ನಮಗೆ ಬೇಡ ಗಾಜಿನ ಮನೆ !

ನಮಗೆ ಬೇಡ ಗಾಜಿನ ಮನೆ !

image-d7e3c79f-0c30-4066-8187-c4047fac886b.jpg
Profile Vishwavani News September 20, 2022
image-e373487e-1fef-48e4-b811-3a52e6275f74.jpg
ಟೆಕ್‌ ನೋಟ ವಿಕ್ರಮ ಜೋಶಿ ಸಿಮೆಂಟಿನ ಹಾಗೂ ಗಾಜಿನ ಗೂಡಿನಂತಹ ಕಟ್ಟಡಗಳ ಬದಲಿಗೆ ನಮ್ಮ ದೇಶದ ಪ್ರಾಚೀನ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪದ ಆಧಾರದ ಮೇಲೆ, ಹೊಸ ತಂತ್ರಜ್ಞಾನ ಬಳಸಿ ಸುಂದರ ಕಟ್ಟಡಗಳು ನಿರ್ಮಾಣಗೊಂಡರೆ ಎಷ್ಟು ಚೆನ್ನ ಅಲ್ಲವೆ! ಇವತ್ತು ಹವಾನಿಯಂತ್ರಿತ ಕಟ್ಟಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಱಕೋವಿಡ್ ಪೂರ್ವದಲ್ಲಿ ನಾವು ಪ್ರತಿ ವರ್ಷವೂ ಮೂವತ್ತು ಶೇಕಡಾ ಅಭಿವೃದ್ಧಿಯ ಪಥದಲ್ಲಿzವು, ೨೦೨೧ರಲ್ಲಿ ಹಿಂದಿನ ವರ್ಷಕ್ಕಿಂತ 175% ಹೆಚ್ಚು ಹವಾನಿಯಂತ್ರಕ ಮಷಿನ್ (ಎಸಿ) ಗಳನ್ನು ಮಾರಿದ್ದೇವೆ’ ಅಂತ ವೋಲ್ಟಾಸ್ ಕಂಪನಿಯ ಸಿಇಓ ಹೇಳುತ್ತಾರೆ. ಎಸಿ ಎಲ್ಲದೇ ಬದುಕುವುದೇ ಕಷ್ಟ ಎನ್ನುವ ಅನುಭವ ನಮ್ಮಲ್ಲಿ ಬಹುತೇಕ ಎಲ್ಲರಿಗೂ ಆಗಿದೆ! ಹಳ್ಳಿಯಲ್ಲಿ ಬದುಕಿದವರಿಗೆ ಗೊತ್ತು ಮಣ್ಣಿನ ಮನೆಯ ಜಾದೂ. ನನಗೆ ಪರಿಚಯ ಇರುವ ರಾಜೀವ್ ಇಲ್ಲೇ ಮುಂಬಯಿನ ದಾದರ್‌ನಲ್ಲಿರುತ್ತಾನೆ. ಮೂವತ್ತು ಮಹಡಿಯ ಅಪಾರ್ಟ್ಮೆಂಟ್. ಇಪ್ಪತ್ತೊಂದನೇ ಮಹಡಿಯಲ್ಲಿ ಇವನ ವಾಸ. ಆತನ ಊರಲ್ಲಿ ಮಣ್ಣಿನ ಮನೆ ಇದೆ, ಅದು ಸಾಕಾಗದು ಎಂದು ತಾಗಿಯೇ ಒಂದು ಆರ್‌ಸಿಸಿ ಮನೆಯನ್ನೂ ಕಟ್ಟಿದ್ದಾರೆ. ಊರು ಹಾಗೂ ಇಲ್ಲಿಯ ವಾಸ್ತವ್ಯದ ಬಗೆಗೆ ಇಬ್ಬರೂ ಚರ್ಚೆ ಮಾಡುತ್ತಿದ್ದೆವು. ಮಣ್ಣಿನ ಮನೆಯಲ್ಲಿzಗ ನಮಗೆ ಎಂದೂ ಫೋನ್ ಬೇಕು ಅನಿಸಿಯೇ ಇರಲಿಲ್ಲ, ಚಳಿಗಾಲದಲ್ಲಿ ಕಂಬಳಿ ಸಾಕಾಗಿತ್ತು. ಯಾವಾಗ ಸಿಮೆಂಟಿನ ಮನೆ ಬಂತೋ ಶುರುವಾಯಿತು ನೋಡಿ, ಮೊದಲು ಟೇಬಲ್ ಫೋನ್ ನಂತರ ಸೀಲಿಂಗ್ ಫ್ಯಾನ್. ಈಗಂತೂ ಎಸಿ ಇಲ್ಲದೇ ಇರುವುದೇ ಕಷ್ಟ ಎನಿಸಿದೆ. ಅತಿ ಹೆಚ್ಚು ಉಷ್ಣತೆ ಮುಂಬಯಿಯಂತ ಶಹರದಲ್ಲಷ್ಟೇ ಅಲ್ಲ ಊರಲ್ಲೂ ಇದೇ ಪರಿಸ್ಥಿತಿ. ಯಾಕೆ ಹೀಗೆ? ನಮ್ಮ ಐಶಾರಾಮಿ ಬದುಕಿನ ಬಯಕೆಗಳು ಹೆಚ್ಚಾಗಿವೆಯೇ? ಕೈಯಲ್ಲಿ ಕಾಸು ಓಡಾಡುತ್ತಿದೆಯೇ? ಅಥವಾ ಹೊರಗಡೆಯ ವಾತಾವರಣವೇ ಹೀಗೋ? ನಾಸಾದ ವರದಿಯ ಪ್ರಕಾರ ೨೦೨೧ ಇತಿಹಾಸದಲ್ಲಿ ಆರನೇಯ ಅತೀ ಉಷ್ಣತೆಯ ವರ್ಷ. ಹತ್ತು ಅತೀ ಹೆಚ್ಚು ಉಷ್ಣತೆಯ ವರ್ಷಗಳಲ್ಲಿ ಒಂಬತ್ತು ವರ್ಷಗಳು, ಈ ಹಿಂದಿನ ದಶಕದಲ್ಲೇಬಂದಿವೆ. ಇದಕ್ಕೆ ಹಲವಾರು ಕಾರಣ ಇರಬಹುದು, ಅದರಂದು ಕಟ್ಟಡಗಳು! ಜಗತ್ತಿನ ಒಟ್ಟೂ ಇಂಗಾಲದ ಡೈಆಕ್ಸೈಡ್ ಸೂಸುವಿಕೆಯ ಮೂರರಲ್ಲಿ ಒಂದು ಭಾಗ ಕಟ್ಟಡಗಳ ನಿರ್ಮಾಣ ಕೈಗಾರಿಕೆಯಿಂದ ಬರುತ್ತದೆ. ಸಿಮೆಂಟ್, ಸ್ಟೀಲ, ಈಗ ಗ್ಲಾಸ್. ಪ್ರತಿಯೊಂದು ವಸ್ತುಗಳೂ ಕೂಡ ಪರಿಸರಕ್ಕೆ ಹಾನಿ ಮಾಡುವಂತಹದ್ದೇ. ಸಿಮೆಂಟ್, ಸ್ಟೀಲ್ ಹಾಗೂ ಗ್ಲಾಸಿನ ತಯಾರಿಕೆಯಿಂದ ಹಿಡಿದು ಅದರ ಬಳಕೆಯಲ್ಲೂ ಪರಿಸರ ಮಾಲಿನ್ಯ ಇದ್ದಿದ್ದೇ. ಯಾಕೆ ನಮಗೆ ಸಿಮೆಂಟ್ ಹಾಗೂ ಗಾಜಿನ ಕಟ್ಟಡಗಳು ಬೇಕು? ಎರಡು ಮುಖ್ಯವಾದ ಕಾರಣಗಳು. ಮೊದಲನೆಯದು ಕಟ್ಟಡ, ಮನೆಗಳ ಹೆಚ್ಚಾದ ಬೇಡಿಕೆ. ಅದನ್ನು ಪುರೈಸಲು ಹೆಚ್ಚು ಕಚ್ಛಾ ಸಾಮಗ್ರಿಗಳು ಬೇಕು, ಅದನ್ನು ತಯಾರಿಸಬೇಕು. ಇದಕ್ಕೆಲ್ಲ ಸಿಮೆಂಟು, ಇಟ್ಟಿಗೆ, ಗ್ಲಾಸ್ ಎಲ್ಲವೂ ಹೇಳಿ ಮಾಡಿಸಿದ್ದು. ಇತ್ತೀಚಿಗೆ ಇಟ್ಟಿಗೆ ಹೋಗಿ ಸಿಮೆಂಟ್ ಬ್ಲಾಕನ್ನೇ ಕಟ್ಟಡಕ್ಕೆ ಬಳಸುವುದು ಗಮನೀಯ. ಪಾಶ್ಚತ್ಯ ವಾಸ್ತುಶಿಲ್ಪದ ಅಂಧಾನುಕರಣೆ ಎರಡನೆಯ ಕಾರಣವೆಂದರೆ ಪಾಶ್ಚಾತ್ಯ ಆಧುನಿಕ ವಾಸ್ತುಶಿಲ್ಪದ ಪ್ರಭಾವ. ಅಲ್ಲಿಯ ಬಹುಮಹಡಿ ಕಟ್ಟಡಗಳು, ಗಾಜಿನ ಮನೆಗಳು ನಮ್ಮ ವಾಸ್ತುಶಿಲ್ಪ ಕಾರರನ್ನು ಅತೀವವಾಗಿ ಪ್ರಭಾವಿಸಿವೆ. ಕಾಶ್ಮೀರದಿಂದ ಕನ್ಯಾಕುಮಾರಿ, ಬಂಗಾಳದಿಂದ ಗುಜರಾತಿನ ತನಕ ಒಂದೇ ರೀತಿಯ ವಾಸ್ತುಶಿಲ್ಪ - ಸಿಮೆಂಟಿನ ಗೂಡು, ಗಾಜಿನ ಮನೆ. ಮೊದಲಿನ ಹಾಗೇ ರಾಜ್ಯ ರಾಜ್ಯದ ನಡುವೆ ವಿವಿಧ ರೀತಿಯ ಕಟ್ಟಡಗಳನ್ನು ಎಲ್ಲಿ ಕಾಣುತ್ತಿದ್ದೇವೆ? ಉತ್ತರ ಭಾರತದ ವಾತಾವರಣಕ್ಕೆ ಒಂದು ರೀತಿಯ ಕಟ್ಟಡಗಳು ಬೇಕು, ದಕ್ಷಿಣ ಭಾರತಕ್ಕೆ ಇನ್ನೊಂದು. ಸಂಶೋಧನೆಯ ಪ್ರಕಾರ ಉತ್ತರ ಭಾರತಕ್ಕೆ ಗಾಜಿನ ಮನೆ ಒಗ್ಗೂಡಬಹುದು. ಆದರೆ ದಕ್ಷಿಣ ಭಾರತಕ್ಕೆ ಅದು ಸಮಸ್ಯೆ. ಸಿಮೆಂಟ್ ಹಾಗೂ ಗಾಜು ಎರಡೂ ಶಾಖವನ್ನು ಹೀರುತ್ತವೆ. ಇದರಿಂದಾಗಿ ಕಟ್ಟಡದ ಒಳಗೆ ತಾಪ ಹೆಚ್ಚುತ್ತದೆ. ಇದನ್ನು ಕಡಿಮೆ ಮಾಡಲು ಏರ್ ಕೂಲ್ಡ ಎಸಿ. ಒಳಗಿನ ಉಷ್ಣತೆಯನ್ನು ಹೊರಗಡೆ ಸೂಸುತ್ತದೆ. ಇದರಿಂದ ಹೊರಗಡೆಯ ತಾಪಮಾನ ಇನ್ನಷ್ಟು ಹೆಚ್ಚುತ್ತದೆ. ಇದರಿಂದಾಗಿ ತಾಪಮಾನದಲ್ಲಿ ಏರುಪೇರು ಕಾಣಬರುತ್ತದೆ. ಹೀಗಿರುವಾಗ ನಮ್ಮಲ್ಲಿಯ ಆರ್ಕಿಟೆಕ್ಟ್ ಗಳು ಪರಿಸರಕ್ಕನುಗುಣವಾಗಿ ಕಟ್ಟಡ ವಿನ್ಯಾಸ ಮಾಡಬೇಕು. ಇತ್ತೀಚಿಗೆ ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳು ನಡೆದಿವೆ. ಮೈಸೂರಿನ ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಹಳೇ ಕಾಲದ ಮನೆಯ ಪರಿಕಲ್ಪನೆಯಲ್ಲಿ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮನೆಗಳನ್ನು ನಿರ್ಮಾಣ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸುಮಾರು ಹದಿನೈದು ಮಣ್ಣಿನ ಮನೆಗಳನ್ನು ಇವರು ಕಟ್ಟಿದ್ದಾರೆ. 2019ರಲ್ಲಿ ಒಂದು ಪತ್ರಿಕೆ ವರದಿ ಮಾಡಿದಂತೆ ಮಂಗಳೂರು, ಬೆಂಗಳೂರು, ಹಾಸನ, ಕೇರಳದಲ್ಲಿ ಮಣ್ಣಿನ ಮನೆಯ ಶೈಲಿಯತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಈ ಮಣ್ಣಿನ ಮನೆಯನ್ನು ಆಧುನಿಕ ತಂತ್ರeನ ಬಳಸಿ ಕಟ್ಟಲಾಗುತ್ತಿದೆ ಎನ್ನುವುದು ಗಮನಾರ್ಹ. ಕಾರ್ಬನ್ ಫ್ರೀ ಸುಣ್ಣದ ಗಾರೆ ನಮ್ಮ ದೇಶದಲ್ಲಿ ಸುಣ್ಣದಕಲ್ಲು ಹಾಗೂ ಜಿಪ್ಸಮ್ ಗಾರೆಯನ್ನು ಶತಮಾನಗಳಿಂದ ಬಳಸುತ್ತಿದ್ದೇವೆ. ಇದು ಕಾರ್ಬನ್ ಫ್ರೀ. ಇಂದು ಎಲ್ಲರೂ ಕಾರ್ಬನ್ ಫ್ರೀ ಕಟ್ಟಡ ನಿರ್ಮಿಸಲು ಹಾತೊರೆಯುತ್ತಿರುವಾಗ ನಮ್ಮ ಪುರಾತನ ಕಾಲದ ವ್ಯವಸ್ಥೆಯನ್ನು ಹೊಸ ತಂತ್ರಜ್ಞಾನದೊಳಗೆ ಬೆಸೆಯಬಾರದೇತಕೆ? ಅಂತಹದೇ ಒಂದು ಹೊಸ ತಂತ್ರಜ್ಞಾನ ‘ರ‍್ಯಾಮ್ಡ ಅರ್ಥ’. ಇದರ ಮುಖಾಂತರ ನಿರ್ಮಿಸಿದ ಮನೆಗಳು ಚೀನಾದ ಮಹಾಗೋಡೆಯಂತೆ ಸಾವಿರಾರು ವರ್ಷಗಳ ಬಾಳಿಕೆ ಹೊಂದಿದೆ. ಇದನ್ನು ಘಾನಾ ದೇಶದಲ್ಲಿ ಬಳಸುತ್ತಿದ್ದಾರಂತೆ. ಇದೇ ಪ್ರಯೋಗ ದಕ್ಷಿಣ ಭಾರತದ ಕೆಲವು ಕಡೆ ಮಾಡುತ್ತಿದ್ದಾರೆ. ಇದಲ್ಲದೆ ಇನ್ನೂ ಹಲವು - ಸೆಲ ಹೀಲಿಂಗ್ ಕಾಂಕ್ರೀಟ, ಬೈಯೋ-ಮ, ಬೈಯೋಪ್ಲಾಸ್ಟಿಕ್, ಸ್ಪೈಡರ್ ಸಿಲ್ಕ್, ನ್ಯಾನೋ ಮಟಿರಿಯಲ, ಕಾರ್ಬನ್ ಫೈಬರ್, ಕ್ರಾಸ್ ಲ್ಯಾಮಿನೇಟೆಡ್ ಟಿಂಬರ್, ಅಲ್ಯುಮಿನಿಯಮ್ ಮಿಶ್ರಲೋಹ, ಗ್ರಾಫೀನ್ ಗ್ಲಾಸ್ - ತಂತ್ರಜ್ಞಾನಗಳ ಆವಿಷ್ಕಾರ ನಡೆಯುತ್ತಿದೆ. ಅಮೆರಿಕದಲ್ಲಿ ಒಂದು ಸಂಸ್ಥೆಯಿದೆ- LEED - Leadership in Energy and Environmental Design. ಅವರು ಹಸಿರು ಕಟ್ಟಡಕ್ಕೆ (ಗ್ರೀನ್ ಬಿಲ್ಡಿಂತ್) ಸಂಬಂಧಿಸಿದಂತೆ ಸರ್ಟಿಫಿಕೇಟ್ ಕೊಡುತ್ತಾರೆ. ಭಾರತದಲ್ಲೂ ವಿಶೇಷವಾಗಿ ನಮ್ಮ ನೆಲ ಜಲವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬಲ್ಲ ಇಂತಹ ಒಂದು ಸಂಸ್ಥೆ ರಚನೆಯಾಗಬೇಕು. ಗಾಜಿನ ಗೂಡು ಅವೈಜ್ಞಾನಿಕ! ಅವರು ಬ್ರೆಡ್ ತಿನ್ನುತ್ತಾರೆ ಅಂತ ನಾವು ದೋಸೆಯನ್ನು ಬಿಟ್ಟರೆ ಅದು ನಮ್ಮ ದೇಹಕ್ಕೆ ಹಿತವಲ್ಲ. ಹೊಸತು ಎಂದು ರುಚಿ ನೋಡಬಹುದು. ಆದರೆ ಅದೇ ಜೀವನ ಪದ್ಧತಿ ಆದಾಗ ಅದರ ಅಡ್ಡ ಪರಿಣಾಮಗಳು ಹಲವಾರು. ದೆಹಲಿಯಲ್ಲಿ ಒಂದು ತರಹ, ಚೆನ್ನೈ ನಲ್ಲಿ ಇನ್ನೊಂದು ತರಹ, ತ್ರಿವೆಂದ್ರಂನಲ್ಲಿ ಮತ್ತೊಂದು, ಬೆಂಗಳೂರಿಗೆ ಬೇರೆಯೇ ವಿನ್ಯಾಸ ಬೇಕು. ಹವಾಮಾನಕ್ಕೆ ತಕ್ಕ ಆಹಾರ, ಉಡುಪು ಹಾಗೂ ವಸತಿ ಇದು ಮೂಲಭೂತ ವಿಚಾರ. ಇದರ ಸುತ್ತಲೂ ವಾಸ್ತುಶಿಲ್ಪ ಹಾಗೂ ಅಭಿಯಾಂತ್ರಿಕ ವಿದ್ಯಾರ್ಥಿಗಳು, ಕಂಪನಿಗಳು ಕೆಲಸ ಮಾಡಬೇಕು. ಸಿಮೆಂಟಿನ ಹಾಗೂ ಗಾಜಿನ ಗೂಡು ಮರೆಯಾಗಿ ನಮ್ಮ ದೇಶದ ಪ್ರಾಚೀನ ವಾಸ್ತುಶಿಲ್ಪದ ಆಧಾರದ ಮೇಲೆ ಹೊಸ ತಂತ್ರಜ್ಞಾನ ಬಳಸಿ ಸುಂದರ ಮನೆಗಳ ನಿರ್ಮಾಣವಾಗಲಿ ಎನ್ನುವುದೇ ಆಶಯ!
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ