Thursday, 12th December 2024

Zakir Naik: ಅನಾಥ ಹುಡುಗಿಯರನ್ನು ಮಗಳೆಂದು ಕರೆಯಲು ಸಾಧ್ಯವಿಲ್ಲ; ಅವರು ಮದುವೆಗೆ ಅರ್ಹರು- ಜಾಕಿರ್‌ ನಾಯ್ಕ್‌ ವಿವಾದ

zakir naik

ಇಸ್ಲಮಾಬಾದ್‌: ಅನಾಥ ಹೆಣ್ಣುಮಕ್ಕಳನ್ನು ಬೆಂಬಲಿಸುವ ಪಾಕಿಸ್ತಾನ್ ಸ್ವೀಟ್ ಹೋಮ್ ಫೌಂಡೇಶನ್ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ವಿವಾದಿತ ಇಸ್ಲಾಮಿಕ್ ಬೋಧಕ ಜಾಕಿರ್‌ ನಾಯ್ಕ್‌(Zakir Naik) ವೇದಿಕೆಯಿಂದ ಏಕಾಏಕಿ ನಿರ್ಗಮಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಬಾಲಕಿಯರಿಗೆ ಪ್ರ‍ಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಬಾಲಕಿಯನ್ನು ಮಗಳು ಎಂದು ಕರೆದಿದ್ದರು. ಅಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾಕಿರ್‌ ನಾಯ್ಕ್‌ ಅವರು ಮದುವೆ ಅರ್ಹರಾಗಿರುವ ಹುಡುಗಿಯರು ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಜಾಕಿರ್‌ ಅವರನ್ನು ಯುವ ಅನಾಥ ಹುಡುಗಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಆಗ ಕಾರ್ಯಕ್ರಮ ನಿರೂಪಕರು ಹೆಣ್ಣು ಮಕ್ಕಳನ್ನು ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸುವಂತೆ ಮನವಿ ಮಾಡಿದರು. ಆಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾಕಿರ್‌ ನಾಯ್ಕ್‌ , ಅನಾಥ ಹುಡುಗಿಯರನ್ನು ಮಗಳು ಎಂದು ಕರೆಯುವುದು ಸರಿಯಲ್ಲ. ನೀವು ಅವರನ್ನು ನಿಮ್ಮ ಹೆಣ್ಣುಮಕ್ಕಳು ಎಂದು ಕರೆಯಲು ಸಾಧ್ಯವಿಲ್ಲ. ಮಹ್ರಂ ಅಲ್ಲದವರು ಮದುವೆಗೆ ಅರ್ಹರಾದವರು ಎಂದು ಹೇಳಿದ್ದಾರೆ. ಅಲ್ಲದೇ ತೀರ ಅಸಮಾಧಾನಗೊಂಡು ಸ್ಥಳದಿಂದ ತೆರಳಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ವಕ್ಫ್‌ ತಿದ್ದುಪಡಿ ಕಾಯ್ದೆ(Waqf Amendment Bill)ಯನ್ನು ಒಗ್ಗಟ್ಟಾಗಿ ನಿಂತು ವಿರೋಧಿಸುವಂತೆ ಭಾರತದ ಮುಸ್ಲಿಮರಿಗೆ ವಿವಾದಾತ್ಮಕ ಧರ್ಮ ಪ್ರಚಾರ ಜಾಕಿರ್‌ ನಾಯ್ಕ್‌(Zakir Naik) ಕರೆ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಜಾಕಿರ್‌ ನಾಯ್ಕ್‌, ಭಾರತೀಯ ವಕ್ಫ್ ಆಸ್ತಿಗಳನ್ನು ಉಳಿಸಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿ! ವಕ್ಫ್‌ನ ಪಾವಿತ್ರ್ಯತೆಯನ್ನು ರಕ್ಷಿಸಲು ಮತ್ತು ಮುಂದಿನ ಪೀಳಿಗೆಗೆ ಅದರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ನಿಲ್ಲೋಣ ಎಂದು ನಾಯ್ಕ್‌ ಟ್ವೀಟ್ ಮಾಡಿದ್ದರು.

“ವಕ್ಫ್‌ನ ಪವಿತ್ರ ಸ್ಥಾನಮಾನವನ್ನು ಉಲ್ಲಂಘಿಸುವ ಮತ್ತು ಇಸ್ಲಾಮಿಕ್ ಸಂಸ್ಥೆಗಳ ಭವಿಷ್ಯದ ಮೇಲೆ ದುಷ್ಟ ಪರಿಣಾಮಗಳನ್ನು ಉಂಟುಮಾಡುವ ಈ ದುಷ್ಟತನವನ್ನು ನಿಲ್ಲಿಸಲು ಇದು ಭಾರತದ ಮುಸ್ಲಿಮರಿಗೆ ತುರ್ತು ಕರೆಯಾಗಿದೆ. ಈ ಮಸೂದೆಯನ್ನು ಅಂಗೀಕರಿಸಲು ನಾವು ಅನುಮತಿಸಿದರೆ ನಾವು ಅಲ್ಲಾನ ಕೋಪ ಮತ್ತು ನಂತರದ ಪೀಳಿಗೆಯ ಶಾಪಕ್ಕೆ ಗುರಿಯಾಗುತ್ತೇವೆ. ದುಷ್ಟತನವನ್ನು ನಿಲ್ಲಿಸಿ. ವಕ್ಫ್ ತಿದ್ದುಪಡಿ ಮಸೂದೆ ಬೇಡ ಎಂದು ಹೇಳಿ! ಎಂದು ಜಾಕಿರ್‌ ನಾಯ್ಕ್‌ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Zakir Naik: ʻವಕ್ಫ್‌ ಕಾಯ್ದೆಯನ್ನು ಒಗ್ಗಟ್ಟಾಗಿ ವಿರೋಧಿಸಿʼ- ಮುಸ್ಲಿಮರಿಗೆ ಜಾಕಿರ್‌ ನಾಯ್ಕ್‌ ಕರೆ; ಕಿರಣ್‌ ರಿಜಿಜು ಖಡಕ್‌ ವಾರ್ನಿಂಗ್‌