Saturday, 23rd November 2024

Deepavali 2024: ದೀಪಾವಳಿ ಪಟಾಕಿಯಿಂದ ಉಂಟಾಗುವ ಉಸಿರಾಟ ಸಮಸ್ಯೆ ಪರಿಹಾರಕ್ಕೆ ಅಸ್ತಮಾ ರೋಗಿಗಳು ಈ ಸಲಹೆ ಅನುಸರಿಸಿ

Deepavali 2024

ಮಾಲಿನ್ಯ, ಹೊಗೆ ಅಸ್ತಮಾ ರೋಗಿಗಳನ್ನು ಮತ್ತಷ್ಟು ಕಂಗೆಡಿಸುತ್ತವೆ. ಹಾಗಾಗಿ ದೀಪಾವಳಿ(Deepavali 2024) ಹಬ್ಬದ  ಸಮಯದಲ್ಲಿ, ಪಟಾಕಿ ಸಿಡಿಸುವುದು, ಮೇಣದಬತ್ತಿಗಳನ್ನು ಹಚ್ಚುವುದು ಮತ್ತು ಧೂಪದ್ರವ್ಯದ ಬಳಕೆಯಿಂದಾಗಿ ವಾಯುಮಾಲಿನ್ಯ ಉಂಟಾಗಿ ಅಸ್ತಮಾ ರೋಗಿಗಳು ಪರದಾಡುವಂತಾಗುತ್ತದೆ. ಅವರಿಗೆ ಸರಿಯಾಗಿ ಉಸಿರಾಡಲು ಕಷ್ಟವಾಗುತ್ತದೆ.  ಹಬ್ಬದ ಸಮಯದಲ್ಲಿ ಇಂತಹ ಸಮಸ್ಯೆಗಳು ಕಾಡಬಾರದಂತಿದ್ದರೆ  ಅಸ್ತಮಾ ರೋಗಿಗಳು ಕೆಲವು ಸಲಹೆಗಳನ್ನು ಪಾಲಿಸಿ. ಇದರಿಂದ ನೀವು ದೀಪಾವಳಿಯ ಸಮಯದಲ್ಲಿ ಆರಾಮಾಗಿರಬಹುದು.

Deepavali 2024

ಪಟಾಕಿ ಮತ್ತು ಹೊಗೆಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ
ದೀಪಾವಳಿಯ ಸಮಯದಲ್ಲಿ ಪಟಾಕಿಗಳಿಂದ ಬರುವ ಹೊಗೆಯು ಅಸ್ತಮಾ ರೋಗವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಸ್ತಮಾ ರೋಗಿಗಳು ಪಟಾಕಿಗಳನ್ನು ಸಿಡಿಸುವ ಅಥವಾ ಹೆಚ್ಚಿನ ಹೊಗೆ ಇರುವ ಪ್ರದೇಶಗಳಿಂದ ದೂರವಿರುವುದು ಉತ್ತಮ.

ಒಳಾಂಗಣದಲ್ಲಿ ಏರ್ ಪ್ಯೂರಿಫೈಯರ್ ಬಳಸಿ
ಏರ್ ಪ್ಯೂರಿಫೈಯರ್‌ಗಳು ಒಳಾಂಗಣ ಗಾಳಿಯಿಂದ ಹಾನಿಕಾರಕ ಕಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದೀಪಾವಳಿಯ ಸಮಯದಲ್ಲಿ, ಹೊರಾಂಗಣದಲ್ಲಿ ಮಾಲಿನ್ಯ ಹೆಚ್ಚಾಗಿರುವಾಗ ಮನೆಯ ಒಳಗೆ ಏರ್ ಪ್ಯೂರಿಫೈಯರ್ ಅನ್ನು ಆನ್ ಮಾಡಿದರೆ ಅಸ್ತಮಾ ರೋಗಿಗಳು ಆರಾಮವಾಗಿ ಇರಬಹುದು.

ಹೊರಗೆ ಬರುವಾಗ ಮಾಸ್ಕ್ ಧರಿಸಿ
ಹಬ್ಬದ ಋತುವಿನಲ್ಲಿ ನೀವು ಹೊರಗೆ ಹೋಗಬೇಕಾದರೆ, ಎನ್‍ 95ಮಾಸ್ಕ್ ಧರಿಸುವುದರಿಂದ ಹಾನಿಕಾರಕ ಮಾಲಿನ್ಯಕಾರಕಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಬಹುದು. ಇದು ಕಲುಷಿತ ಗಾಳಿ ಶ್ವಾಸಕೋಶಕ್ಕೆ ತಲುಪುವುದನ್ನು ತಡೆಯುತ್ತದೆ.

Deepavali 2024

ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ
ದೀಪಾವಳಿಯ ದಿನ ಹೊರಗಡೆ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವ ಕಾರಣ ಆ ಗಾಳಿ ಅಸ್ತಮಾ ರೋಗಿಗಳು ಇರುವ ಮನೆಯೊಳಗೆ ಬರಬಾರದಂತಿದ್ದರೆ ಆ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿಡಿ.

ಅಸ್ತಮಾ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ
ಇನ್ಹೇಲರ್ ಗಳು ಅಥವಾ ಮಾತ್ರೆಗಳನ್ನು ಅಸ್ತಮಾ ರೋಗಿಗಳು ತಪ್ಪದೇ ತೆಗೆದುಕೊಳ್ಳಿ. ಇದು  ಹಬ್ಬದ ಸಮಯದಲ್ಲಿ ಸಮಸ್ಯೆ ಹೆಚ್ಚಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.  

ಹೈಡ್ರೇಟ್ ಆಗಿರಿ
ಸಾಕಷ್ಟು ನೀರು ಕುಡಿಯುವುದರಿಂದ ಮೂಗಿನ ಹೊಳ್ಳೆಯ ಲೋಳೆಯನ್ನು ತೆಳುವಾಗಿಸಿ ಹೊರಹಾಕಲು ಸುಲಭವಾಗುತ್ತದೆ.  ಇದು ಉಸಿರಾಟವನ್ನು ಸುಧಾರಿಸುತ್ತದೆ ಮತ್ತು ಅಸ್ತಮಾ ದಾಳಿಯ ಅಪಾಯ ಕಡಿಮೆ ಮಾಡುತ್ತದೆ.

ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ
ಪ್ರತಿದಿನ, ಹಾಗೂ ಹಬ್ಬದ ಸಮಯದಲ್ಲಿ ತಪ್ಪದೇ  ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ. ಇದು  ಶ್ವಾಸಕೋಶವನ್ನು ಬಲಪಡಿಸಲು ಮತ್ತು ಗಾಳಿಯ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅಸ್ತಮಾ ರೋಗಲಕ್ಷಣಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ.

ಇದನ್ನೂ ಓದಿ:ದೀಪಾವಳಿಯಂದು ನಿಮ್ಮ ಚರ್ಮ, ಕೂದಲಿನ ಆರೈಕೆ ಮಾಡಲು ಈ ಸಲಹೆ ಪಾಲಿಸಿ

ಹಬ್ಬದ ಸಮಯದಲ್ಲಿ ಅಸ್ತಮಾ ರೋಗಿಗಳು  ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿರಲು ಈ ಸಲಹೆಗಳನ್ನು ಅನುಸರಿಸಿ. ಇದರಿಂದ ನೀವು ಕೂಡ ಹಬ್ಬವನ್ನು ಸಂತೋಷದಿಂದ ಆಚರಿಸಬಹುದು.