Friday, 18th October 2024

Stroke Risk : ಈ ಬ್ಲಡ್‌ ಗ್ರೂಪ್‌ ನಿಮ್ಮದಾಗಿದ್ದರೆ ಸ್ಟ್ರೋಕ್ ಸಾಧ್ಯತೆ ಹೆಚ್ಚು… ನಿಮ್ಮ ರಕ್ತದ ಗುಂಪು ಯಾವುದು? ತಕ್ಷಣ ಪರೀಕ್ಷಿಸಿ

Stroke Risk

ಸಾಮಾನ್ಯವಾಗಿ ಜನರು ಲಕ್ವಾ ಎಂದು ಕರೆಯುವ ರೋಗದ ವೈಜ್ಞಾನಿಕ ಹೆಸರು ಪಾರ್ಶ್ವವಾಯು (ಪೆರಾಲಿಸಿಸ್). ಮೆದುಳು, ಬೆನ್ನುಹುರಿ ಅಥವಾ ನರಗಳೂ ಸೇರಿದಂತೆ ನರಮಂಡಲಕ್ಕೆ ಉಂಟಾಗುವ ಹಾನಿಯಿಂದಾಗಿ ಮೆದುಳು ಮತ್ತು ಸ್ನಾಯುಗಳ ನಡುವಿನ ಸಂವಹನದಲ್ಲಿ ಸಮಸ್ಯೆ ಇದ್ದಾಗ ಪಾರ್ಶ್ವವಾಯು (Stroke Risk) ಬರುತ್ತದೆ.

ಹೌದು ಕೊರೊನಾ ಕಾಲಘಟ್ಟದ ನಂತರ ಯಾವಾಗ ಯಾರಿಗೆ ಎಂತಹ ಕಾಯಿಲೆಗಳು ಬರುತ್ತವೆ ಎಂದು ಊಹಿಸೋದು ಕಷ್ಟವಾಗಿದೆ. ಆದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ರೋಗಗಳು ಎಳೆಯರು ಹಿರಿಯರು ಎಂಬ ಎಗ್ಗು ಸಿಗ್ಗಿಲ್ಲದೇ ಎಲ್ಲರನ್ನೂ ಕಾಡುತ್ತಿದೆ.. ಆ ಪೈಕಿ ಇಂದಿನ ಯುವಜನರಲ್ಲೂ ಪಾರ್ಶ್ವವಾಯು ಸಮಸ್ಯೆ ಹೆಚ್ಚಾಗುತ್ತಿದೆ. ಮೊದಲೆಲ್ಲ ಇದು ವಯಸ್ಸಾದವರನ್ನು ಕಾಡುವ ರೋಗ ಎಂಬ ಅಭಿಪ್ರಾಯವಿತ್ತು. ಸ್ಟ್ರೋಕ್‌ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬಂದರೂ, ಕಿರಿಯ ವಯಸ್ಕರು ಪಾರ್ಶ್ವವಾಯು ಅನುಭವಿಸುತ್ತಿರುವುದು ಹೆಚ್ಚು ಆತಂಕ ಸೃಷ್ಟಿಸಿದೆ. ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಕಿರಿಯ ಜನಸಂಖ್ಯೆಯಲ್ಲಿ ಧೂಮಪಾನ ಮತ್ತು ಅತಿಯಾದ ಮದ್ಯಪಾನದಂತಹ ಅನಾರೋಗ್ಯಕರ ಅಭ್ಯಾಸಗಳು ಈ ಸಮಸ್ಯೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿವೆ.

ಆದರೆ ಇದೀಗ ಮತ್ತೊಂದು ಅಘಾತಕಾರಿ ಅಂಶ ಬಯಲಾಗಿದ್ದು, ಒಂದು ನಿರ್ದಿಷ್ಟ ರಕ್ತದ ಗುಂಪಿಗೆ ಸೇರಿದ ಜನರು ಬೇಗ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂಬುದು ಬೆಳಕಿಗೆ ಬಂದಿದೆ.. ಹಾಗಾದ್ರೆ.. ಏನಿದು ಸಂಶೋಧನೆ..? ಯಾವ ರಕ್ತದ ಗುಂಪಿಗೆ ಅಪಾಯ ಸಾಧ್ಯತೆ ಹೆಚ್ಚು…? ಎಂದು ತಿಳಿಯಲು ಈ ಸ್ಟೋರಿ ಓದಿ.

ಸ್ಟ್ರೋಕ್ ಹೇಗೆ ಬರುತ್ತದೆ..?

ಮೆದುಳಿಗೆ ರಕ್ತವನ್ನು ಪೂರೈಸುವ ಅಪಧಮನಿಯಲ್ಲಿನ ಅಡಚಣೆಯಿಂದಾಗಿ ಇಸ್ಕೆಮಿಕ್ ಸ್ಟ್ರೋಕ್ ಸಂಭವಿಸುತ್ತದೆ. ಮೆದುಳಿನ ಯಾವುದೇ ಸ್ಥಳದಲ್ಲಿ ರಕ್ತಸ್ರಾವದಿಂದ ಹೆಮರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು.

ಈ ಗುಂಪಿನ ರಕ್ತದ ಜನರಲ್ಲಿ ಹೆಚ್ಚಿದೆ ಅಪಾಯ

ಇತ್ತೀಚೆಗೆ ಬಾಲ್ಟಿಮೋರ್‌ನ ಮೇರಿಲ್ಯಾಂಡ್‌ ಸ್ಕೂಲ್‌ ಆಫ್‌ ಮೆಡಿಸಿನ್‌ ನಡೆಸಿದ ಸಂಶೋಧನೆಗಳ ಪ್ರಕಾರ, ನಮ್ಮ ರಕ್ತದ ಗುಂಪು ನಮ್ಮ ಆರೋಗ್ಯ ಸಮಸ್ಯೆಯನ್ನು ತಿಳಿಸುತ್ತದೆ ಎನ್ನಲಾಗಿದೆ. ಈ ವರದಿಯ ಪ್ರಕಾರ ಎ ಗುಂಪಿಗೆ ಸೇರಿದ ಜನರಿಗೆ ಬೇಗ ಲಕ್ವ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಬೇರೆ ರಕ್ತದ ಗುಂಪಿಗೆ ಹೋಲಿಸಿದರೆ ಶೇ 16ರಷ್ಟು ಹೆಚ್ಚಿದೆ ಎನ್ನಲಾಗುತ್ತದೆ. ಮತ್ತೊಂದು ಮುಖ್ಯವಾದ ಅಂಶವೆಂದರೆ ಓ ರಕ್ತದ ಗುಂಪಿನ ಜನರಿಗೆ ಈ ಸಮಸ್ಯೆ ಕಾಡುವುದು ಶೇ 12ರಷ್ಟು ಕಡಿಮೆಯಂತೆ. O ರಕ್ತದ ಗುಂಪು ಹೊಂದಿರುವ ಜನರನ್ನು ಸಾರ್ವತ್ರಿಕ ದಾನಿಗಳೆಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ರಕ್ತದ ಗುಂಪು AB ಆಗಿರುವವರು, ಅವರು ಪ್ರಪಂಚದ ಯಾವುದೇ ವ್ಯಕ್ತಿಯಿಂದ ರಕ್ತವನ್ನು ತೆಗೆದುಕೊಳ್ಳಬಹುದು. ಹಾಗಾಗಿ ಈ ಗುಂಪಿನ ಜನರಿಗೆ ಅಪಾಯ ಕಡಿಮೆ ಎನ್ನಲಾಗುತ್ತದೆ.

ಡೇಂಜರ್ ಜೋನ್ ನಿಂದ ಹೊರಗಿರುವ *”O ರಕ್ತ ಗುಂಪಿನವರು”

ನಿರ್ದಿಷ್ಟವಾಗಿ, ನಮ್ಮ ಮೆಟಾ-ವಿಶ್ಲೇಷಣೆಯು ರಕ್ತದ ಪ್ರಕಾರಗಳು A ಮತ್ತು O ಗೆ ಸಂಬಂಧಿಸಿದ ಜೀನ್ ರೂಪಾಂತರಗಳು ಆರಂಭಿಕ ಸ್ಟ್ರೋಕ್ನೊಂದಿಗೆ ತಳೀಯವಾಗಿ ಸಂಬಂಧಿಸಿರುವ ಬಹುತೇಕ ಎಲ್ಲವನ್ನು ಪ್ರತಿನಿಧಿಸುತ್ತವೆ ಎಂದು ಸೂಚಿಸುತ್ತದೆ. ಈ ಜೀನ್ ರೂಪಾಂತರಗಳನ್ನು ಹೊಂದಿರುವ ಜನರು ರಕ್ತ ಹೆಪ್ಪುಗಟ್ಟುವಿಕೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ, ಅದು ಪಾರ್ಶ್ವವಾಯುವಿಗೆ ಕಾರಣವಾಗಬಹುದಾಗಿದೆ. ರಕ್ತ ಗುಂಪು O ಹೊಂದಿರುವವರು ಇತರ ರಕ್ತ ಪ್ರಕಾರಗಳನ್ನು ಹೊಂದಿರುವ ಜನರಿಗಿಂತ ಡೇಂಜರ್ ಜೋನ್ ನಿಂದ ಹೊರಗಿದ್ದು, ಶೇ.12 ಕಡಿಮೆ ಪಾರ್ಶ್ವವಾಯು ಅಪಾಯವನ್ನು ಹೊಂದಿರುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: World Handwashing Day : ಕೈ ತೊಳೆಯುವುದೆಂದರೆ ಅನಾರೋಗ್ಯವನ್ನು ಓಡಿಸಿದಂತೆ!

ಸಂಶೋಧಕರು ಹೇಳೋದೇನು..?

ಇತರ ರಕ್ತದ ಪ್ರಕಾರಗಳಿಗೆ ಹೋಲಿಸಿದರೆ, ಎ ರಕ್ತ ಪ್ರಕಾರ ಹೊಂದಿರುವವರು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನದ ಮೂಲಕ ಸಂಶೋಧಕರು ಕಂಡುಕೊಂಡಿದ್ದು, ಎ ರಕ್ತದ ಪ್ರಕಾರವು ಹೆಚ್ಚಿನ ಅಪಾಯವನ್ನು ಏಕೆ ನೀಡುತ್ತದೆ ಎಂದು ಇನ್ನೂ ತಿಳಿದಿಲ್ಲ. ಆದರೆ ಇದು ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳಾದ ಪ್ಲೇಟ್‌ಲೆಟ್‌ಗಳು ಮತ್ತು ರಕ್ತನಾಳಗಳನ್ನು ಮತ್ತು ಇತರ ಪರಿಚಲನೆ ಪ್ರೋಟೀನ್‌ಗಳನ್ನು ಜೋಡಿಸುವ ಕೋಶಗಳಿಗೆ ಸಂಬಂಧಿಸಿದೆ. ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಹಿರಿಯ ಲೇಖಕ ಮತ್ತು ನಾಳೀಯ ನರವಿಜ್ಞಾನಿ ಸ್ಟೀವನ್ ಕಿಟ್ನರ್ ಹೇಳಿದ್ದಾರೆ.

ಕಾರಣ ಪತ್ತೆಯಾಗಿಲ್ಲ…!

ಎ ರಕ್ತದ ಗುಂಪಿನವರು ಏಕೆ ಹೆಚ್ಚಾಗಿ ಅಪಾಯಕ್ಕೆ ತುತ್ತಾಗುತ್ತಾರೆ ಎಂದು ಇನ್ನೂ ಕಾರಣ ಪತ್ತೆಯಾಗಿಲ್ಲ. ಆದರೆ ಇದು ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳಾದ ಪ್ಲೇಟ್‌ಲೆಟ್‌ಗಳು ಮತ್ತು ರಕ್ತನಾಳಗಳನ್ನು ಮತ್ತು ಇತರ ಪರಿಚಲನೆ ಪ್ರೋಟೀನ್‌ಗಳನ್ನು ಜೋಡಿಸುವ ಕೋಶಗಳಿಗೆ ಸಂಬಂಧಿಸಿದೆ. ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಹಿರಿಯ ಲೇಖಕ ಮತ್ತು ನಾಳೀಯ ನರವಿಜ್ಞಾನಿ ಸ್ಟೀವನ್ ಕಿಟ್ನರ್ ಹೇಳಿದ್ದಾರೆ.

ಇನ್ನೂ ಸಂಶೋಧಕರು 48 ಜೆನೆಟಿಕ್ ಅಧ್ಯಯನಗಳು ನಡೆಸಿ ಈ ಅಂಕಿಅಂಶವನ್ನು ಸಂಗ್ರಹಿಸಿದ್ದು, ಇದರಲ್ಲಿ ಸುಮಾರು 18 ರಿಂದ 59 ವರ್ಷ ವಯಸ್ಸಿನ 17,000 ಜನರು ಪಾರ್ಶ್ವವಾಯು ಪೀಡಿತರು ಹಾಗೂ ಸುಮಾರು 600,000 ಸ್ಟ್ರೋಕ್ ಇಲ್ಲದ ಜನರನ್ನು ಈ ಸಂಶೋಧನೆಗೆ ಒಳಪಡಿಸಿದ್ದಾರೆ.