ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಡಾಗ್‌ ಶೆಲ್ಟರ್‌ ಹೋಮ್‌ನಲ್ಲಿ ಸಿಬ್ಬಂದಿಯ ಕಾಲನ್ನು ಕಚ್ಚಿ ಕ್ರೌರ್ಯ ಮೆರೆದ ಪಿಟ್‌ಬುಲ್‌ ನಾಯಿ

ಪಿಟ್‌ಬುಲ್‌ ನಾಯಿಯೊಂದು ಡಾಗ್ ಶೆಲ್ಟರ್ ಸಿಬ್ಬಂದಿಯೋರ್ವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ನೋಯ್ಡಾದ ಡಾಗ್ ಶೆಲ್ಟರ್ ಹೋಮ್‌ನಲ್ಲಿ ಈ ಘಟನೆ ನಡೆದಿದ್ದು ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ನೌಕರನ ಮೇಲೆ ಕ್ರೂರವಾಗಿ ದಾಳಿ ಮಾಡಿದ ಪಿಟ್‌ಬುಲ್‌

pitbull dog

Profile Pushpa Kumari Mar 3, 2025 9:25 PM

ಲಖನೌ: ಪಿಟ್ ಬುಲ್ ತಳಿಯ ನಾಯಿಗಳು ಅಪಾಯಕಾರಿ. ಕೆಲವೊಮ್ಮೆ ಇವುಗಳು ಅಪರಿಚಿತರ ಮೇಲೆ ರಾಕ್ಷಸ ರೀತಿಯಲ್ಲಿ ವರ್ತಿಸಿ ದಾಳಿ ನಡೆಸುತ್ತವೆ. ಇದೀಗ ಇಂತಹುದೇ ಘಟನೆಯೊಂದು ನಡೆದಿದ್ದು, ಪಿಟ್‌ಬುಲ್‌ ನಾಯಿಯೊಂದು ಡಾಗ್ ಶೆಲ್ಟರ್ ಸಿಬ್ಬಂದಿಯೋರ್ವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದೆ. ನೋಯ್ಡಾದ ಡಾಗ್ ಶೆಲ್ಟರ್ ಹೋಮ್‌ನಲ್ಲಿ ಈ ಘಟನೆ ನಡೆದಿದ್ದು ವ್ಯಕ್ತಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದುಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ (Viral Video). ಪಿಟ್‌ಬುಲ್ ನಾಯಿಯು ಸಿಬ್ಬಂದಿಯನ್ನು‌ ಕ್ರೂರವಾಗಿ ಕಚ್ಚು ತ್ತಿರುವ ಭಯಾನಕ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ನೋಯ್ಡಾದಲ್ಲಿರುವ ಡಾಗ್‌ ಶೆಲ್ಟರ್‌ ಹೋಮ್‌ನಲ್ಲಿ ಈ ದೃಶ್ಯ ನಡೆದಿದೆ. ವೈರಲ್ ವಿಡಿಯೊದಲ್ಲಿ, ಪಿಟ್‌ ಬುಲ್ ನಾಯಿ ಆತನ ಕಾಲನ್ನು ತನ್ನ ದವಡೆಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಕಚ್ಚುವ ದೃಶ್ಯ ಸೆರೆಯಾಗಿದೆ. ಶ್ವಾನ ಕಚ್ಚಿದ ತೀವ್ರತೆಯಲ್ಲಿ ಆತ ನೆಲದ ಮೇಲೆ ಬಿದ್ದಿದ್ದಾನೆ. ಆದರೂ ನಾಯಿ ಆತನ ಕಾಲನ್ನು ಕ್ರೂರವಾಗಿ ಕಚ್ಚುತ್ತಲೇ ಇತ್ತು. ಆ ಬಳಿಕ ಇತರ ಕಾರ್ಮಿಕರ ಸಹಾಯದಿಂದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.



ಸಿಬ್ಬಂದಿ ನಿಂತಿದ್ದ ವೇಳೆ ಪಿಟ್ ಬುಲ್ ಶ್ವಾನ ಏಕಾಏಕಿ ದಾಳಿ ಮಾಡಿದೆ. ನಾಯಿಯ ಆಕ್ರಮಣಕಾರಿ ವರ್ತನೆಯನ್ನು ಕಂಡು ಅಲ್ಲಿದ್ದ ಜನರು ಕೂಡ ಆಘಾತಕ್ಕೊಳಗಾಗಿದ್ದಾರೆ. ಸದ್ಯ ಈ ದೃಶ್ಯ ನೋಡಿದ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಇದು ಎಲ್ಲ ನಾಯಿ ಸಾಕುವ ಮಾಲೀಕರಿಗೆ ಪಾಠವಾಗಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ಇವುಗಳನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು. ಇದರಿಂದ ಮತ್ತೊಂದು ಜೀವಕ್ಕೆ ತೊಂದರೆಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Viral Video: ನಾಯಿ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿದ ದುಷ್ಕರ್ಮಿಗಳು; ಇಲ್ಲಿದೆ ಮನಕಲುಕುವ ದೃಶ್ಯ

ಇತ್ತೀಚೆಗೆ ಶ್ವಾನಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈಗಾಗಲೇ ಕೇಂದ್ರ ಸರ್ಕಾರವು ರಾಟ್‌ವೀಲರ್‌, ಪಿಟ್‌ ಬುಲ್ ಸೇರಿದಂತೆ ಸುಮಾರು 23 ನಾಯಿ ತಳಿಗಳ ಸಂತಾನಾಭಿವೃದ್ಧಿ ಹಾಗೂ ಅವುಗಳ ಮಾರಾಟವನ್ನು ನಿಷೇಧಿಸಿದೆ. ಈಗಾಗಲೇ ಪಿಟ್‌ ಬುಲ್‌ ದಾಳಿಗೆ ಹಲವರು ಜನರು ತುತ್ತಾಗಿದ್ದು ಇದೇ ಕಾರಣಕ್ಕೆ ಭಾರತದಲ್ಲಿ ಈ ವಿದೇಶಿ ತಳಿಯ ಶ್ವಾನಗಳನ್ನು ಸಾಕುವುದಕ್ಕೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಈ ಅಪಾಯಕಾರಿ ಶ್ವಾನಗಳನ್ನು ಜನರು ಹೆಚ್ಚಾಗಿ ಸಾಕುತ್ತಿದ್ದಾರೆ.