ನ್ಸ್   ನೇಮಕವಾಗಿದ್ದಾರೆ.

ಅಮೆರಿಕದ ಹಿರಿಯ ಅಧಿಕಾರಿಯಾಗಿದ್ದ ಬರ್ನ್ಸ್ ರಷ್ಯಾ, ಜೋರ್ಡಾನ್‍ನಲ್ಲಿ ರಾಯಭಾರಿಯಾಗಿ ಹಲವು ಇಲಾಖೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದರು.

ಅಮೆರಿಕ ಅಧ್ಯಕ್ಷರಾದ ಬಿಡೆನ್ ದೇಶದ ಸುರಕ್ಷತೆಗೆ ಹಾಗೂ ವಿಶ್ವದ ಯಾವ ಭಾಗದಲ್ಲಾದರೂ ಬೇಹುಗಾರಿಕೆ ಮಾಡಬಲ್ಲ ಸಿಐಎನ ತಂಡವನ್ನು ಮತ್ತಷ್ಟು ಭದ್ರಗೊಳಿಸುತ್ತಿದ್ದಾರೆ. ಅಮೆರಿಕ ಸಂಸತ್‍ನಲ್ಲಿ ಈ ವಿಷಯ ಕುರಿತು ಟೆಕ್ಸಾಸ್ ಸಂಸದೆ ಟಿಡ್ ಟಗ್ ಪ್ರಸ್ತಾಪ ಮಾಡಿದ ತಕ್ಷಣ ಎಲ್ಲರೂ ಬೆಂಬಲಿಸಿದ್ದರಿಂದ ಧ್ವನಿಮತದ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily