ವಾಹನ ಖರೀದಿಯೂ ಶಾಪಿಂಗ್ !
ವಾಹನ ಖರೀದಿಯೂ ಶಾಪಿಂಗ್ !
Vishwavani News
September 6, 2022
ಬೈಕೋಬೇಡಿ
ಅಶೋಕ್ ನಾಯಕ್
ವಾಹನ ಖರೀದಿ ಎಂಬುದು ಈಗ ಒಂದು ರೀತಿಯ ಶಾಪಿಂಗ್! ಹೊರಗೆ ತಿರುಗಾಟಕ್ಕೆ ಎಂದು ಹೋದವರು, ಆಗಿನ ಕಾಲದಲ್ಲಿ ಹೊಸ ಹಣ್ಣು ಬಂದಿದೆ, ಹೊಸ ಬಟ್ಟೆ ಬಂದಿದೆ ಎಂದು ಹೇಳೋದು ಕಾಮನ್ ಆದರೆ, ಹೊಸ ಮಾಡೆಲ್ ವಾಹನ ಬಂದಿದೆ. ಅದು ನಮ್ಮ ಮನೆಯಲ್ಲಿ ಮೊದಲು ಇರಬೇಕು ಎನ್ನುವ ಆಕಾಂಕ್ಷೆ ವಾಹನಕ್ಕಿರುವ ಲಕ್ಷಗಟ್ಟಲೆ ದರವನ್ನು ಕ್ಯಾರೆ ಇಲ್ಲದಂತೆ ಮಾಡಿದೆ.
ಒಬ್ಬನ ಮಾಸಿಕ ಆದಾಯ ಸುಮಾರು ಲಕ್ಷ ರೂಪಾಯಿ ಆಸುಪಾಸಿದ್ದರೆ, ವಾಹನ ಖರೀದಿಯೂ ಶಾಪಿಂಗ್‌ನಂತೆ ಆಗಿದೆ. ಅಗತ್ಯ ವಸ್ತುಗಳ ಖರೀದಿ ಜತೆ, ಈ ವಾಹನ ನಮ್ಮಲ್ಲೂ ಇರಬೇಕು ಎಂಬ ಮನಸ್ಸಿನ ಬಯಕೆ, ಈಗ ಹೆಚ್ಚು ಹೊಸ ಹೊಸ ಮಾಡೆಲ್ ವಾಹನ ಮಾರುಕಟ್ಟೆಯಲ್ಲಿ ಕಾಣಲು ಆರಂಭಿಸಿವೆ ಎನ್ನಲಡ್ಡಿಯಿಲ್ಲ.
ಬಜಾಜ್ ಪಲ್ಸರ್ ಎನ್‌ಎಸ್ 160
೧೬೦.೩ ಸಿಸಿ ಎಂಜಿನ್ ಶಕ್ತಿ, ಪ್ರತೀ ಲೀಟರ್ ಪೆಟ್ರೋಲಿನಲ್ಲಿ ಸುಮಾರು ೪೧ ಕಿ.ಮೀ. ದೂರ ಚಲಿಸಬಹುದಾದ ಈ ಬಜಾಜ್ ಬೈಕಿನಲ್ಲಿ ಸುಮಾರು ೧೨ ಲೀಟರ್ ಪೆಟ್ರೋಲ್ ಸಂಗ್ರಹವಾಗುವುದು. ರು.ಒಂದು ಲಕ್ಷ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ದರಕ್ಕೆ ಮಾರಾಟಕ್ಕೆ ಲಭ್ಯವಾಗಿರುವ ಈ ವಾಹನದಲ್ಲಿ ಒಂದು ವೇರಿಯಂಟ್ ಹಾಗೂ ಮೂರು ಬಣ್ಣಗಳಲ್ಲಿ ಲಭ್ಯವಿದೆ. ೧೫೧ ಕೆಜಿ ತೂಕದ ಈ ವಾಹನವು ಪಲ್ಸರ್ ೧೫೦ ಮಾಡೆಲಗೆ ಹೋಲಿಸಿದರೆ ಬಳಕೆಯಲ್ಲಿ ಸಲೀಸು.
ಈ ವಾಹನದಲ್ಲಿ ೧೬೦ ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ ಎಂಜಿನ್, ೧೫.೩ ಬಿಹೆಚ್ಪಿ ಶಕ್ತಿಯನ್ನು ಹೊರಸೂಸುವುದು. ಐದು ಗೇರ್ ಬಾಕ್ಸ್‌ಗಳಿವೆ. ಈ ಮಾಡೆಲ್ ವಾಹನದಲ್ಲಿ ಪರ್ಲ್ ವೈಟ, ರೆಡ್ ಹಾಗೂ ಪಿವ್ಟರ್ ಗ್ರೇ ಮುಂತಾದ ಬಣ್ಣಗಳಲ್ಲಿ ಲಭ್ಯವಿದೆ. ಈ ವಾಹನಕ್ಕೆ ಹೋಂಡಾ ಸಿಬಿ ಹಾರ್ನೆಟ್ ೧೬೦ಆರ್, ಹೋಂಡಾ ಎಕ್ಸ್ ಬ್ಲೇಡ್, ಸುಜುಕಿ ಗಿಕ್ಸರ್ ಹಾಗೂ
ಯಮಾಹಾ ಎಫ್ ಜಡ್‌ಎಸ್ ೩.೦ ಸ್ಪರ್ಧೆ ನೀಡಬಲ್ಲವು.
ಸುಜುಕಿ ಅವೆನಿಸ್ ೧೨೫
೯೦ ಸಾವಿರ ರುಪಾಯಿ ಆಸುಪಾಸು ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಜುಕಿ ಅವೆನಿಸ್ ಮಾಡೆಲ್ ವಾಹನದಲ್ಲಿ ೫.೨ ಲೀಟರ್ ಪೆಟ್ರೋಲ್ ಸಂಗ್ರಹ ಸಾಮರ್ಥ್ಯವಿದೆ. ೧೨೪ ಸಿಸಿ ಎಂಜಿನ್ ಶಕ್ತಿಯನ್ನು ಹೊಂದಿದೆ. ಇದಕ್ಕೆ ಕಂಬೈಂಡ್ ಬ್ರೇಕಿಂಗ್ ಅಳವಡಿಸ ಲಾಗಿದ್ದು, ಈ ಮಾಡೆಲ್ ಮಾರುಕಟ್ಟೆಗೆ ಇಳಿದಾಗ ಸ್ಪೋರ್ಟ್ಸ್ ವಾಹನ ಬಂತೆಂದೇ ಭಾವಿಸಲಾಗಿತ್ತು. ಕಾರಣ, ಇದರ ಬಿಡಿ ಭಾಗಗಳು ನೋಡಲು ಅಸಾಮಾನ್ಯವಾಗಿದ್ದು, ಸಾಮಾನ್ಯ ಬೈಕಿನಂತೆ ಕಾಣಲ್ಲ.
ಹೆಚ್ಚು ಯುವ ಜನಾಂಗವನ್ನು ಆಕರ್ಷಿಸುವಂತಿದೆ. ಹೆಡ್ ಹಾಗೂ ಟೇಲ್ ಲ್ಯಾಂಪ್‌ಗಳು ಎಲಇಡಿ ಸೌಲಭ್ಯವನ್ನು ಹೊಂದಿದ್ದು, ಇಂಡಿಕೇಟರ್‌ಗಳಲ್ಲಿಯೂ ಒಳಗೊಂಡಿದೆ. ಬ್ಲೂಟೂತ್ ಸೌಲಭ್ಯ, ನ್ಯಾವಿಗೇಶನ್ ಎಕ್ಸೆಸ್, ಸಂದೇಶ ಕಳಿಸಲು ಹಾಗೂ ಕರೆಯ ಎಚ್ಚರಿಕೆ ನೀಡುವುದು. ನಾಲ್ಕು ಬಣ್ಣಗಳಲ್ಲಿ ಈ ವಾಹನ ಮಾರಾಟಕ್ಕೆ ಲಭ್ಯವಿದೆ. ಟಿವಿಎಸ್ ಎನ್ಟಾರ್ಕ್ ೧೨೫, ಹೋಂಡಾ ಗ್ರಾಜಿಯಾ, ಎಪ್ರಿಲಿಯಾ ಎಸ್‌ಆರ್‌ಮತ್ತು ಹೀರೋ ಮೇಸ್ಟ್ರೋ ಎಜ್ ೧೨೫ ಮಾಡೆಲ್ ಗಳು ನಿಕಟ ಸ್ಪರ್ಧೆ ನೀಡಬಲ್ಲವು.