Thursday, 12th December 2024

ಯುವ ಗಣಿತಜ್ಞ ಶುವ್ರೊ ಬಿಸ್ವಾಸ್ ಶವ ಹಡ್ಸನ್ ನದಿಯಲ್ಲಿ ಪತ್ತೆ

ನ್ಯೂಯಾರ್ಕ್: ಹಡ್ಸನ್ ನದಿಯಲ್ಲಿ ಭಾರತೀಯ ಮೂಲದ ಯುವ ಗಣಿತಜ್ಞ ಶುವ್ರೊ ಬಿಸ್ವಾಸ್ (31) ಅವರ ಶವ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಶುವ್ರೊ ಬಿಸ್ವಾಸ್ ಅವರು ಕ್ರಿಪ್ಟೋಕರೆನ್ಸಿ ಮತ್ತು ಕೃತಕ ಬುದ್ಧಿಮತ್ತೆಯ ಕುರಿತ ಕೆಲಸದಲ್ಲಿ ತೊಡಗಿಕೊಂಡಿದ್ದರು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು’ ಎಂದು ನ್ಯೂಯಾರ್ಕ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕಳೆದ ವರ್ಷವೇ ಅವನ ವರ್ತನೆಯಲ್ಲಿ ಬದಲಾವಣೆ ಆಗಿದ್ದನ್ನು ಗುರುತಿಸಿ, ಅವನಿಗೆ ಮನೋಚಿಕಿತ್ಸೆಯ ಅಗತ್ಯವಿದೆಯೆಂದು ಕುಟುಂಬದವರು ತಿಳಿಸಿದ್ದೆವು. ಆತ ಚಿಕಿತ್ಸೆ ಪಡೆಯಲು ನಿರಾಕರಿಸುತ್ತಿದ್ದ. ನ್ಯೂರಾಲಾಜಿಸ್ಟ್ ಒಬ್ಬರ ಬಳಿಗೆ ಹೋಗುತ್ತಿದ್ದ ಎಂದು ಶುವ್ರೊನ ಸಹೋದರ ಬಿಸ್ವಾಸ್ ಹೇಳಿದ್ದಾರೆ.

‘ಶುವ್ರೊ ಕ್ರಿಪ್ಟೋಕರೆನ್ಸಿಯ ಸೆಕ್ಯೂರಿಟಿ ಪ್ರೋಗ್ರಾಂ ಕುರಿತು ಕೆಲಸ ಮಾಡುತ್ತಿದ್ದ. ಕೃತಕ ಬುದ್ಧಿಮತ್ತೆಯ ಕುರಿತ ಕೆಲಸಗಳಲ್ಲೂ ತೊಡಗಿಕೊಂಡಿದ್ದ ಎಂದು ಆತನ ಇತ್ತೀಚಿನ ಆನ್‌ಲೈನ್ ಪ್ರೊಫೈಲ್‌ನಲ್ಲಿದೆ.

ಫೆಬ್ರುವರಿಯಲ್ಲಿ ಶುವ್ರೊ ತಾನಿದ್ದ 37ನೇ ಸ್ಟ್ರೀಟ್ ಅಪಾರ್ಟ್‌ಮೆಂಟ್‌ನಲ್ಲಿನ ಮಲಗುವ ಕೋಣೆಯಲ್ಲಿನ ಹಾಸಿಗೆಗೆ ಬೆಂಕಿ ಹಚ್ಚುವುದು, ಅಪಾರ್ಟ್‌ಮೆಂಟಿನ ನಿವಾಸಿಗಳ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ವಕೀಲರೊಬ್ಬರು ಶುವ್ರೊ ವಿರುದ್ಧ ನ್ಯಾಯಾಲಯಕ್ಕೆ ದೂರಿದ್ದರು ಎಂದು ಮೂಲಗಳು ತಿಳಿಸಿವೆ.