ಕ್ರಿಪ್ಟೊ ಮೇಲೆ ಎಷ್ಟು ತೆರಿಗೆ ?
ಕ್ರಿಪ್ಟೊ ಮೇಲೆ ಎಷ್ಟು ತೆರಿಗೆ ?
Vishwavani News
September 20, 2022
ಕ್ರಿಪ್ಟೊ ಕರೆನ್ಸಿಗಳ ಜನಪ್ರಿಯತೆಯು, ಸರಕಾರಗಳನ್ನು ಒಂದಲ್ಲಾ ಒಂದು ಇಕ್ಕಟ್ಟಿಗೆ ಸಿಕ್ಕಿ ಹಾಕುತ್ತಿರುವುದು ಈಚಿನ ವರ್ಷಗಳ ವಿದ್ಯಮಾನ! ಈಗ ಕ್ರಿಪ್ಟೊ ವ್ಯವಹಾರಕ್ಕೆ ಬೇರೆಯದೇ ರೀತಿಯಲ್ಲಿ ಜಿಎಸ್‌ಟಿ ಹಾಕಬಹುದೆ ಎಂದು ನಮ್ಮ ದೇಶದ ಜಿಎಸ್‌ಟಿ
ಕೌನ್ಸಿಲ್ ಯೋಚಿಸುತ್ತಿದೆ!
ಕ್ರಿಪ್ಟೊ ಆಸ್ತಿಗಳನ್ನು ಗೂಡ್ಸ್ ಎಂದು ಪರಿಗಣಿಸಬೇಕೆ ಅಥವಾ ಸೇವೆ (ಸರ್ವಿಸ್) ಎಂದು ಪರಿಗಣಿಸಬೇಕೆ ಎಂಬುದರಲ್ಲೂ ಗೊಂದಲವಿದ್ದಂತಿದೆ. ಜಿಎಸ್‌ಟಿ ದರವನ್ನು ನಿರ್ಧ ರಿಸುವ ಮೊದಲು, ಕ್ರಿಪ್ಟೊಕರೆನ್ಸಿಗಳ ತಾಂತ್ರಿಕ ವಿಶೇಷತೆಗಳನ್ನು ವರ್ಗೀಕರಿಸಲು ನಮ್ಮ ದೇಶದ ವಿತ್ತ ಸಚಿವಾಲಯ ಚಿಂತನೆ ನಡೆಸಿದೆ. ಕ್ರಿಪ್ಟೊ ಕರೆನ್ಸಿವ್ಯವಹಾರದ ಕುರಿತಾಗಿ ಇನ್ನೂ ನಿಖರವಾದ ಕಾನೂನುಗಳನ್ನು ರೂಪಿಸಿಲ್ಲವಾದ್ದರಿಂದ, ಆ ಒಂದು ಅಸ್ಪಷ್ಟತೆ ಯಿಂದಾಗಿ, ತನಗೆ ಬರುವ ತೆರಿಗೆ ಮೊತ್ತ ಕಡಿಮೆಯಾಗದಂತೆ ನೋಡಿಕೊಳ್ಳಲು ಸರಕಾರವು ಹೊಸ ನಿಯಮಗಳನ್ನು ರೂಪಿಸುತ್ತಿದೆ.
ಮಿಂಟ್ ಪತ್ರಿಕೆಯ ವರದಿಯ ಪ್ರಕಾರ, ಕ್ರಿಪ್ಟೊ ಆಸ್ತಿಗಳ ಮೇಲೆ ಶೇ.18 ರಿಂದ ಶೇ.28ರ ಸ್ಲಾಬ್ ದರದಲ್ಲಿ ಜಿಎಸ್‌ಟಿ ವಿಧಿಸುವ ಕುರಿತು ಚಿಂತನೆ ನಡೆದಿದೆ. ಈಗ ನಮ್ಮ ದೇಶ ದಲ್ಲಿರುವ ಕಾನೂನಿನ ಚೌಕಟ್ಟಿನಲ್ಲೇ ಕ್ರಿಪ್ಟೊಗಳನ್ನೂ ತರುವಂತಾಗಲು, ಕ್ರಿಪ್ಟೊ ಕರೆನ್ಸಿಗಳ ಗುಣವಿಶೇಷಣಗಳನ್ನು ರಿಡಿಫೈನ್ ಮಾಡುವಲ್ಲೂ ಸರಕಾರ ಆಸಕ್ತಿ ತೋರಿಸುತ್ತಿದೆ.
ಬೆಲೆಯಲ್ಲಿ ವಿಪರೀತ ಏರಿಳಿತ ಕಾಣುತ್ತಿರುವ, ಡಿಜಿಟಲ್ ಮೂಲಕ ಮಾತ್ರ ವ್ಯವಹಾರ ಮಾಡಬಲ್ಲ ಕ್ರಿಪ್ಟೊ ಕರೆನ್ಸಿಗಳು ಹೆಚ್ಚಿನ ದೇಶಗಳಿಗೆ ಸಾಕಷ್ಟು ತಲೆನೋವನ್ನು ತಂದಿರುವುದಂತೂ ನಿಜ. ನಮ್ಮ ದೇಶದಲ್ಲಿ ಕ್ರಿಪ್ಟೊಗಳನ್ನು ಲಾಟರಿ, ಜೂಜು ಮತ್ತು
ಕುದುರೆ ಸವಾರಿಯ ಸಾಲಿಗೆ ಸೇರಿಸಿ ಜಿಎಸ್‌ಟಿ ಸಂಗ್ರಹಿಸಬೇಕು ಎಂಬ ಚಿಂತನೆಯೂ ಮೇ 2022ರ ಸಮಯದಲ್ಲಿ ನಡೆದಿತ್ತು!
ಕುದುರೆ ರೇಸ್, ಲಾಟರಿಗಳಿಗೆ ಈಗ ಇರುವ ಜಿಎಸ್‌ಟಿ ಶೇ.28! ಕ್ರಿಪ್ಟೊ ಕರೆನ್ಸಿಗಳ ಕುರಿತು ಇಂದಿಗೂ ಸ್ಪಷ್ಟವಾದ ಕಾನೂನು ರೂಪಿತವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಕ್ರಿಪ್ಟೊ ಕರೆನ್ಸಿ ಎಂಬ ಡಿಜಿಟಲ್ ಕರೆನ್ಸಿಯ ಕುರಿತು ಸ್ಪಷ್ಟ ನೀತಿ ನಿಯಮ ಗಳು ರೂಪುಗೊಳ್ಳಲು ಇನ್ನೂ ಸಾಕಷ್ಟು ಕಾಲ ಬೇಕಾದೀತು!