ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pak: ಯುದ್ಧ ನಡೆದರೆ ಯಾರ ಪರ ನಿಲ್ಲುತ್ತೀರಾ? ಪಾಕ್‌ ಧರ್ಮಗುರು ಕೇಳಿದ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಒಂದು ಕಡೆ ಭಾರತ ಯುದ್ಧದ ತಾಲೀಮು ನಡೆಸುತ್ತಿದೆ. ಇನ್ನೊಂದೆಡೆಯಲ್ಲಿ ಪಾಕಿಸ್ತಾನ LOC ಅಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಈ ನಡುವೆ ಇಸ್ಲಾಮಾಬಾದ್‌ನ ಲಾಲ್ ಮಸೀದಿಯ ವಿವಾದಾತ್ಮಕ ಧರ್ಮಗುರು ಮೌಲಾನಾ ಅಬ್ದುಲ್ ಅಜೀಜ್ ಘಾಜಿ ಅವರ ರಿಯಾಕ್ಷನ್‌ ವೈರಲ್‌ ಆಗಿದೆ.

ಯುದ್ಧ ಆದರೆ ಯಾರ ಪರ ನಿಲ್ಲುತ್ತೀರಾ? ಪಾಕ್‌ ಧರ್ಮಗುರು ಹೇಳಿದ್ದೇನು?

Profile Vishakha Bhat May 6, 2025 11:33 AM

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನದ (India-Pak) ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಒಂದು ಕಡೆ ಭಾರತ ಯುದ್ಧದ ತಾಲೀಮು ನಡೆಸುತ್ತಿದೆ. ಇನ್ನೊಂದೆಡೆಯಲ್ಲಿ ಪಾಕಿಸ್ತಾನ LOC ಅಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಈ ನಡುವೆ ಇಸ್ಲಾಮಾಬಾದ್‌ನ ಲಾಲ್ ಮಸೀದಿಯ ವಿವಾದಾತ್ಮಕ ಧರ್ಮಗುರು ಮೌಲಾನಾ ಅಬ್ದುಲ್ ಅಜೀಜ್ ಘಾಜಿ ಅವರ ರಿಯಾಕ್ಷನ್‌ ವೈರಲ್‌ ಆಗಿದೆ. ಅಜೀಜ್ ಘಾಜಿ ಅವರ ಬಳಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ ನೀವು ಪಾಕಿಸ್ತಾನ ಪರ ನಿಲ್ಲುತ್ತೀರಾ ಎಂದು ಕೇಳಲಾಗಿದೆ. ಆದರೆ ಅವರು ಮೌನ ವಹಿಸಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಭಾರತ ಪ್ರತೀಕಾರಕ್ಕಾಗಿ ಕಾಯುತ್ತಿದೆ.

ಪಾಕಿಸ್ತಾನ ಯುದ್ಧೋನ್ಮಾನವಾಗಿದೆ. ಆದರೆ ಅಲ್ಲಿ ಒಳಜಗಳಗಳು ಏರ್ಪಟ್ಟಿರುವುದು ಗೋಚರವಾಗುತ್ತದೆ. ಉಗ್ರವಾದ ಮತ್ತು ರಾಜ್ಯ ಸಂಘರ್ಷಕ್ಕೆ ಬಹಳ ಹಿಂದಿನಿಂದಲೂ ಸಂಬಂಧಿಸಿದ ಸ್ಥಳವಾದ ಲಾಲ್ ಮಸೀದಿಯಲ್ಲಿ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳನ್ನು ಉದ್ದೇಶಿಸಿ ಘಾಜಿ, "ನನಗೆ ಒಂದು ಪ್ರಶ್ನೆ ಇದೆ. ಹೇಳಿ, ಪಾಕಿಸ್ತಾನ ಭಾರತದ ವಿರುದ್ಧ ಹೋರಾಡಿದರೆ, ನಿಮ್ಮಲ್ಲಿ ಎಷ್ಟು ಮಂದಿ ಪಾಕಿಸ್ತಾನವನ್ನು ಬೆಂಬಲಿಸುತ್ತೀರಿ ಮತ್ತು ಅದಕ್ಕಾಗಿ ಹೋರಾಡುತ್ತೀರಿ?" ಎಂದು ಹೇಳಿದರು. ಆದರೆ ಯಾವೊಬ್ಬರೂ ಕೈ ಮೇಲೆ ಮಾಡಲಿಲ್ಲ.



ಇಂದು ಪಾಕಿಸ್ತಾನವು ಅಪನಂಬಿಕೆಯ ವ್ಯವಸ್ಥೆಯನ್ನು ಹೊಂದಿದೆ - ಕ್ರೂರ, ನಿಷ್ಪ್ರಯೋಜಕ ವ್ಯವಸ್ಥೆ. ಅದು ಭಾರತಕ್ಕಿಂತ ಕೆಟ್ಟದಾಗಿದೆ" ಎಂದು ಹೇಳುವ ಮೂಲಕ ಘಾಜಿ ಪಾಕಿಸ್ತಾನಿ ಆಡಳಿತವನ್ನು ಟೀಕಿಸಿದ್ದಾರೆ. ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ದೌರ್ಜನ್ಯಗಳನ್ನು ಉಲ್ಲೇಖಿಸಿದ ಧರ್ಮಗುರು, ಪಾಕಿಸ್ತಾನ ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು. ಬಲೂಚಿಸ್ತಾನದಲ್ಲಿ ನಡೆದದ್ದು, ಪಾಕಿಸ್ತಾನದಲ್ಲಿ ಮತ್ತು ಖೈಬರ್ ಪಖ್ತುಂಖ್ವಾದಾದ್ಯಂತ ಅವರು ಮಾಡಿದ್ದು - ಇವು ದೌರ್ಜನ್ಯಗಳು. ತನ್ನದೇ ರಾಜ್ಯದ ಮೇಲೆ ಬಾಂಬ್‌ ದಾಳಿ ನಡೆಸುತ್ತಾರೆ. ತನ್ನದೇ ನಾಗರಿಕರನ್ನು ಇವರು ಕೊಲ್ಲುತ್ತಾರೆ ಎಂದು ಅಬ್ದುಲ್ ಅಜೀಜ್ ಘಾಜಿ ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ ಉಗ್ರರಿಗೆ ಸಹಾಯ ಮಾಡಿದ್ದ ಶಂಕಿತ ಪೊಲೀಸ್‌ ಚೇಸಿಂಗ್‌ ವೇಳೆ ನದಿಗೆ ಹಾರಿ ಸಾವು

ಮೇ 2 ರಂದು ಜಾಮಿಯಾ ಹಫ್ಸಾ ಮತ್ತು ಲಾಲ್ ಮಸೀದಿಯಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದ ಪರ ಈತ ಮಾತನಾಡುತ್ತಿದ್ದಾನೆ ಎಂದು ಹಲವರು ಟೀಕಿಸಿದ್ದಾರೆ.