Saturday, 23rd November 2024

Newborn Baby Care Tips: ಪೋಷಕರೇ ಎಚ್ಚರ! ನವಜಾತ ಶಿಶುಗಳ ತಲೆಯನ್ನು ಮಸಾಜ್ ಮಾಡುವುದು ಅಪಾಯಕಾರಿ!

Newborn Baby Care Tips

ಬೆಂಗಳೂರು: ಚಿಕ್ಕ ಮಗುವಿಗೆ ಸ್ನಾನ ಮಾಡಿಸುವ ಮುನ್ನ ಮಗುವಿನ ಕೈ, ಕಾಲುಗಳು ಮತ್ತು ತಲೆಗೆ ಎಣ್ಣೆ  ಮಸಾಜ್ ಮಾಡುವ ಅಭ್ಯಾಸವಿರುತ್ತದೆ. ಇದರಿಂದ ಮಗುವಿನ ತಲೆ ಸರಿಯಾದ ಆಕಾರಕ್ಕೆ ಬರುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಮಗುವಿನ (Newborn Baby Care Tips) ತಲೆಯ ಸುತ್ತಲಿನ ಪ್ರದೇಶವನ್ನು ಮಸಾಜ್ ಮಾಡುವುದು ಮಗುವಿಗೆ ಹಾನಿಕಾರಕವಂತೆ. ಹಾಗಾದ್ರೆ ನೀವು ಈ ರೀತಿ ಮಾಡುತ್ತೀರಿ ಎಂದಾದರೆ ಮಗುವಿನ ತಲೆಯ ಭಾಗವನ್ನು ಮಸಾಜ್ ಮಾಡುವುದರಿಂದ ಉಂಟಾಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಿ.

Newborn Baby Care Tips

ಮಗುವಿನ ತಲೆಯನ್ನು ಏಕೆ ಮಸಾಜ್ ಮಾಡಬಾರದು?

ಆರೋಗ್ಯ ತಜ್ಞರ ಪ್ರಕಾರ, ಮಗುವಿನ ತಲೆಯ ಸುತ್ತಲಿನ ಪ್ರದೇಶವನ್ನು ಮಸಾಜ್ ಮಾಡುವುದರಿಂದ ಅವರ ಮಾನಸಿಕ ಬೆಳವಣಿಗೆಗೆ ಹಾನಿಕಾರಕವಾಗಿದೆ. ವಾಸ್ತವವಾಗಿ, ಶಿಶುಗಳ ಇಡೀ ದೇಹವು ದುರ್ಬಲವಾಗಿರುತ್ತದೆ. ಅದರಲ್ಲೂ ತಲೆಯ ಸುತ್ತಲಿನ ಭಾಗವು ಸಾಕಷ್ಟು ದುರ್ಬಲವಾಗಿರುತ್ತದೆ. ಅದರ ಮೇಲೆ ಒತ್ತಡ ನೀಡುವ ಮೂಲಕ ಮಸಾಜ್ ಮಾಡಿದಾಗ, ಅದು ಮೆದುಳಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. 6 ತಿಂಗಳ ಮೊದಲು ಶಿಶುಗಳ ಮೆದುಳಿನ ಮುಂಭಾಗವು ತೆರೆದಿರುತ್ತದೆ. ಆದ್ದರಿಂದ ಅದು ಯಾವುದೇ ಒತ್ತಡಕ್ಕೆ ಒಳಗಾಗಬಾರದು.

Newborn Baby Care Tips

ಮಗುವಿನ ತಲೆಯ ಸುತ್ತಲಿನ ಪ್ರದೇಶವನ್ನು ಮಸಾಜ್ ಮಾಡುವ ಅನಾನುಕೂಲತೆಗಳು:

ಶಿಶುತಜ್ಞರ ಪ್ರಕಾರ, ಮೊದಲ ಒಂದು ವರ್ಷದಲ್ಲಿ ಶಿಶುಗಳ ಮೆದುಳಿನ ಬೆಳವಣಿಗೆ ವೇಗವಾಗಿ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಗುವಿನ ತಲೆಯನ್ನು ಮಸಾಜ್ ಮಾಡಿದರೆ, ಮೆದುಳಿಗೆ ಹಾನಿಯಾಗುವ ಸಂಭವವಿದೆ.

ಇದರಿಂದ  ಮಗುವಿನ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗಬಹುದು.

ಮಗುವಿನ ತಲೆಯನ್ನು ಮಸಾಜ್ ಮಾಡುವುದರಿಂದ ಕೆಲವು ಸಂದರ್ಭಗಳಲ್ಲಿ ಮಗುವಿನ ತಲೆಗೆ ಉಗುರುಗಳಿಂದ ಗಾಯವಾಗಬಹುದು.

 ಮಸಾಜ್‌ ಮಾಡುವುದರಿಂದ ಮಗುವಿನ ತಲೆಯ ಸುತ್ತಲಿನ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ:ಈ ಪದಾರ್ಥಗಳನ್ನುಅತಿಯಾಗಿ ಬೇಯಿಸಿ ತಿಂದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ; ಅವುಗಳು ಯಾವುವು?

ಮಗುವಿನ ತಲೆಯನ್ನು ನೀವು ಯಾವಾಗ ಮಸಾಜ್ ಮಾಡಬೇಕು?

ವೈದ್ಯರ ಪ್ರಕಾರ, ಮಗು ಜನಿಸಿದ 6 ತಿಂಗಳೊಳಗೆ, ಅವರ ತಲೆಗೆ ಮಸಾಜ್ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇದರ ನಂತರ, ನೀವು ವೈದ್ಯರ ಸಲಹೆ ಮೇರೆಗೆ ಮಗುವಿನ ತಲೆಯ ಸುತ್ತಲಿನ ಪ್ರದೇಶವನ್ನು ಮಸಾಜ್ ಮಾಡಬಹುದು. ಆದರೆ, ಈ ಸಮಯದಲ್ಲಿ ನೀವು ಕೈಗಳಿಂದ ಹೆಚ್ಚು ಒತ್ತಡ ಹಾಕದೆ ನಿಧಾನವಾಗಿ ಮಸಾಜ್ ಮಾಡಬೇಕು.