ಬೆಂಗಳೂರು : ಪ್ರತಿ ವರ್ಷವೂ ದೀಪಾವಳಿ ತನ್ನೊಂದಿಗೆ ಹೊಸ ಹೊಸ ಭರವಸೆಗಳನ್ನು ತರುತ್ತದೆ. ದೀಪಾವಳಿ (Deepavali 2024) ಆರ್ಥಿಕ ಸಮೃದ್ಧಿ ಮತ್ತು ಭದ್ರತೆಯ ಸಂಕೇತ. ಈ ಸಮಯದಲ್ಲಿ ಕುಟುಂಬಗಳು ಅತ್ಯುತ್ತಮವಾದ ಹೂಡಿಕೆಗಳನ್ನು ಮಾಡಲು ಸಕ್ರಿಯವಾಗಿ ಹುಡುಕುತ್ತವೆ. ಅದು ಸಂಪತ್ತಿನ ಬೆಳವಣಿಗೆಗೆ ಸಹಾಯ ಮಾಡಬೇಕು ಜೊತೆಗೆ ರಕ್ಷಣೆಯನ್ನೂ ನೀಡಬೇಕು. ಫ್ಯೂಚರ್ ಜೆನೆರಾಲಿ ಇಂಡಿಯಾ ಲೈಫ್ ಇನ್ಶೂರೆನ್ಸ್ ನ ಜೀವಮಾನ ಪಾಲುದಾರ ಯೋಜನೆ ಇಂತಹುದೊಂದು ಸುವ್ಯಸ್ಥಿತ ಹೂಡಿಕೆಯ ಅವಕಾಶ ನೀಡುತ್ತದೆ. ಈ ಯೋಜನೆ ಆಜೀವ ಆದಾಯ, ಆರ್ಥಿಕ ಭದ್ರತೆ ಮಾತ್ರವಲ್ಲದೆ ಬೆಳವಣಿಗೆಯ ಅವಕಾಶವನ್ನೂ ಹೊಂದಿದೆ.
ನೀವು ಜೀವನದ ಯಾವುದೇ ಹಂತದಲ್ಲಿದ್ದರೂ ನಿಮಗೆ ಆರ್ಥಿಕ ಸ್ಥಿರತೆ ದೊರೆಯುವಂತೆ ಯೋಜನೆ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ಖಾತರಿಪಡಿಸಿದ ಆದಾಯ ಮತ್ತು ಸುರಕ್ಷಿತ ಭವಿಷ್ಯದ ಭರವಸೆ ಇರುವುದರಿಂದ ಎಲ್ಲ ವ್ಯಕ್ತಿಗಳಿಗೂ ಮತ್ತು ಕುಟುಂಬಗಳಿಗೂ ಸರಿಹೊಂದುತ್ತದೆ. ತುಂಬು 100 ವರ್ಷ ವಯಸ್ಸಿನವರೆಗೂ ಆದಾಯ ನೀಡುವುದರಿಂದ ಪಾಲಿಸಿದಾರರು ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಇದೊಂದು ನಿರಂತರ ಸಂಪನ್ಮೂಲವಾಗಬಹುದು. ದೀಪಾವಳಿಯ ಶಾಶ್ವತ ಸಮೃದ್ಧಿ ಸಂದೇಶಕ್ಕೆ ಸರಿಹೊಂದುವಂತಿದೆ ಈ ಯೋಜನೆ.
ಜೀವಮಾನ ಪಾಲುದಾರ ಯೋಜನೆ ಕೇವಲ ಆದಾಯವನ್ನಷ್ಟೇ ನೀಡುವುದಿಲ್ಲ. ಇದನ್ನೊಂದು ಆರ್ಥಿಕ ಸುರಕ್ಷತೆಯ ಕವಚ ಎನ್ನಬಹುದು (ಸೇಫ್ಟಿ ನೆಟ್). ಜೀವ ವಿಮೆಯ ಸೌಲಭ್ಯವಿರುವುದರಿಂದ ಈ ಯೋಜನೆಯು ಅನಿರೀಕ್ಷಿತ ಸಂದರ್ಭಗಳಲ್ಲಿ ಪಾಲಿಸಿದಾರರ ಕುಟುಂಬಗಳಿಗೆ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ದೀಪಾವಳಿಯ ಸಡಗರದ ಜೊತೆ ಜೊತೆಗೆ ಮನಸ್ಸಿಗೆ ಶಾಂತಿಯನ್ನೂ ನೀಡುತ್ತದೆ. ಬಹುಪಾಲು ಜನರಿಗೆ, ಈ ಆದಾಯ ಮತ್ತು ರಕ್ಷಣೆ ಎಂಬ ಎರಡು ಆಶ್ವಾಸನೆಗಳು ಕುಟುಂಬದ ಭವಿಷ್ಯದ ಬಗ್ಗೆ ನಿರಾಳವನ್ನು ಉಂಟುಮಾಡುತ್ತದೆ.
ಈ ಯೋಜನೆಯ ಬಹುದೊಡ್ಡ ವೈಶಿಷ್ಟ್ಯವೆಂದರೆ ನಗದು ಬೋನಸ್ ಗಳು (ಘೋಷಣೆ ಮಾಡಿದರೆ). ಇದು, ಸಾಂಪ್ರದಾಯಿಕ ದೀಪಾವಳಿ ಬೋನಸ್ ಗಳಂತೆ ನೆರವಾಗುತ್ತದೆ; ಸೀಸನ್ ಗೆ ಹೆಚ್ಚುವರಿ ಉತ್ಸಾಹವನ್ನು ತುಂಬುತ್ತದೆ. ಈ ನಗದು ಬೋನಸ್‌ಗಳು ಹೆಚ್ಚುವರಿ ಆದಾಯ ನೀಡುತ್ತವೆ, ಪಾಲಿಸಿದಾರರಿಗೆ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಅಥವಾ ಅವರ ಉಳಿತಾಯಕ್ಕೆ ಧಕ್ಕೆಯಾಗದಂತೆ ದೀರ್ಘಾವಧಿ ಗುರಿಗಳನ್ನು ಸಾಧಿಸಲು ಬೇಕಾದ ನಮ್ಯತೆಯನ್ನು ಒದಗಿಸುತ್ತದೆ.
ಇದನ್ನೂ ಓದಿ: World Stroke Day : ಮೆದುಳಿನ ಸ್ಟ್ರೋಕ್ ಎಂದರೇನು? ಅದನ್ನು ಅರಿತುಕೊಳ್ಳುವುದು ಹೇಗೆ?
ಜೀವಮಾನ ಪಾಲುದಾರ ಯೋಜನೆಯಲ್ಲಿ ವಿವಿಧ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಪ್ರೀಮಿಯಂ ಪಾವತಿ ನಿಯಮಗಳಿವೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳೆರಡಕ್ಕೂ ಸೂಕ್ತವಾಗಿದೆ. ಈ ವಿವಿಧ ಪ್ರೀಮಿಯಂ ಪಾವತಿ ಆಯ್ಕೆಗಳ ಲಭ್ಯತೆಯಿಂದಾಗಿ ವ್ಯಕ್ತಿಗಳು, ರಕ್ಷಣೆಗೂ ಗಮನಕೊಡುತ್ತ, ತಮ್ಮ ವಿಶೇಷ ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.
ಸಮೃದ್ಧಿಗಾಗಿ ಪ್ರಾರ್ಥಿಸುತ್ತ ದೀಪಾವಳಿಯ ಸಂಭ್ರಮಾಚರಣೆಗಾಗಿ ಕುಟುಂಬಗಳು ಒಟ್ಟುಗೂಡುವಾಗ ಈ ಜೀವಮಾನ ಪಾಲುದಾರ ಯೋಜನೆ, ಪ್ರಸ್ತುತ ಅಗತ್ಯತೆಗಳು ಮತ್ತು ಭವಿಷ್ಯದ ಭದ್ರತೆಗಾಗಿ ಯೋಜಿಸಬೇಕಾದುದರ ಪ್ರಾಮುಖ್ಯತೆಯನ್ನು ನೆನಪಿಸುತ್ತದೆ; ಮುಂದಿನ ಪೀಳಿಗೆಗಳ ಆರ್ಥಿಕ ಸ್ವಾತಂತ್ರ್ಯಕ್ಕೆ ಮಾರ್ಗವನ್ನು ಒದಗಿಸುತ್ತದೆ.