Vastu Tips: ಯಶಸ್ಸು ತರುತ್ತೆ ಕಚೇರಿ ಟೇಬಲ್ ಮೇಲಿಡುವ ಹೂವು
ಮನೆ ಇರಲಿ ಕಚೇರಿಯಾಗಿರಲಿ ಸುಖ, ಶಾಂತಿ, ಸಮೃದ್ಧಿ ಸದಾ ನಮ್ಮದಾಗಿರಬೇಕು ಎಂದು ಬಯಸುತ್ತೇವೆ. ಆದರೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಕೆಲವೊಮ್ಮೆ ಇವುಗಳನ್ನು ನಮ್ಮ ಬಳಿ ಬಾರದಂತೆ ತಡೆಯುತ್ತದೆ. ಹೀಗಾಗಿ ಮನೆಯೇ ಆಗಿರಲಿ ಕಚೇರಿಯೇ ಆಗಿರಲಿ ನಾವು ಕೆಲವೊಂದು ವಾಸ್ತು ಅಂಶಗಳನ್ನು ಪರಿಗಣಿಸಲೇಬೇಕು. ಇದು ನಮ್ಮ ಜೀವನದಲ್ಲಿ ಪ್ರಗತಿಯನ್ನು ತಂದುಕೊಡುತ್ತದೆ.


ಬೆಂಗಳೂರು: ಜೀವನದಲ್ಲಿ ಎಲ್ಲರೂ ಪ್ರಗತಿಯನ್ನು ಬಯಸುವುದು ಸಹಜ. ಆದರೆ ಕೆಲವೊಮ್ಮೆ ಸಾಲು ಸಾಲು ಸೋಲುಗಳು ಎದುರಾಗುತ್ತವೆ. ಎಷ್ಟೇ ಕಷ್ಟಪಟ್ಟು ದುಡಿದರೂ ಆರ್ಥಿಕ ಸಮೃದ್ಧಿಯಾಗುವುದಿಲ್ಲ. ಕೆಲಸದಲ್ಲಿ ನಾವು ನಿರೀಕ್ಷಿಸಿದಷ್ಟು ಯಶಸ್ಸು ದಕ್ಕುವುದಿಲ್ಲ... ಇದಕ್ಕೆಲ್ಲ ಕಾರಣ ನಾವು ಕೆಲಸ ಮಾಡುವ ಟೇಬಲ್ (Vastu for Office Table)ನಲ್ಲಿರುತ್ತದೆ ಎಂಬುದು ಗೊತ್ತಿದೆಯೇ? ಯಾಕೆಂದರೆ ಕಚೇರಿ ಟೇಬಲ್ ವಾಸ್ತು ಶಾಸ್ತ್ರದ (Vastu for office) ಪ್ರಕಾರ ಇಲ್ಲದಿದ್ದರೆ ಕೆಲಸದಲ್ಲಿ ಪ್ರಗತಿ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು. ಹೀಗಾಗಿ ಕಚೇರಿ ಟೇಬಲ್ ಮಾತ್ರವಲ್ಲ ಅದರ ಮೇಲೆ ಇಡುವ ಪ್ರತಿಯೊಂದು ವಾಸ್ತು ನಿಯಮಗಳ (Vastu Tips) ಪ್ರಕಾರ ಇರಬೇಕು.
ವಾಸ್ತು ಶಾಸ್ತ್ರದಲ್ಲಿ ಕಚೇರಿ ಟೇಬಲ್ ಬಹುಮುಖ್ಯ ಎಂದು ಪರಿಗಣಿಸಲಾಗುತ್ತದೆ. ಕಚೇರಿ ಮೇಜಿನ ಸ್ಥಿತಿಯು ನಾವು ಮಾಡುವ ಕೆಲಸ ಮತ್ತು ಅದರ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಚೇರಿ ಮೇಜಿನ ಬಗ್ಗೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು ಎನ್ನುತ್ತದೆ ವಾಸ್ತುಶಾಸ್ತ್ರ.
ಕಚೇರಿ ಮೇಜಿನ ಮೇಲೆ ಹೂವುಗಳನ್ನು ಇಡಲು ಕೆಲವು ನಿಯಮಗಳನ್ನು ಹೇಳಿದ್ದಾರೆ. ಇದರಿಂದ ಜೀವನದಲ್ಲಿ ಮತ್ತು ಕೆಲಸದಲ್ಲಿ ಪ್ರಗತಿ ಸಾಧಿಸಬಹುದು ಎನ್ನುತ್ತಾರೆ ವಾಸ್ತು ತಜ್ಞರು.
ಕಚೇರಿ ಮೇಜಿನ ಮೇಲೆ ಹೂವುಗಳನ್ನು ಇಡುವುದು ತುಂಬಾ ಒಳ್ಳೆಯದು. ಒಂದೆಡೆ ಹೂವುಗಳ ಪರಿಮಳ ಮತ್ತು ಅವುಗಳ ಸೌಂದರ್ಯವು ಸ್ಥಳದಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತದೆ. ಅಲ್ಲದೇ ಇದು ಜೀವನದಲ್ಲಿ ಮತ್ತು ಕೆಲಸದಲ್ಲಿ ಪ್ರಗತಿಗೆ ದಾರಿ ತೆರೆಯುತ್ತದೆ.
ಕಚೇರಿ ಮೇಜಿನ ಮೇಲೆ ಹೂವುಗಳನ್ನು ಇಡುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ವಾಸ್ತು ತಜ್ಞರು.

ಕಚೇರಿ ಮೇಜಿನ ಮೇಲೆ ಹೂವುಗಳನ್ನು ಇಡುವಾಗ ಹೂವುಗಳ ಮುಖವು ಯಾವಾಗಲೂ ಆ ಕೆಲಸ ಮಾಡುವವರ ಕಡೆಗೆ ಇರಬೇಕು. ಹೂವುಗಳು ಟೇಬಲ್‌ನಲ್ಲಿ ಕೆಲಸ ಮಾಡುವವರ ಕಡೆಗೆ ಓರೆಯಾಗಿರಬೇಕು ಮತ್ತು ಬೇರೆ ಯಾವುದೇ ದಿಕ್ಕಿನ ಕಡೆಗೆ ಅದು ವಾಲಿರಬಾರದು.
ಒಂದು ವೇಳೆ ಅದು ಬೇರೆ ಕಡೆಗೆ ಮುಖ ಮಾಡಿದ್ದರೆ ಸಕಾರಾತ್ಮಕತೆ ದೂರವಾಗುತ್ತದೆ ಮತ್ತು ಕಚೇರಿ ಟೇಬಲ್‌ನಲ್ಲಿ ಕೆಲಸ ಮಾಡುವವರ ಕಡೆಗೆ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
ಕಚೇರಿ ಮೇಜಿನ ಮೇಲೆ ಇಡುವ ಹೂವುಗಳು ಒಣಗದಂತೆ ನೋಡಿಕೊಳ್ಳಿ. ಬಾಡುವ ಮೊದಲು ಅವುಗಳನ್ನು ಬದಲಾಯಿಸಿ. ಇಲ್ಲದಿದ್ದರೆ ಸ್ಥಳದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಯಶಸ್ಸನಲ್ಲಿ ಅಡೆತಡೆಗಳು ಎದುರಾಗುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸ್ನಾನಗೃಹದ ಬಾಗಿಲು ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು?
ಕಚೇರಿ ಮೇಜಿನ ಮೇಲೆ ಹೂವುಗಳನ್ನು ಇಡುವಾಗ ಮುಳ್ಳಿನ ಹೂವುಗಳನ್ನು ಇಡಬಾರದು. ಯಾಕೆಂದರೆ ಮೇಜಿನ ಮೇಲೆ ಮುಳ್ಳಿನ ಹೂವನ್ನು ಇಡುವುದು ಕೆಲಸದ ವಿಷಯಗಳಲ್ಲಿ ಸಮಸ್ಯೆಗಳನ್ನು ತರುತ್ತದೆ. ಒಂದು ವೇಳೆ ನಿಮಗೆ ಗುಲಾಬಿ ಪ್ರಿಯವಾಗಿದ್ದರೆ ಅದರ ಮುಳ್ಳುಗಳನ್ನು ತೆಗೆದು ಮೇಜಿನ ಮೇಲೆ ಇಡಿ.
ಯಾವತ್ತೂ ಪ್ಲಾಸಿಕ್ ಹೂವುಗಳನ್ನು ಕಚೇರಿ ಮೇಜಿನ ಮೇಲೆ ಇಡಬೇಡಿ. ಪ್ಲಾಸ್ಟಿಕ್ ಅನ್ನು ಅಶುದ್ಧ ಲೋಹವೆಂದು ಪರಿಗಣಿಸಲಾಗುತ್ತದೆ. ಇದನ್ನು ಕಚೇರಿ ಮೇಜಿನ ಮೇಲೆ ಇಡುವುದರಿಂದ ಕೆಲಸದಲ್ಲಿ ಅಡೆತಡೆಗಳು ಬರುತ್ತದೆ. ಪ್ರಗತಿಗೆ ತೊಂದರೆಗಳಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು.