Wednesday, 30th October 2024

Deepavali 2024: ಹಬ್ಬದ ಸಮಯದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೆಳಗ್ಗೆ ಈ ಪಾನೀಯ ಸೇವಿಸಿ

Deepavali 2024

ದೀಪಾವಳಿ(Deepavali 2024) ಹಬ್ಬ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಎಲ್ಲಾ ಕಡೆ ಜನರು ಪಟಾಕಿಗಳನ್ನು ಸಿಡಿಸಿ ಸಂಭ್ರಮಪಡುತ್ತಾರೆ.  ಇದರಿಂದ ವಾತಾವರಣದಲ್ಲೆಲ್ಲಾ ಮಾಲಿನ್ಯ ತುಂಬಿರುತ್ತದೆ. ಇಂತಹ ಮಾಲಿನ್ಯಕಾರಕ ಗಾಳಿಯನ್ನು ಉಸಿರಾಡಿದಾಗ ನಮ್ಮ ಆರೋಗ್ಯ ಕೆಡುತ್ತದೆ. ಹಾಗಾಗಿ ಕೆಲವು  ಡಿಟಾಕ್ಸ್ ಪಾನೀಯಗಳು ನಿಮ್ಮ ದೇಹ ವಾಯುಮಾಲಿನ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ಶ್ವಾಸಕೋಶವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಆರೋಗ್ಯವಾಗಿರಬಹುದು. ಹಾಗಾದ್ರೆ ಆ ಪಾನೀಯಗಳ ಬಗ್ಗೆ ತಿಳಿದುಕೊಳ್ಳಿ.

Deepavali 2024

ನಿಂಬೆ-ಶುಂಠಿ ಡಿಟಾಕ್ಸ್ ಚಹಾ
ಶುಂಠಿಯ ಸಣ್ಣ ತುಂಡನ್ನು ಕತ್ತರಿಸಿ ಖಾಲಿ ಕಪ್‍ನಲ್ಲಿ ಇರಿಸಿ.ಆ ಕಪ್‍ಗೆ ಬಿಸಿ ನೀರನ್ನು ಸುರಿಯಿರಿ ಮತ್ತು ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ಅದಕ್ಕೆ ಅರ್ಧ ನಿಂಬೆ ರಸ ಮತ್ತು ರುಚಿಗೆ ಜೇನುತುಪ್ಪವನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಈ ಪಾನೀಯವು ಆರಾಮದಾಯಕವಾಗಿದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ, ಇದು ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ. ಉಸಿರಾಟದ ಉರಿಯೂತವನ್ನು ಗುಣಪಡಿಸಲು ಶುಂಠಿ ಉತ್ತಮವಾಗಿದೆ. ಶೀತಕ್ಕೆ ಚಿಕಿತ್ಸೆಯಾಗಿ ಇದನ್ನು ಬಹಳ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ.

Deepavali 2024

ಹಸಿರು ಸ್ಮೂಥಿ (ಸೊಪ್ಪಿನ ಜ್ಯೂಸ್)
ಒಂದು ಹಿಡಿ ಪಾಲಕ್ ಸೊಪ್ಪು,  ಒಂದು ಬಾಳೆಹಣ್ಣು ಮತ್ತು ಒಂದು ಕಪ್ ಬಾದಾಮಿ ಹಾಲನ್ನು ಬ್ಲೆಂಡರ್‌ನಲ್ಲಿ ಹಾಕಿ.ನಯವಾಗುವವರೆಗೆ ಸ್ವಲ್ಪ ಸಮಯದವರೆಗೆ ರುಬ್ಬಿ.ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಈ ಆರೋಗ್ಯಕರ ಪಾನೀಯವು ಜೀವಸತ್ವಗಳಿಂದ ತುಂಬಿದೆ ಮತ್ತು ದೇಹವನ್ನು ಶಕ್ತಿಯುತಗೊಳಿಸುತ್ತದೆ. ಸೊಪ್ಪುಗಳಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳು ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ.

Deepavali 2024

ಅರಿಶಿನ ಹಾಲು:
ಒಂದು ಸಣ್ಣ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಕಪ್ ತೆಂಗಿನ ಹಾಲು ಮತ್ತು ಒಂದು ಟೀಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.  ಅದಕ್ಕೆ ಸ್ವಲ್ಪ ಕರಿಮೆಣಸು ಮತ್ತು ಜೇನುತುಪ್ಪವನ್ನು ಸೇರಿಸಿ.ಅದನ್ನು ಬಿಸಿ ಮಾಡಿ ಕುಡಿಯಿರಿ.

ಈ ಪಾನೀಯವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅದು ಉಸಿರಾಟದ ನಾಳವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಶ್ವಾಸಕೋಶಗಳನ್ನು ರಕ್ಷಿಸುತ್ತದೆ.

Deepavali 2024

ಬೀಟ್ರೋಟ್ ಜ್ಯೂಸ್:
ಒಂದು ಮಧ್ಯಮ ಗಾತ್ರದ ಬೀಟ್ರೂಟ್ ಅನ್ನು ಒಂದು ಸೇಬು ಮತ್ತು ಅರ್ಧ ನಿಂಬೆಯೊಂದಿಗೆ ಸೇರಿಸಿ ರುಬ್ಬಿ ರಸ ತೆಗೆದು ಕುಡಿಯಿರಿ.

ಈ ಪಾನೀಯವು ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿರುತ್ತದೆ. ಇದು ಲಿವರ್‍ಗೆ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ಇದು ಪರಿಸರ ಮಾಲಿನ್ಯ ದೇಹದ ಮೇಲೆ ಪರಿಣಾಮ ಬೀರದಂತೆ ತಡೆಯುತ್ತದೆ.

ಇದನ್ನೂ ಓದಿ: ಪಟಾಕಿಯ ಮಾಲಿನ್ಯ ನಿಮ್ಮ ಮುಖದ ಅಂದ ಕಸಿಯದಿರಲಿ

ಈ ಪಾನೀಯಗಳನ್ನು ಸೇವಿಸುವ ಮೂಲಕ ದೀಪಾವಳಿಯ ಮಾಲಿನ್ಯದಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.