Wednesday, 30th October 2024

Deepavali 2024: ದೀಪಾವಳಿಯಂದು ಇದನ್ನೆಲ್ಲ ಸೇವಿಸಿ ತಲೆ ಸಿಡಿಯುತ್ತಿದ್ದರೆ ಇಲ್ಲಿದೆ ನೋಡಿ ಪರಿಹಾರ!

Deepavali 2024

ದೀಪಾವಳಿ(Deepavali 2024) ಹಬ್ಬಕ್ಕೆ ಎಲ್ಲರಿಗೂ ಸಿಹಿ ಹಂಚುವ ವಾಡಿಕೆ ಇದೆ. ಅದರ ಜೊತೆಗೆ ಬಗೆ ಬಗೆಯ ಭೋಜನಗಳನ್ನು ಸವಿಯುತ್ತಾರೆ. ಹಾಗೇ ಕೆಲವರು ಹಬ್ಬದ ದಿನಗಳಲ್ಲಿ ಕುಟುಂಬದವರು ಎಲ್ಲರೂ ಸೇರಿರುವ ಸಂಭ್ರಮಕ್ಕೆ ಮದ್ಯಪಾನ ಕೂಡ ಮಾಡುತ್ತಾರೆ. ಇದರ ನಡುವೆ ಹಬ್ಬದ ಕಿರಿಕಿರಿ, ಗದ್ದಲ, ಪಟಾಕಿ ಶಬ್ದ ಮುಂತಾದವುಗಳಿಂದ ತಲೆನೋವು, ಆಯಾಸದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಅವುಗಳನ್ನು ಹೋಗಲಾಡಿಸಲು ಈ ಸಲಹೆ ಪಾಲಿಸಿ.

Deepavali 2024

ನವೀ ಮುಂಬೈನ ಮೆಡಿಕೋವರ್ ಆಸ್ಪತ್ರೆಯ ಆಹಾರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಪಾಂಡಾ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ದೀಪಾವಳಿಯ ಸಮಯದಲ್ಲಿ ಕೆಲಸದ ಒತ್ತಡದಿಂದ ಕೆಲವರು ಸಾಕಷ್ಟು ನೀರನ್ನು ಕುಡಿಯುವುದಿಲ್ಲ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಿ ತಲೆನೋವು, ಆಯಾಸದ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಲು ನಿಮ್ಮ ದೇಹವನ್ನು ಹೈಡ್ರೇಟ್‌ ಮಾಡಬೇಕು. ಅದಕ್ಕಾಗಿ ಅವರು ತಿಳಿಸಿದ  ಕೆಲವೊಂದು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಹಬ್ಬದ ಸಮಯದಲ್ಲಿ ಹೈಡ್ರೇಟ್ ಆಗಿರಲು ಸಲಹೆಗಳು:

ನಿಯಮಿತವಾಗಿ ನೀರು ಕುಡಿಯಿರಿ:

ಹಬ್ಬದ ಸಮಯದಲ್ಲಿ ಎಷ್ಟೇ ಕೆಲಸವಿದ್ದರೂ ಕೂಡ ನಿಮಗೆ ಬಾಯಾರಿಕೆಯಾಗಲಿ ಅಥವಾ ಆಗದೆ ಇದ್ದರೂ ಕೂಡ ಕೆಲಸ ಮಾಡುತ್ತಿರುವಾಗ  ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಇದರಿಂದ ದೇಹದಲ್ಲಿ ಜನಸಂಚಯನ ಸರಾಗವಾಗಿ ಆಗುತ್ತದೆ.

ನೀರಿನಾಂಶ ಸಮೃದ್ಧವಾಗಿರುವ ಆಹಾರಗಳನ್ನು ಆರಿಸಿ: ಈ ಸಮಯದಲ್ಲಿ ನೀರು ಕುಡಿಯಲು ಸಾಧ್ಯವಾಗದಿದ್ದವರು ಅಥವಾ ನೀರು ಕುಡಿಯಲು ಇಷ್ಟವಿಲ್ಲದವರು ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ, ಸೌತೆಕಾಯಿ ಮತ್ತು ಪಾಲಕ್ ನಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

ಸಕ್ಕರೆ ಪಾನೀಯಗಳನ್ನು ಮಿತಿಗೊಳಿಸಿ:

ಬಾಯಾರಿಕೆ ಆಗುತ್ತದೆ ಎಂದು ಸೋಡಾ, ಜ್ಯೂಸ್ ಮತ್ತು ಸಿಹಿಯಾದ ಚಹಾದಂತಹ ಸಕ್ಕರೆ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ. ಇದು ದೇಹದಲ್ಲಿರುವ ನೀರಿನಾಂಶವನ್ನು ಹೀರಿಕೊಳ್ಳುತ್ತವೆ.

Deepavali 2024

ಆಲ್ಕೋಹಾಲ್ ಸೇವನೆ ನಂತರ ಈ ಕೆಲಸ ಮಾಡಿ:

ನೀವು ಆಲ್ಕೋಹಾಲ್ ಸೇವಿಸುತ್ತಿದ್ದರೆ, ನಿಮ್ಮ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಹಾಗಾಗಿ ನೀವು ಹೈಡ್ರೇಟ್ ಆಗಿ ಉಳಿಯಲು ನೀರನ್ನು ಹೆಚ್ಚು ಕುಡಿಯಿರಿ.

ದೇಹದ ಸೂಚನೆಗಳನ್ನು ಆಲಿಸಿ:

ದೇಹವು ಬಾಯಾರಿಕೆಯಾದಾಗ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಹಾಗಾಗಿ ನಿಮಗೆ ಬಾಯಾರಿಕೆಯಾಗುತ್ತಿದ್ದರೆ ತಕ್ಷಣ ನೀರನ್ನು ಕುಡಿಯಿರಿ.

ಅತಿಯಾದ ಉಪ್ಪಿನ ಸೇವನೆಯನ್ನು ತಪ್ಪಿಸಿ:

ಅತಿಯಾದ ಉಪ್ಪಿನ ಸೇವನೆಯು ದ್ರವ ಧಾರಣಕ್ಕೆ ಕಾರಣವಾಗಬಹುದು. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಉಪ್ಪಿನ ಸೇವನೆಯನ್ನು ಮಿತಗೊಳಿಸಿ.

ಮೈಂಡ್ ಫುಲ್ ಈಟಿಂಗ್:

ಹಬ್ಬದ ಭೋಜನ ರುಚಿಯಾಗಿತ್ತು ಎಂದು ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಇದು  ಜೀರ್ಣಕ್ರಿಯೆಯಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ.  ಮತ್ತು ದೇಹದ ನೀರಿನ ಮಟ್ಟದಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ಅಗತ್ಯವಿದಷ್ಟು ಮಾತ್ರ ಸೇವಿಸಿ.

ನೀರಿನ ಬಾಟಲಿಯನ್ನು ಒಯ್ಯಿರಿ:

ಹಬ್ಬಕ್ಕೆ ಏನೇ ಖರೀದಿಸಲು ನೀವು ಹೊರಗಡೆ ಹೋಗುವಾಗ ನಿಮ್ಮ ಜೊತೆ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ. ಇದರಿಂದ ನೀವು ನಿಮಗೆ ಅಗತ್ಯವಿದ್ದಾಗ ನೀರನ್ನು ಕುಡಿಯಬಹುದು.

ಇದನ್ನೂ ಓದಿ:ದೀಪಾವಳಿಗೆ ಸಿಹಿ ತಿಂದರೂ ತೂಕ ಹೆಚ್ಚಿಸಿಕೊಳ್ಳದಿರುವುದು ಹೇಗೆ?

ಹಬ್ಬದ ಋತುವಿನಲ್ಲಿ ಜಲಸಂಚಯನಕ್ಕೆ ಆದ್ಯತೆ ನೀಡುವ ಮೂಲಕ, ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಬಹುದು. ಇದರಿಂದ ನೀವು ಹಬ್ಬದ ಸಂಭ್ರಮವನ್ನು ಸಡಗರದಿಂದ ಸಂತೋಷದಿಂದ ಆಚರಿಸಬಹುದು.