Saturday, 16th November 2024

Kids Health: ವಿಟಮಿನ್ ಬಿ-12 ಕೊರತೆಯಾದರೆ ಮಕ್ಕಳಿಗೆ ಈ ಸಮಸ್ಯೆಗಳು ಕಾಡುತ್ತವೆ

Kids Health

ಇಂದಿನ ಕೆಟ್ಟ ಜೀವನಶೈಲಿಯಿಂದಾಗಿ, ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಸುಮಾರು 30 ವರ್ಷಗಳ ಹಿಂದೆ, ತಲೆನೋವು, ದೇಹದ ನೋವು ಮತ್ತು ಕಣ್ಣಿನ ಕಾಯಿಲೆಗಳು ವಯಸ್ಸಾದವರಲ್ಲಿ ಸಾಮಾನ್ಯವಾಗಿದ್ದವು. ಆದರೆ  ಇತ್ತೀಚೆಗೆ ದಿನಗಳಲ್ಲಿ ಈ ರೋಗಗಳು ಹೆಚ್ಚಾಗಿ ಮಕ್ಕಳಲ್ಲಿಯೇ ಕಂಡುಬರುತ್ತಿದೆ. ಇದಕ್ಕೆ ಮಕ್ಕಳ ದೇಹದಲ್ಲಿ ವಿಟಮಿನ್‍ಗಳ ಕೊರತೆ ಕಾರಣವಾಗಿದೆ. ಹಾಗಾಗಿ ಮಕ್ಕಳ ದೇಹದಲ್ಲಿ ವಿಟಮಿನ್ ಬಿ12 ಕೊರತೆಯಾದರೆ ಯಾವ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯಿರಿ.

Kids Health

ಮಕ್ಕಳಲ್ಲಿ ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು:

*ತುಂಬಾ ದಣಿವು ಹಾಗೂ ಕಿರಿಕಿರಿ

*ವಾಕರಿಕೆ, ವಾಂತಿ ಅಥವಾ ಅತಿಸಾರ

*ಎಂದಿನಂತೆ ಹಸಿವು ಕಡಿಮೆಯಾಗುವುದು

*ಹಠಾತ್ ತೂಕ ನಷ್ಟ

*ಚರ್ಮ ಹಳದಿಯಾಗುವುದು

*ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ

*ದೇಹದಲ್ಲಿ ಜುಮುಗುಡುವಿಕೆ

*ಕಣ್ಣಿನ ಸಮಸ್ಯೆಗಳು

*ಖಿನ್ನತೆಗೆ ಒಳಗಾಗುವುದು

*ಕಿರಿಕಿರಿ ಅನುಭವಿಸುವುದು

Kids Health

ಮಕ್ಕಳಿಗೆ ವಿಟಮಿನ್ ಬಿ 12 ಏಕೆ ಬೇಕು?:

ವಿಟಮಿನ್ ಬಿ 12 ಮಕ್ಕಳ ದೈಹಿಕ ಬೆಳವಣಿಗೆ, ಕೆಂಪು ರಕ್ತ ಕಣಗಳ ರಚನೆ ಮತ್ತು ಕೇಂದ್ರ ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳಿಗೆ ವಿಟಮಿನ್ ಬಿ 12 ಕೊರತೆಯಾದರೆ, ಅವರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ.  ಅಲ್ಲದೇ ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿರುವ ಮಕ್ಕಳು  ನರ ದೌರ್ಬಲ್ಯಕ್ಕೆ ಒಳಗಾಗುತ್ತಾರೆ.

ಮಕ್ಕಳಲ್ಲಿ ವಿಟಮಿನ್ ಬಿ 12 ಕೊರತೆಯನ್ನು ನಿವಾರಿಸುವುದು ಹೇಗೆ?

ಮಕ್ಕಳ ದೇಹದಲ್ಲಿ ವಿಟಮಿನ್ ಬಿ12 ಕೊರತೆಯಾದರೆ  ಆಹಾರದ ಮೂಲಕ ಅವರಿಗೆ  ಈ ಪೋಷಕಾಂಶವನ್ನು ನೀಡಬೇಕು. ಮಕ್ಕಳ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ತಪ್ಪಿಸಲು, ಮೀನು, ಮಾಂಸ, ಕೋಳಿ, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳನ್ನು ಅವರ ಆಹಾರದಲ್ಲಿ ಸೇರಿಸಿ. ಒಂದು ವೇಳೆ ಇದರಿಂದ ಮಕ್ಕಳಿಗೆ ವಿಟಮಿನ್ ಬಿ12 ಸಿಗದಿದ್ದರೆ ವಿಟಮಿನ್ ಬಿ12 ಪೂರಕಗಳನ್ನು ವೈದ್ಯರ ಸಲಹೆಯಂತೆ ನೀಡಬೇಕಾಗುತ್ತದೆ.

ಇದನ್ನೂ ಓದಿ:ಅರಿಶಿನ ನೀರು ಮತ್ತು ನಿಂಬೆ ನೀರು;  ಹೊಳೆಯುವ ಚರ್ಮಕ್ಕೆ ಯಾವುದು ಉತ್ತಮ?

ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದಾಗ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಅದನ್ನು ಪತ್ತೆ ಮಾಡಲು ವೈದ್ಯರ ಸಲಹೆಯಂತೆ ತಕ್ಷಣ ರಕ್ತ ಪರೀಕ್ಷೆಯನ್ನು ಮಾಡಿಸಿ. ಇದರಿಂದ ಮಕ್ಕಳ ಆರೋಗ್ಯವನ್ನು ಕಾಪಾಡಬಹುದು.