ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಯಿ ಕಚ್ಚಿದೆಯೇ? ರೇಬಿಸ್ ಲಸಿಕೆ ತೆಗೆದುಕೊಂಡರೆ ಸಾಕು ಎನ್ನುವವರು ಒಮ್ಮೆ ಇದನ್ನು ಓದಿ

Rabies Vaccine: ನಾಯಿ ಕಚ್ಚಿದಾಗ ಜನರು ವೈದ್ಯರನ್ನು ಸಂಪರ್ಕಿಸಿ ಲಸಿಕೆ ಪಡೆಯುತ್ತಾರೆ. ಆದರೆ ಇದಕ್ಕೆ ಲಸಿಕೆ ಮಾತ್ರ ಸಾಕಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ವೈರಸ್ ಹರಡುವುದನ್ನು ತಡೆಯಲು ರೇಬೀಸ್ ಇಮ್ಯುನೊಗ್ಲೋಬುಲಿನ್ (ಆರ್‌ಐಜಿ) ಸಹ ಅಗತ್ಯ ಎಂದು ತಜ್ಞರು ಒತ್ತಿ ಹೇಳುತ್ತಾರೆ.

ಏನಿದು ರೇಬೀಸ್ ಇಮ್ಯುನೊಗ್ಲೋಬುಲಿನ್? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ.

Profile pavithra Mar 12, 2025 7:21 PM

ರೇಬಿಸ್ ಮಾರಣಾಂತಿಕ ವೈರಲ್ ಸೋಂಕು ಆಗಿದ್ದು, ಸೋಂಕಿತ ಪ್ರಾಣಿಗಳ ಲಾಲಾರಸದಿಂದ ಜನರಿಗೆ ಹರಡುತ್ತದೆ. 99% ಪ್ರಕರಣಗಳು ಸೋಂಕಿತ ನಾಯಿಗಳಿಂದ ಉಂಟಾಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಪ್ರತಿವರ್ಷ ಸುಮಾರು 5,726 ಜನರು ರೇಬಿಸ್‌ ಸೋಂಕಿನಿಂದ ಸಾವನ್ನಪ್ಪುತ್ತಾರೆ. ಹಾಗಾಗಿ ನಾಯಿ ಹಲ್ಲುಗಳಿಂದ ತರಚಿದರೆ ಅಥವಾ ಕಚ್ಚಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ರೇಬಿಸ್‌ ಲಸಿಕೆ ತೆಗೆದುಕೊಳ್ಳಲಾಗುತ್ತದೆ. ಆದರೆ ಇದಕ್ಕೆ ಲಸಿಕೆ ಮಾತ್ರ ಸಾಕಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ರೇಬಿಸ್‌ (Rabies Vaccine) ಇಮ್ಯುನೊಗ್ಲೋಬುಲಿನ್ (ಆರ್‌ಐಜಿ) ಸಹ ಅಗತ್ಯ ಎಂದು ತಜ್ಞರು ಒತ್ತಿ ಹೇಳುತ್ತಾರೆ.

ರೇಬಿಸ್‌ ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಆ್ಯಂಟಿ-ರೇಬಿಸ್ ಲಸಿಕೆ (ಎಆರ್‌ವಿ)ಯು ರೇಬಿಸ್‌ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಲು ಅಗತ್ಯವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ವೈರಸ್‍ ಅನ್ನು ಕೊಲ್ಲುತ್ತದೆ.

ರೇಬಿಸ್‌ ಇಮ್ಯುನೊಗ್ಲೋಬುಲಿನ್ (ಆರ್‌ಐಜಿ) ಏಕೆ ಅವಶ್ಯಕ?

ರೇಬಿಸ್‌ ಇಮ್ಯುನೊಗ್ಲೋಬುಲಿನ್ (ಆರ್‌ಐಜಿ) ಎಂಬುದು ಪ್ರಾಣಿ ಕಚ್ಚಿದ ನಂತರ ವ್ಯಕ್ತಿಯನ್ನು ರೇಬಿಸ್‌ನಿಂದ ತಕ್ಷಣ ರಕ್ಷಿಸುವ ಚುಚ್ಚುಮದ್ದು. ಇದು ಗಾಯದ ಸ್ಥಳದಲ್ಲಿ ರೇಬಿಸ್‌ ವೈರಸ್ ಅನ್ನು ತಟಸ್ಥಗೊಳಿಸುವ ರೆಡಿಮೇಡ್ ಪ್ರತಿಕಾಯಗಳನ್ನು ಹೊಂದಿರುತ್ತದೆ. ಇದು ನರಮಂಡಲಕ್ಕೆ ಸೋಂಕು ಹರಡುವುದನ್ನು ತಡೆಯುತ್ತದೆ ಮತ್ತು ಇಮ್ಯುನೊಗ್ಲೋಬುಲಿನ್ ರೇಬಿಸ್‌ ವಿರುದ್ಧ ಪ್ರತಿರಕ್ಷಣೆ ಪಡೆಯದ ಜನರಿಗೆ ತಕ್ಷಣದ ರಕ್ಷಣೆಯನ್ನು ಒದಗಿಸುತ್ತದೆ.

ನಾಯಿ ಕಚ್ಚಿದ ನಂತರ ರೇಬಿಸ್‌ ಲಸಿಕೆ ಪಡೆದರೆ ಸಾಕು ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಗಂಭೀರವಾದ ಸಂದರ್ಭಗಳಲ್ಲಿ, ರೇಬೀಸ್ ಇಮ್ಯುನೊಗ್ಲೋಬುಲಿನ್ (ಆರ್‌ಐಜಿ) ನಿರ್ಣಾಯಕವಾಗಿದೆ. ಆದರೆ ಲಸಿಕೆಯು ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತೇಜಿಸಲು ಸುಮಾರು 7-14 ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಆರ್‌ಐಜಿ ನೀಡದಿದ್ದರೆ ಲಸಿಕೆ ಪರಿಣಾಮ ಬೀರುವ ಮೊದಲು ವೈರಸ್ ಕೇಂದ್ರ ನರಮಂಡಲವನ್ನು ತಲುಪುವ ಹೆಚ್ಚಿನ ಅಪಾಯವಿದೆ. ಇದರಿಂದ ಸಾವು ಸಂಭವಿಸಬಹುದು.

ನಾಯಿ ಕಚ್ಚಿದ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಮಾರ್ಗಸೂಚಿಗಳಲ್ಲಿ ನಾಯಿ ಕಚ್ಚಿದ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದೆ.

ತಕ್ಷಣದ ಗಾಯದ ಆರೈಕೆ: ಕನಿಷ್ಠ 15 ನಿಮಿಷಗಳ ಕಾಲ ಸೋಪ್ ಮತ್ತು ನೀರಿನಿಂದ ಗಾಯವನ್ನು ಚೆನ್ನಾಗಿ ತೊಳೆಯಿರಿ. ವೈರಸ್ ಹರಡುವುದನ್ನು ಕಡಿಮೆ ಮಾಡಲು ಅಯೋಡಿನ್ ಅಥವಾ ಆಲ್ಕೋಹಾಲ್ (70%)ನಂತಹ ನಂಜು ನಿರೋಧಕಗಳನ್ನು ಗಾಯದ ಮೇಲೆ ಹಚ್ಚಿ.

ತಕ್ಷಣ ವೈದ್ಯರನ್ನು ಸಂಪರ್ಕಿಸಿ: ವ್ಯಾಕ್ಸಿನೇಷನ್ ಮತ್ತು ಆರ್‌ಐಜಿ ಅಗತ್ಯವೇ ಎಂಬುದನ್ನು ತಿಳಿಯಲು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ.

ಚಿಕಿತ್ಸೆ ಯಾವಾಗ ಅಗತ್ಯ ?

ವರ್ಗ 1: ಪ್ರಾಣಿಗಳನ್ನು ಸ್ಪರ್ಶಿಸುವುದು ಅಥವಾ ಆಹಾರ ನೀಡುವುದು, ಯಾವಾಗಲೂ ಚರ್ಮವನ್ನು ನೆಕ್ಕುವುದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ.
ವರ್ಗ 2: ಚರ್ಮದ ಮೇಲೆ ಸಣ್ಣ ಗೀರುಗಳು ಅಥವಾ ಗುಳ್ಳೆಗಳಾದರೆ ಲಸಿಕೆ ಅಗತ್ಯವಿದೆ.
ವರ್ಗ 3: ಆಳವಾದ ಕಡಿತ, ಗಾಯಗಳಾದರೆ ಲಸಿಕೆ ಮತ್ತು ಇಮ್ಯುನೊಗ್ಲೋಬುಲಿನ್ ಅಗತ್ಯವಿದೆ.

ಈ ಸುದ್ದಿಯನ್ನೂ ಓದಿ:Viral Video: ಡಾಗ್‌ ಶೆಲ್ಟರ್‌ ಹೋಮ್‌ನಲ್ಲಿ ಸಿಬ್ಬಂದಿಯ ಕಾಲನ್ನು ಕಚ್ಚಿ ಕ್ರೌರ್ಯ ಮೆರೆದ ಪಿಟ್‌ಬುಲ್‌ ನಾಯಿ
ರೇಬಿಸ್‌ ಇಮ್ಯುನೊಗ್ಲೋಬುಲಿನ್ (ಆರ್‌ಐಜಿ)ನಿರ್ವಹಣೆ: ಗರಿಷ್ಠ ಪರಿಣಾಮವನ್ನು ಪಡೆಯಲು ಆರ್‌ಐಜಿಯನ್ನು ನೇರವಾಗಿ ಗಾಯದ ಒಳಗೆ ಮತ್ತು ಸುತ್ತಲೂ ಚುಚ್ಚಬೇಕು.