ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಚ್‌ಪಿವಿ ಮತ್ತು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್: ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿದೆ

ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾವೈರಸ್) ಎಂದು ಕೇಳಿದ ತಕ್ಷಣ ನಮ್ಮಲ್ಲಿ ಹೆಚ್ಚಿನವರು ಅದನ್ನು ಗರ್ಭಕಂಠದ ಕ್ಯಾನ್ಸರ್ ಅಥವಾ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂದು ಅಂದು ಕೊಳ್ಳುತ್ತಾರೆ. ಆದರೆ ಈ ವೈರಸ್‌ನ ಮತ್ತೊಂದು ಮುಖವು ಗಂಭೀರ ಆರೋಗ್ಯ ಸಮಸ್ಯೆಯಾಗಿ ಸದ್ದಿಲ್ಲದೇ ಮುನ್ನೆಲೆಗೆ ಬರುತ್ತಿದೆ. ವಿಶೇಷವಾಗಿ ಗಂಟಲು, ಟಾನ್ಸಿಲ್‌ಗಳು ಮತ್ತು ನಾಲಿಗೆಯ ಮೂಲ ಭಾಗದ ಕ್ಯಾನ್ಸರ್‌ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.

ಎಚ್‌ಪಿವಿ ಮತ್ತು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್

Profile Ashok Nayak May 14, 2025 11:25 AM

ಲೇಖಕರು: ಡಾ. ಸಂತೋಷ್ ಚಿಕ್ಕರೆಡ್ಡಿ, ಸಲಹಾ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್, ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಹುಬ್ಬಳ್ಳಿ

ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾವೈರಸ್) ಎಂದು ಕೇಳಿದ ತಕ್ಷಣ ನಮ್ಮಲ್ಲಿ ಹೆಚ್ಚಿನವರು ಅದನ್ನು ಗರ್ಭಕಂಠದ ಕ್ಯಾನ್ಸರ್ ಅಥವಾ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂದು ಅಂದುಕೊಳ್ಳುತ್ತಾರೆ. ಆದರೆ ಈ ವೈರಸ್‌ನ ಮತ್ತೊಂದು ಮುಖವು ಗಂಭೀರ ಆರೋಗ್ಯ ಸಮಸ್ಯೆ ಯಾಗಿ ಸದ್ದಿಲ್ಲದೇ ಮುನ್ನೆಲೆಗೆ ಬರುತ್ತಿದೆ. ವಿಶೇಷವಾಗಿ ಗಂಟಲು, ಟಾನ್ಸಿಲ್‌ಗಳು ಮತ್ತು ನಾಲಿಗೆಯ ಮೂಲ ಭಾಗದ ಕ್ಯಾನ್ಸರ್‌ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.

ಇತ್ತೀಚೆಗೆ, ಭಾರತದಾದ್ಯಂತ ವೈದ್ಯರು ಒಂದು ಬೆಳವಣಿಗೆಯನ್ನು ಗುರುತಿಸಿದ್ದಾರೆ. ಅದೇನೆಂದರೆ, ಆರೋಗ್ಯವಂತರಾಗಿರುವ ಯುವಕರು ಮತ್ತು ಧೂಮಪಾನ ಮಾಡದ ವ್ಯಕ್ತಿಗಳಲ್ಲೂ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಂದ ಹಾಗೆ ಈ ಕ್ಯಾನ್ಸರ್‌ಗಳು ಈ ಹಿಂದೆ ವಯಸ್ಸಾದ ತಂಬಾಕು ಸೇವನೆ ಮಾಡು ವವರಲ್ಲಿ ಕಂಡುಬರುತ್ತಿದ್ದವು. ಹಾಗಾದರೆ ಹೊಸ ಪ್ರಕರಣಗಳ ಮೂಲ ಕಾರಣವೇ ಎಚ್‌ಪಿವಿ.

ಎಚ್‌ಪಿವಿ ಎಂದರೇನು, ಇದರ ಕುರಿತ ಅರಿವು ಏಕೆ ಅಗತ್ಯ?

ಎಚ್‌ಪಿವಿ ಒಂದು ಸಾಮಾನ್ಯ ವೈರಸ್ ಆಗಿದ್ದು, ಇದು ಚರ್ಮದಿಂದ ಚರ್ಮಕ್ಕೆ ಸಂಪರ್ಕವಾದಾಗ ಹರಡುತ್ತದೆ. ಎಚ್‌ಪಿವಿ ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ ಎಂದು ಭಾವಿಸಲಾಗಿದ್ದರೂ, ಇದು ಬಾಯಿ ಸಂಪರ್ಕದ ಮೂಲಕವೂ ಹರಡಬಹುದು. ಎಚ್‌ಪಿವಿ ಸೋಂಕಿತರಾದ ಹೆಚ್ಚಿನವರಿಗೆ ತಾವು ಸೋಂಕಿತರಾಗಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ದೇಹವು ಇದನ್ನು ಸ್ವಾಭಾವಿಕವಾಗಿ ನಿರ್ಮೂಲನೆ ಮಾಡುತ್ತದೆ.

ಕೆಲವರಲ್ಲಿ, ನಿರ್ದಿಷ್ಟ ಎಚ್‌ಪಿವಿ ತಳಿಗಳು ಮುಂದುವರಿದು ಜೀವಕೋಶದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ. ಇದು ಅಂತಿಮವಾಗಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅದು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಇದನ್ನೂ ಓದಿ:Health Tips: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಏನು ನಂಟು?

ಎಚ್‌ಪಿವಿ ಸಂಬಂಧಿತ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳಲ್ಲಿ ಏಕೆ ಏರಿಕೆ?

ಜೀವನಶೈಲಿ ಮತ್ತು ಸಂಸ್ಕೃತಿಯ ಪರಿವರ್ತನೆಗಳು ಎಚ್‌ಪಿವಿ ಹರಡುವ ರೀತಿಯನ್ನು ಬದಲಾಯಿ ಸಿವೆ. ಸಾಮಾಜಿಕ ನಿಯಮಗಳು ಬದಲಾಗುತ್ತಿರುವುದರಿಂದ ಮತ್ತು ಬಾಯಿಯ ಸಂಪರ್ಕದ ಮೂಲಕ ಎಚ್‌ಪಿವಿ ಹರಡುತ್ತಿದೆ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳಲ್ಲಿ ಸಹ ಏರಿಕೆ ಕಂಡುಬಂದಿದೆ.

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಒಳಗಾಗುವವರಲ್ಲಿ ಹಲವು ಧೂಮಪಾನಿಗಳು ಅಥವಾ ಮದ್ಯಪಾನಿ ಗಳಲ್ಲ. ಎಲ್ಲರೂ ಆರೋಗ್ಯಕರ ಜೀವನಶೈಲಿ ನಡೆಸುತ್ತಿದ್ದಾರೆ. ಇದು ಅವರಿಗೆ ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಗೊಂದಲ ಉಂಟು ಮಾಡುತ್ತದೆ. ಕ್ಯಾನ್ಸರ್ ಎಂಬ ಸಣ್ಣ ಅನುಮಾನವೂ ಬರದಂತೆ ತಡೆಯುತ್ತದೆ.

ಎಚ್‌ಪಿವಿ ಸಂಬಂಧಿತ ಕ್ಯಾನ್ಸರ್‌ಗಳು ಜೈವಿಕವಾಗಿ ವಿಭಿನ್ನವಾಗಿರುವುದರಿಂದ, ಅವು ಹಲವು ವೇಳೆ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತವೆ. ಉದಾಹರಣೆಗೆ, ದೀರ್ಘಕಾಲದ ಗಂಟಲು ನೋವು, ಧ್ವನಿಯ ಬದಲಾವಣೆ, ನುಂಗಲು ತೊಂದರೆ, ಅಥವಾ ಕುತ್ತಿಗೆಯಲ್ಲಿ ಗ್ರಂಥಿ ಇದ್ದರೂ ಕಾಣಿಸದೇ ಇರುವುದು. . ಹೀಗಾಗಿ ರೋಗನಿರ್ಣಯ ಮತ್ತು ಚಿಕಿತ್ಸೆ ವಿಳಂಬವಾಗುತ್ತದೆ.

ಇದರ ಜಾಗೃತಿಗೆ ಒಂದು ದೊಡ್ಡ ಅಡಚಣೆಯೆಂದರೆ ತಪ್ಪು ಕಲ್ಪನೆ. ಪ್ರಮುಖವಾಗಿ ಆತ್ಮೀಯತೆ ಮತ್ತು ಲೈಂಗಿಕ ಸ್ವಚ್ಛತೆಗೆ ಸಂಬಂಧಿಸಿರುವುದರಿಂದ, ಅನೇಕ ಭಾರತೀಯ ಕುಟುಂಬಗಳಲ್ಲಿ ಈ ಬಗ್ಗೆ ಮಾತನಾಡುವುದಕ್ಕೂ ಹಿಂಜರಿಯುತ್ತಾರೆ. ಈ ಹಿಂಜರಿಕೆ ರೋಗದ ಅಪಾಯವನ್ನು ಮಾತ್ರ ಹೆಚ್ಚಿಸುತ್ತಲೇ ಇದೆ.

ನಾವು ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು. ಎಚ್‌ಪಿವಿ ಅತ್ಯಂತ ಸಾಮಾನ್ಯ ಸೋಂಕು ಮತ್ತು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ನಡುವೆ ಬದುಕುವಷ್ಟೇ ಸರಳವಾಗಿರುತ್ತದೆ. ಅದರ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸಿ ಮುಕ್ತವಾಗಿ ಹೇಳಿಕೊಳ್ಳುವುದರಿಂದ ಸಕಾಲದಲ್ಲಿ ನೆರವು ಸಿಗುತ್ತದೆ.

ಆರಂಭಿಕ ರೋಗ ನಿರ್ಣಯದ ಪ್ರಾಮುಖ್ಯತೆ

ಹೆಚ್ಚಿನ ಕ್ಯಾನ್ಸರ್‌ಗಳಂತೆ, ಎಚ್‌ಪಿವಿ ಸಂಬಂಧಿಸಿರುವ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳನ್ನು ಆರಂಭದಲ್ಲಿ ಪತ್ತೆ ಮಾಡಿದರೆ ಬೇಗ ಗುಣಪಡಿಸಿಕೊಳ್ಳಬಹುದು. ಆರಂಭದಲ್ಲಿ ಪತ್ತೆಯಾದರೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತವೆ. ಇವು ಸಾಂಪ್ರದಾಯಿಕ ತಂಬಾಕು ಸಂಬಂಧಿತ ಕ್ಯಾನ್ಸರ್‌ ಗಳಿಗಿಂತ ಕಡಿಮೆ ಅಪಾಯಕಾರಿ ಹಾಗೂ ರೇಡಿಯೇಶನ್ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳಿಂದ ನಿವಾರಣೆಯಾಗುತ್ತದೆ.

ನಿಯಮಿತ ಬಾಯಿ ಪರೀಕ್ಷೆಗಳು, ವಿಶೇಷವಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಎಚ್‌ಪಿವಿ ಸಮಸ್ಯೆಯ ಇತಿಹಾಸ ಹೊಂದಿರುವವರಿಗೆ ಈ ಪರೀಕ್ಷೆಗಳು ನಿರ್ಣಾಯಕ. ದೀರ್ಘಕಾಲದ ಗಂಟಲು ನೋವು, ಧ್ವನಿಯ ಬದಲಾವಣೆ ಅಥವಾ ನುಂಗಲು ತೊಂದರೆಯಂತಹ ಲಕ್ಷಣಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ ಎಂದಿಗೂ ನಿರ್ಲಕ್ಷಿಸಬಾರದು.

ಅಪಾಯವನ್ನು ಕಡಿಮೆ ಮಾಡಬಹುದೇ?

ಎಚ್‌ಪಿವಿ ಸೋಂಕುಗಳನ್ನು ತಪ್ಪಿಸುವುದು ಸಾಧ್ಯವಿಲ್ಲದಿದ್ದರೂ, ಅಪಾಯಗಳನ್ನು ಖಂಡಿತ ವಾಗಿಯೂ ಕಡಿಮೆ ಮಾಡಬಹುದು:

ಎಚ್‌ಪಿವಿ ಲಸಿಕೆ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ಹೆಣ್ಣು ಮಕ್ಕಳಿಗೆ ಲಸಿಕೆ ಲಭ್ಯ ವಿದ್ದರೂ, ಬಾಲಕರು ಮತ್ತು ಯುವ ಪುರುಷರಿಗೂ ಲಸಿಕೆ ನೀಡಬೇಕು. . ಇದು ಬಾಯಿ ಮತ್ತು ಗಂಟಲು ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಅಪಾಯಕಾರಿ ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ.

ನಿಯಮಿತ ಬಾಯಿ ಪರೀಕ್ಷೆಗಳು ಮತ್ತು ಸ್ವಚ್ಛತೆ: ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ಹಲ್ಲು ಅಥವಾ ಇಎನ್‌ಟಿ ಪರೀಕ್ಷೆಗಳು ಅಸಹಜ ಅಂಗಾಂಶ ಅಥವಾ ಬೆಳವಣಿಗೆ ಯನ್ನು ಆರಂಭದಲ್ಲಿ ಪತ್ತೆ ಮಾಡಲು ಸಹಾಯ ಮಾಡುತ್ತವೆ.

ಮುಕ್ತ ಮಾ ತುಕತೆ : ವೈದ್ಯರೊಂದಿಗೆ ಅಪಾಯದ ಅಂಶಗಳ ಬಗ್ಗೆ ಭಯ ಅಥವಾ ಆತಂಕವಿಲ್ಲದೆ ಮುಕ್ತವಾಗಿ ಮಾತನಾಡುವುದು ಆರಂಭದಲ್ಲೇ ಪತ್ತೆ ಮಾಡಲು ಸಹಾಯ ಮಾಡುತ್ತದೆ.