ಬೈಕಿನಲ್ಲಿ ಹೊಸತನ, ಬಳಕೆಯಲ್ಲಿ ತಾಜಾತನ
ಬೈಕಿನಲ್ಲಿ ಹೊಸತನ, ಬಳಕೆಯಲ್ಲಿ ತಾಜಾತನ




ಬೈಕೋಬೇಡಿ
ಅಶೋಕ್ ನಾಯಕ್
ಬಣ್ಣಗಳಲ್ಲಿ ವೈವಿಧ್ಯತೆ ಇದ್ದರೆ ಉತ್ತಮ ಎಂದು ಜನ ಭಾವಿಸುತ್ತಾರೆ. ಆದರೆ, ಎಲ್ಲಾ ಬಣ್ಣಗಳಲ್ಲಿ ವಾಹನ ತಯಾರಿಸಿದರೆ ಬೇಡಿಕೆ ದಕ್ಕುವುದೇ? ಇದು ನಮ್ಮೆದುರು ಇರುವ ಮುಖ್ಯ ಪ್ರಶ್ನೆ. ವಾಹನ ಖರೀದಿದಾರರು ಈ ವಿಚಾರದಲ್ಲಿ ಹಲವು ಸುತ್ತಿನ ಆಲೋಚನೆ
ಮಾಡುತ್ತಾರೆ. ಇಲ್ಲಿ ಆಕರ್ಷಕವಾಗಿ ಕಾಣುವ ಬಣ್ಣ, ಲುಕ್, ಸ್ಟೈಲ್ ಮುಂತಾದವು ಗಣನೆಗೆ ಬರುತ್ತದೆ. ಇದರಲ್ಲಿ ತಪ್ಪಿಲ್ಲ ಅಲ್ಲವೆ!
ಟಿವಿಎಸ್ ರೇಡನ್
ಪ್ರತೀ ಲೀಟರಿಗೆ ೬೫ ಕಿಮೀ ಮೈಲೇಜ್ ನೀಡುವ ಈ ಬೈಕಿನಲ್ಲಿ ೧೦ ಲೀಟರ್ ಇಂಧನ ಸಂಗ್ರಹ ಸಾಧ್ಯ. ಸುಮಾರು ೭೦ ಸಾವಿರ ರುಪಾಯಿ ಆಸುಪಾಸು ದರದಲ್ಲಿ ಈ ಬೈಕ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ೫ ವೇರಿಯಂಟ್ ಹಾಗೂ ೧೨ ಬಣ್ಣಗಳಲ್ಲಿ
ಕೂಡ ಲಭ್ಯವಿದೆ.
ಎಂಜಿನ್ ಸಾಮರ್ಥ್ಯ ೧೦೯.೭ ಸಿಸಿ. ಎರಡೂ ಬದಿಯ ಚಕ್ರಗಳಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದೆ. ದೇಶದಲ್ಲಿ ಈ ವಾಹನ ತಯಾರಿಕಾ ಕಂಪೆನಿಯು ರೇಡನ್ ಮಾಡೆಲ್‌ನಲ್ಲಿ ಎರಡು ಹೊಸ ಬಣ್ಣಗಳಲ್ಲಿ ಪರಿಚಯಿಸಿದೆ. ಅದು ಕೆಂಪು ಮತ್ತು
ಕಪ್ಪು ಹಾಗೂ ನೀಲಿ ಮತ್ತು ಕಪ್ಪು ಆಯ್ಕೆಗಳಾಗಿವೆ. ವಾಹನದಲ್ಲಿರುವ ಡ್ರಮ್ ವೇರಿಯಂಟ್ ಬೆಲೆ ೬೮,೦೦೦ ರುಪಾಯಿ. ಈ ವಾಹನವು ಹೀರೋ ಸ್ಪ್ಲೆಂಡರ್ ವಾಹನದ ಉತ್ತರಾಧಿಕಾರಿಯಂತೆ ವರ್ತಿಸುತ್ತದೆ.
ಈ ವಾಹನಕ್ಕಿರುವ ವಿಶೇಷ ಫೀಚರುಗಳೆಂದರೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಜತೆ ಬೀಪಿಂಗ್ ಶಬ್ದ, ಯುಎಸ್ಬಿ ಚಾರ್ಜಿಂಗ್ ಹಾಗೂ ಎಲ್ಇಡಿ ಡಿಆರ್‌ಎಲ್ಸ. ಇದಕ್ಕಿರುವ ರಬ್ಬರ್ ಟ್ಯಾಂಕ್ ಗ್ರಿಪ್ ನೀಡಲು ರಾಯಲ್ ಎನೀಲ್ಡ್ ಕ್ಲಾಸಿಕ್ ಮಾಡೆಲ್‌ನಂತೆ ಕಾಣುವುದು. ಐದು ವರ್ಷದ ವಾರಂಟಿಯೂ ಇದೆ. ಈ ವಾಹನಕ್ಕೆ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ೧೧೦, ಹೋಂಡಾ ಲಿವೋ ಹಾಗೂ ಬಜಾಜ್ ಡಿಸ್ಕವರ್ ೧೧೦ ಮುಂತಾದವು ಸ್ಪರ್ಧೆ ನೀಡಬಲ್ಲವು.
ಯಾಮಾಹಾ ಆರೋಕ್ಸ್ ೧೫೫
ಈ ವಾಹನದ ಇಂಧನ ಸಂಗ್ರಹ ಸಾಮರ್ಥ್ಯ ೫.೫ ಲೀಟರುಗಳು. ಪ್ರತಿ ಲೀಟರು ಪೆಟ್ರೋಲಿಗೆ ೪೫ ರ ಆಸುಪಾಸು ಮೈಲೇಜ್ ನೀಡುವ ಈ ವಾಹನದ್ದು ೧೫೫ ಸಿಸಿ ಎಂಜಿನ್ ಸಾಮರ್ಥ್ಯದ್ದು. ಅಂದಾಜು ಬೆಲೆ ೧.೪೦ ಲಕ್ಷ ರೂಪಾಯಿ.ಈ ವಾಹನದಲ್ಲಿ ಎಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಇದೆ. ರೇಸಿಂಗ್ ಬ್ಲೂ ಹಾಗೂ ಗ್ರೇ ವರ್ಮಿಲಿಯನ್ ವಾಹನಗಳೇ ಎರಡು ವೇರಿಯಂಟ್‌ಗಳು.
ಸೀಟು ಕೆಳಗಿನ ಸಂಗ್ರಹ ತಾಣವು ೨೪.೫ ಲೀಟರಿದೆ. ಎಲ್ಇಡಿ ಹೆಡ್ ಲೈಟ್ಸ್ ಹಾಗೂ ಟೇಲ್ ಲೈಟ್ಸ್, ಬ್ಲೂಟೂಥ್ ಕ್ಲಸ್ಟರ್, ಮಲ್ಟಿ
ಫಂಕ್ಷನ್ ಕೀ, ಸ್ವಯಂ ಚಾಲಿತ ವಾಹನ ಸ್ಟಾರ್ಟ್ ಹಾಗೂ ಬಂದ್ ಮಾಡುವುದು, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ - ಆಫ್ ಪಂಕ್ಷನ್, ಸಿಂಗಲ್ ಚಾನೆಲ್ ಎಬಿಎಸ್ ಮುಂತಾದವು ವಾಹನದ ಇತರ ಫೀಚರುಗಳು.