ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿವಿ ಮೂಲಕ ಎನ್‌ಎಫ್‌ಟಿ ವ್ಯವಹಾರ

ಟಿವಿ ಮೂಲಕ ಎನ್‌ಎಫ್‌ಟಿ ವ್ಯವಹಾರ

ಟಿವಿ ಮೂಲಕ ಎನ್‌ಎಫ್‌ಟಿ ವ್ಯವಹಾರ

Profile Vishwavani News Sep 6, 2022 6:12 PM
image-db59166e-86d7-4ab0-a694-890c05b45a14.jpg
ಅಜಯ್ ಅಂಚೆಪಾಳ್ಯ ಎಲ್ ಜಿ ಸಂಸ್ಥೆಯು ಹೊಸ ಹೊಸ ಸಾಹಸಗಳನ್ನು ಕೈಗೊಳ್ಳುವಲ್ಲಿ ಸದಾ ಮುಂದು. ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆ ಈಗ ಎನ್ ಎಫ್ಟಿ (ನಾನ್ ಫಂಜಿಬಲ್ ಟೋಕನ್) ಕ್ಷೇತ್ರಕ್ಕೆ ಕಾಲಿರಿಸಿದೆ. ಅಮೆರಿಕದಲ್ಲಿರುವವರು ಈಗ ಒಂದು ಎಲ್‌ಜಿ ಟಿ.ವಿ. (ನಿರ್ದಿಷ್ಟ ಮಾಡೆಲ್) ಹೊಂದಿದ್ದರೆ, ಆ ಟಿವಿ ಮೂಲಕ ‘ಎಲ್‌ಜಿ ಆರ್ಟ್ ಲ್ಯಾಬ್ ವೇದಿಕೆ’ಯನ್ನು ಪ್ರವೇಶಿಸಬಹುದು. ಮತ್ತು ಆ ವೇದಿಕೆಯ ಮೂಲಕ ಎನ್‌ಎಫ್ಟಿ ಅಥವಾ ನಾನ್ ಫಂಜಿಬಲ್ ಟೋಕನ್‌ಗಳನ್ನು ಮಾರಲು ಮತ್ತು ಖರೀದಿಸಲು, ಮನೆಯಲ್ಲಿರುವ ಟಿವಿಯನ್ನು ಬಳಸಿ ತೊಡಗಿಕೊಳ್ಳಬಹುದು! ಇದಕ್ಕಾಗಿ ಎಲ್‌ಜಿ ಸಂಸ್ಥೆಯು ಒಂದು ಮೊಬೈಲ್ ವ್ಯಾಲೆಟ್‌ನ್ನು ಸಹ ಆರಂಭಿಸಿದೆ. ಅದರಲ್ಲಿ ಡಿಜಿಟಲ್ ಅಸೆಟ್‌ಗಳನ್ನು ಸಂಗ್ರಹಿಸಬಹುದು, ಅದನ್ನು ಹಣವನ್ನಾಗಿ ಉಪ ಯೋಗಿಸಲೂ ಬಹುದು! ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಆರ್ಟ್ ವರ್ಕ್ ಮತ್ತು ಫೋಟೋ ಗಳನ್ನು ಸಂಗ್ರಹಿಸಿ ಎನ್‌ಎಫ್ ಟಿ ಟೋಕನ್‌ಗಳ ಮೂಲಕ ಮಾರುವ ವ್ಯವಸ್ಥೆಗೆ ಎಲ್‌ಜಿ, ಈ ಮೂಲಕ ತನ್ನ ವಿನೂತನ ಕೊಡುಗೆ ನೀಡಿದೆ. ಇಂದು ಎನ್ ಎಫ್ ಟಿ ಮೂಲಕ ವ್ಯವಹಾರ ನಡೆಸುವುದು ಕೆಲವು ವಲಯಗಳಲ್ಲಿ ಮಾಮೂಲು ಎನಿಸಿದೆ. ಪ್ರಖ್ಯಾತ ಕಲಾವಿದರು ತಮ್ಮ ಕೃತಿಗಳನ್ನು, ಅಪರೂ ಪದ ಫೋಟೋಗಳನ್ನು ಎನ್‌ಎಫ್ ಟಿಯಾಗಿ ಪರಿವರ್ತಿಸಿ, ಮಾರಾಟ ಮಾಡುತ್ತಿದ್ದಾರೆ. ಅದನ್ನು ಖರೀದಿಸಿದವರು, ಮುಂದೊಂದು ದಿನ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ. ಈ ಎಲ್ಲಾ ವ್ಯವಹಾರಗಳು ಡಿಜಿಟಲ್ ಕರೆನ್ಸಿ ಮೂಲಕ ನಡೆಯುತ್ತದೆ. ಅಂತಹ ಕೊಡು ಕೊಳ್ಳುವಿಕೆಯಲ್ಲಿ ಎಲ್‌ಜಿ ಟಿವಿಗಳನ್ನು ಬಳಸಬಹುದು ಎಂಬುದು ಸಹ ವಿಶೇಷ.