Sunday, 15th December 2024

Health Tips: ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಬದನೆಕಾಯಿ ಸೇವಿಸಬೇಡಿ

Health Tips

ಬೆಂಗಳೂರು : ಬದನೆಕಾಯಿ ತರಕಾರಿಗಳಲ್ಲಿ ಒಂದು. ಇದರಿಂದ ಮಾಡಿದ ಪಲ್ಯ, ಸಾಂಬಾರು, ಗೊಜ್ಜು ಎಲ್ಲವೂ ರುಚಿಕರವಾಗಿರುತ್ತದೆ. ಆದರೆ ಇದು ಬಾಯಿಗೆ ರುಚಿ ನೀಡುವುದು ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಒಳ್ಳೆಯದು. ಬದನೆಕಾಯಿಯಲ್ಲಿ ಫೈಬರ್, ತಾಮ್ರ, ಮ್ಯಾಂಗನೀಸ್, ಬಿ -6 ಮತ್ತು ಥಿಯಾಮಿನ್ ಸಮೃದ್ಧವಾಗಿದೆ. ಹಾಗೂ  ಇದು ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಹೊಂದಿರುತ್ತದೆ.ಹಾಗಂತ ಬದನೆಕಾಯಿ ಎಲ್ಲರಿಗೂ ಒಳ್ಳೆಯದಲ್ಲ!ಕೆಲವೊಂದು ಆರೋಗ್ಯ ಸಮಸ್ಯೆ(Health Tips) ಇರುವವರು ಇದರಿಂದ ದೂರ ಉಳಿಯುವುದೇ ಒಳ್ಳೆಯದು.

Health Tips

ಕಬ್ಬಿಣದ ಕೊರತೆ ಇರುವವರು
ಬದನೆಕಾಯಿಯಲ್ಲಿರುವ ಫೈಟೊಕೆಮಿಕಲ್ ನಾಸುನಿನ್ ಎಂಬ ಅಂಶ ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ದೇಹಕ್ಕೆ ಕಬ್ಬಿಣಾಂಶ ಸಿಗುವುದಿಲ್ಲ. ಇದರಿಂದ ರಕ್ತಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ  ದೇಹದಲ್ಲಿ ಹೆಚ್ಚು ಕಬ್ಬಿಣಾಂಶವನ್ನು ಹೊಂದಿರುವ ಜನರು ಇದನ್ನು ಸೇವಿಸಬಹುದು.

ಸೋಲನೈನ್ ವಿಷ
ಬದನೆಕಾಯಿಗಳಲ್ಲಿರುವ  ನೈಟ್ ಶೇಡ್‍ಗಳು ಸೋಲನೈನ್‍ಗಳನ್ನು ಹೊಂದಿರುತ್ತವೆ.  ಇವು ವಿಷಕಾರಿಯಾಗಿರುತ್ತವೆ.  ಸೋಲನೈನ್‍ಗಳು ಬದನೆಕಾಯಿ ಸಸ್ಯ ಬೆಳೆಯುವಾಗ ಅದಕ್ಕೆ ರಕ್ಷಣೆಯನ್ನು ನೀಡುತ್ತದೆ. ಹಾಗಾಗಿ ಈ ಅಂಶ ಬದನೆಕಾಯಿಯಲ್ಲೂ ಇರುತ್ತದೆ. ಹಾಗಾಗಿ ಬದನೆಕಾಯಿಯನ್ನು  ತಿನ್ನುವುದರಿಂದ ಗಂಟಲಿನಲ್ಲಿ ಉರಿ, ವಾಕರಿಕೆ ಮತ್ತು ಹೃದಯದ ಸಮಸ್ಗಯೆಳಿಗೆ ಕಾರಣವಾಗಬಹುದು. ಇದು ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು.

Health Tips

ಬದನೆಕಾಯಿ ಅಲರ್ಜಿ:
ಕೆಲವೊಂದು ತರಕಾರಿ, ಹಣ್ಣುಗಳು  ಅಲರ್ಜಿಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ. ಇದಕ್ಕೆ ಕಾರಣ ಅವುಗಳಲ್ಲಿರುವ ಲಿಪಿಡ್ ಎಂಬ ಪ್ರೋಟೀನ್. ಹಾಗಾಗಿ ಇದನ್ನು ಸೇವಿಸಿದವರಿಗೆ ಚರ್ಮದಲ್ಲಿ ದದ್ದುಗಳು, ಊತ ಮತ್ತು ಉಸಿರಾಟದ ತೊಂದರೆಗಳು ಕಾಡುತ್ತದೆ. ಈ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ:
ಬದನೆಕಾಯಿಗಳು ಆಕ್ಸಲೇಟ್‍ಗಳನ್ನು ಹೊಂದಿರುತ್ತವೆ. ಈ ಆಕ್ಸಲೇಟ್‍ಗಳನ್ನು ದೇಹ ಹೀರಿಕೊಂಡರೆ ಇದರಿಂದ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುತ್ತದೆ.  ಹಾಗಾಗಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ಇದನ್ನು ಹೆಚ್ಚು ತಿನ್ನಬೇಡಿ.

ಇದನ್ನೂ ಓದಿ:ವಾಕರಿಕೆ ಸಮಸ್ಯೆ ಇದ್ದಾಗ ಯಾವ ಆಹಾರ ತಪ್ಪಿಸಬೇಕು? ಯಾವುದನ್ನು ಸೇವಿಸಬೇಕು?

ಹಾಗಾಗಿ ಬದನೆಕಾಯಿ ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕೂಡ ಅದರಲ್ಲಿರುವ ಕೆಲವು ಅಂಶಗಳು ದೇಹಕ್ಕೆ ಹಾನಿಕಾರಕವಾಗಿವೆ. ಹಾಗಾಗಿ ಅದನ್ನು ಮಿತವಾಗಿ ಸೇವಿಸಿ.