ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಸಮಸ್ಯೆಯಾಗಿದೆ. ಇದು ಮಹಿಳೆಯರ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ, ಅತಿಯಾದ ಎಂಡ್ರೋಜನ್ ಹಾರ್ಮೋನ್ ಬಿಡುಗಡೆ (ಪುರುಷ ಹಾರ್ಮೋನುಗಳು) ಮತ್ತು ಅಂಡಾಶಯಗಳಲ್ಲಿ ಸಣ್ಣ ನೀರಿನ ಗುಳ್ಳೆಗಳಂತಹ ವಿವಿಧ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಗೆ ಒಳಗಾದವರಲ್ಲಿ ತೂಕ ಹೆಚ್ಚಾಗುವುದು, ಮೊಡವೆ, ಕೂದಲು ತೆಳುವಾಗುವುದು ಮತ್ತು ಗರ್ಭಧರಿಸಲು ಕಷ್ಟವಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಪಿಸಿಒಎಸ್(PCOS Problem) ಸಮಸ್ಯೆಯ ಬಗ್ಗೆ ಕೆಲವರು ಹೇಳುವ ಸುಳ್ಳನ್ನು ಜನರು ನಂಬುತ್ತಾರೆ. ಹಾಗಾಗಿ ಪಿಸಿಓಎಸ್ ಬಗ್ಗೆ ಇರುವ ಈ ಸುಳ್ಳು ವಿಚಾರಗಳನ್ನು ನಂಬಬೇಡಿ.
ಪಿಸಿಒಎಸ್ ಯಾವಾಗಲೂ ಬಂಜೆತನಕ್ಕೆ ಕಾರಣವಾಗುತ್ತದೆ
ಪಿಸಿಒಎಸ್ ಹೊಂದಿರುವ ಅನೇಕ ಮಹಿಳೆಯರು ಮಕ್ಕಳನ್ನು ಹೊಂದಲು ಸಾಧ್ಯವಾಗುವುದಿಲ್ಲ ಎಂದು ಚಿಂತಿಸುತ್ತಾರೆ. ಆದರೆ, ಪಿಸಿಒಎಸ್ ಇರುವವರು ಗರ್ಭಧರಿಸಲು ಸಾಧ್ಯವಿಲ್ಲ ಎನ್ನುವುದು ಸುಳ್ಳು. ಆದರೆ ಅನಿಯಮಿತ ಅಂಡೋತ್ಪತ್ತಿಯಿಂದಾಗಿ ಇದು ಗರ್ಭಧಾರಣೆಯನ್ನು ಹೆಚ್ಚು ಕಷ್ಟಕರವಾಗಿಸಬಹುದು, ಆದರೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳೊಂದಿಗೆ, ಪಿಸಿಒಎಸ್ ಹೊಂದಿರುವ ಅನೇಕ ಮಹಿಳೆಯರು ಗರ್ಭ ಧರಿಸಬಹುದು.
ಪಿಸಿಒಎಸ್ ಇರುವವರ ಅಂಡಾಶಯದ ಮೇಲೆ ಸಿಸ್ಟ್
ಪಿಸಿಒಎಸ್ ಹೊಂದಿರುವ ಎಲ್ಲಾ ಮಹಿಳೆಯರು ಅಂಡಾಶಯದ ಸಿಸ್ಟ್ ಹೊಂದಿರುವುದಿಲ್ಲ. ಆದರೆ ಪಿಸಿಒಎಸ್ ಹಾರ್ಮೋನುಗಳ ಅಸಮತೋಲನವಾಗಿದೆ. ಇದು ಸಿಸ್ಟ್‌ಗಳನ್ನು ಹೊಂದಿರುವುದು ಕಡಿಮೆ.
ಪಿಸಿಒಎಸ್ ಅಧಿಕ ತೂಕದ ಮಹಿಳೆಯರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ
ತೂಕ ಹೆಚ್ಚಾಗುವುದು ಸಾಮಾನ್ಯ ಲಕ್ಷಣವಾಗಿದೆ. ಆದರೆ ಪಿಸಿಒಎಸ್ ಎಲ್ಲಾ ರೀತಿಯ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ತೆಳ್ಳಗಿನ ಮಹಿಳೆಯರು ಕೂಡ ಪಿಸಿಒಎಸ್‍ನಿಂದ ಬಳಲಬಹುದು.
ತೂಕ ನಷ್ಟವು ಪಿಸಿಒಎಸ್ ಅನ್ನು ಗುಣಪಡಿಸುತ್ತದೆ
ತೂಕ ನಷ್ಟವು ಅಧಿಕ ತೂಕ ಹೊಂದಿರುವ ಮಹಿಳೆಯರಲ್ಲಿ ಪಿಸಿಒಎಸ್‍ನ ಕೆಲವು ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಇದು ಪರಿಹಾರವಲ್ಲ. ಪಿಸಿಒಎಸ್ ದೀರ್ಘಕಾಲದ ಸ್ಥಿತಿಯಾಗಿದ್ದು, ಇದನ್ನು ನಿಯಂತ್ರಿಸಬಹುದು ಆದರೆ ಸಂಪೂರ್ಣವಾಗಿ ಗುಣಮಾಡಲು ಸಾಧ್ಯವಿಲ್ಲ. ಆರೋಗ್ಯಕರ ತೂಕ ಹೊಂದಿರುವ ಮಹಿಳೆಯರು ಸಹ ಪಿಸಿಒಎಸ್ ಹೊಂದಬಹುದು.
ಅನಿಯಮಿತ ಮುಟ್ಟಿನ ಸಮಸ್ಯೆ ಪಿಸಿಒಎಸ್‍ನ ಏಕೈಕ ಲಕ್ಷಣವಾಗಿದೆ
ಪಿಸಿಒಎಸ್ ಕೇವಲ ಅನಿಯಮಿತ ಮುಟ್ಟಿನ ಸಮಸ್ಯೆಯ ರೋಗಲಕ್ಷಣವನ್ನು ಮಾತ್ರ ಹೊಂದಿಲ್ಲ. ಇದು ಮೊಡವೆ, ಅತಿಯಾದ ಕೂದಲು ಬೆಳವಣಿಗೆ (ಹಿರ್ಸುಟಿಸಮ್), ಕೂದಲು ತೆಳುವಾಗುವುದು ಮತ್ತು ಇನ್ಸುಲಿನ್ ಪ್ರತಿರೋಧದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಋತುಬಂಧದ ನಂತರ ಪಿಸಿಒಎಸ್ ಹೋಗುತ್ತದೆ
ಋತುಬಂಧದ ನಂತರ ಪಿಸಿಒಎಸ್ ಕಣ್ಮರೆಯಾಗುವುದಿಲ್ಲ. ಅನಿಯಮಿತ ಮುಟ್ಟಿನ ಸಮಸ್ಯೆಗಳು ಇನ್ನು ಮುಂದೆ ಕಾಣಿಸದಿದ್ದರೂ, ಇನ್ಸುಲಿನ್ ಪ್ರತಿರೋಧ, ಚಯಾಪಚಯ ಸಮಸ್ಯೆಗಳು ಮತ್ತು ಹೃದ್ರೋಗದ ಅಪಾಯದಂತಹ ಇತರ ರೋಗಲಕ್ಷಣಗಳು ನಂತರದ ಜೀವನದಲ್ಲಿ ಕಾಣಿಸಿಕೊಳ್ಳಬಹುದು.
ಜನನ ನಿಯಂತ್ರಣ ಮಾತ್ರೆಗಳು ಪಿಸಿಒಎಸ್ ಅನ್ನು ಗುಣಪಡಿಸುತ್ತವೆ
ಋತುಚಕ್ರವನ್ನು ನಿಯಂತ್ರಿಸುವುದು ಮತ್ತು ಮೊಡವೆಗಳನ್ನು ಕಡಿಮೆ ಮಾಡುವುದು ಮುಂತಾದ ಪಿಸಿಒಎಸ್ ರೋಗಲಕ್ಷಣಗಳನ್ನು ಕಡಿಮೆಮಾಡಲು ಕೆಲವರು ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಆದರೆ ಇದು ಪಿಸಿಒಎಸ್ ಅನ್ನು ಗುಣಪಡಿಸುವುದಿಲ್ಲ. ರೋಗಲಕ್ಷಣಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಪಿಸಿಒಎಸ್ ಅಪರೂಪದ ಸ್ಥಿತಿಯಾಗಿದೆ
ಪಿಸಿಒಎಸ್ ಸಾಮಾನ್ಯವಾದ ಸಮಸ್ಯೆಯಾಗಿದೆ. ಇದು ವಿಶ್ವಾದ್ಯಂತ 10 ಮಹಿಳೆಯರಲ್ಲಿ ಒಬ್ಬ ಮಹಿಳೆ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಅನೇಕ ಮಹಿಳೆಯರಿಗೆ ಅದರ ಬಗ್ಗೆ ತಿಳಿದಿರುವುದಿಲ್ಲ.
ಇದನ್ನೂ ಓದಿ:ಮೂಳೆ ಆರೋಗ್ಯಕರವಾಗಿರಬೇಕೆಂದರೆ ಈ ಜೀವಸತ್ವಗಳನ್ನು ತಪ್ಪದೇ ಸೇವಿಸಿ!
ಆಹಾರದಿಂದ ಮಾತ್ರ ಪಿಸಿಒಎಸ್ ಅನ್ನು ಸರಿಪಡಿಸಬಹುದು
ಪಿಸಿಒಎಸ್ ರೋಗಲಕ್ಷಣಗಳನ್ನು ನಿರ್ವಹಿಸಲು ಆರೋಗ್ಯಕರ ಆಹಾರವು ಅತ್ಯಗತ್ಯವಾಗಿದ್ದರೂ, ಅದು ಈ ಸಮಸ್ಯೆಯನ್ನು ವಾಸಿ ಮಾಡುವುದಿಲ್ಲ. ಪಿಸಿಒಎಸ್‍ಗೆ ಹೆಚ್ಚಾಗಿ ಜೀವನಶೈಲಿ ಬದಲಾವಣೆಗಳು, ಔಷಧಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ಹಾರ್ಮೋನುಗಳ ಚಿಕಿತ್ಸೆಗಳ ಅಗತ್ಯವಿರುತ್ತದೆ. ಸಮತೋಲಿತ ಆಹಾರವು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ, ಆದರೆ ಇದು ಎಲ್ಲಾ ರೋಗಲಕ್ಷಣಗಳನ್ನು ಪರಿಹರಿಸುವುದಿಲ್ಲ.