ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Madan: ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ಈ ನಟಿಗೆ ಮಾತ್ರ ಆಮಂತ್ರಣ

ಈ ಭಾರಿಯ ಕಾನ್ಸ್  ಫಿಲ್ಮ್ ಫೆಸ್ಟಿವಲ್ ನಲ್ಲಿ ನಮ್ಮ ಕನ್ನಡತಿ, ಲಕ್ಷ್ಮೀ ನಿವಾಸದ ಭಾವನಾ ಅಲಿಯಾಸ್‌ ದಿಶಾ ಮದನ್ (Disha Madan) ಪಾಲ್ಗೊಳ್ಳುತ್ತಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್‌ ಅವರಿಗೆ ಆಹ್ವಾನ ಬಂದಿದ್ದು ಈ ಒಂದು ವಿಚಾರವನ್ನು ಸ್ವತಃ ದಿಶಾ ಮದನ್ ಅವರೇ ಹೇಳಿಕೊಂಡಿದ್ದಾರೆ.

ಕಾನ್ಸ್ ಫಿಲಂ ಫೆಸ್ಟಿವಲ್‌ಗೆ ಕನ್ನಡದ ಈ ನಟಿಗೆ ಮಾತ್ರ ಇನ್ವಿಟೇಶನ್!

Profile Pushpa Kumari May 14, 2025 1:16 PM

ನವದೆಹಲಿ: ಕಾನ್ಸ್  ಫಿಲ್ಮ್ ಫೆಸ್ಟಿವಲ್ ಆರಂಭವಾಗಿದೆ. ಮೇ 13 ರಿಂದ 24 ರವರೆಗೆ ನಡೆಯಲಿರುವ ಈ ಸಂಭ್ರಮದಲ್ಲಿ ಹಲವು ಸಿನಿಮಾ ನಟ- ನಟಿಯರು ರೆಡ್ ಕಾರ್ಪೆಟ್ ಮೇಲೆ ಮಿಂಚಲಿದ್ದಾರೆ. ಈ ಉತ್ಸವವನ್ನು ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದ ಕ್ಯಾನೆಸ್ ನಗರದಲ್ಲಿ ಆಯೋಜಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಗ್ಲಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಭಾರಿ ಕನ್ನಡಿಗರಿಗೆ ಖುಷಿಯ ವಿಚಾರವೊಂದು ಇದೆ. ಹೌದು ಈ ಭಾರಿಯ ಕಾನ್ಸ್  ಫಿಲ್ಮ್ ಫೆಸ್ಟಿವಲ್ ನಲ್ಲಿ ನಮ್ಮ ಕನ್ನಡತಿ,  ಲಕ್ಷ್ಮೀ ನಿವಾಸದ ಭಾವನಾ ಅಲಿಯಾಸ್‌ ದಿಶಾ ಮದನ್ (Disha Madan) ಪಾಲ್ಗೊಳ್ಳುತ್ತಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್‌ ಅವರಿಗೆ ಆಹ್ವಾನ ಬಂದಿದ್ದು ಈ ಒಂದು ವಿಚಾರವನ್ನು ಸ್ವತಃ ದಿಶಾ ಮದನ್ ಅವರೇ ಹೇಳಿಕೊಂಡಿದ್ದಾರೆ.

ಕಾನ್ಸ್  ಫಿಲ್ಮ್ ಫೆಸ್ಟಿವಲ್ ನಲ್ಲಿ ಕನ್ನಡತಿ, ಲಕ್ಷ್ಮೀ ನಿವಾಸದ ಭಾವನಾ ಅಲಿಯಾಸ್‌ ದಿಶಾ ಮದನ್ ಪಾಲ್ಗೊಳ್ತಿದ್ದಾರೆ ಎನ್ನುವ ಸುದ್ದಿ ಕನ್ನಡಿಗರಿಗೆ ಬಾರಿ ಖುಷಿ ನೀಡಿದೆ. ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ನಟಿ ತಮ್ಮ ಬಾಲ್ಯದ ದಿನಗಳನ್ನು‌ ನೆನಪಿಸಿಕೊಂಡಿದ್ದು ತಾನು ಡ್ಯಾನ್ಸ್ ಕಲಿಕೆಗೆ ಎಷ್ಟು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದೆ ಎಂಬುದನ್ನು ತಿಳಿಸಿದ್ದಾರೆ‌. ಅದರ ಜೊತೆ ಸಿನಿಮಾ ನಟನೆ ಬಗ್ಗೆ ಮಾತನಾಡಿದ ದಿಶಾ, ಕೊನೆಯಲ್ಲಿ ತಮಗೆ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ ಎನ್ನುವುದನ್ನು ಕೂಡ ಸ್ವತ ಅವರೇ ಹೇಳಿದ್ದಾರೆ.

ದಿಶಾ ಅವರ ಈ ವಿಡಿಯೋ ನೋಡಿದ ಫ್ಯಾನ್ಸ್ ಬಹಳಷ್ಟು ಎಕ್ಸೈಟ್ ಆಗಿದ್ದು ಈ ಬಗ್ಗೆ ನೆಟ್ಟಿಗರು ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ. ದಿಶಾ ಅಭಿಮಾನಿ ಯೊಬ್ಬರು ರೆಡ್ ಕಾರ್ಪೆಟ್ ನಲ್ಲಿ ನಿಮ್ಮನ್ನು ನೋಡೋಕೆ ಬಹಳಷ್ಟು ಕಾತುರವಾಗಿದ್ದೇನೆ ಎಂದು  ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕನ್ನಡಿಗರ ಹೆಮ್ಮೆಯ ನಟಿ ಎಂದು ಬರೆದು ಕೊಂಡಿದ್ದಾರೆ. ದಿಶಾಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಆಪ್ತರು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಇದನ್ನು ಓದಿ: Kannada New Movie: ಮಯೂರ್ ಕಡಿ ನಿರ್ದೇಶನ, ನಾಯಕನಾಗಿ ನಟಿಸಿರುವ ʼಮಾತೊಂದ ಹೇಳುವೆʼ ಚಿತ್ರ ಜೂ.13ಕ್ಕೆ ರಿಲೀಸ್‌

ನಟಿ ದಿಶಾ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಹಾಟ್​ ಫೋಟೋಶೂಟ್​ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ನಟಿ ದಿಶಾ ಮದನ್ ಫ್ರೆಂಚ್ ಬಿರಿಯಾನಿ ಹಾಗೂ ಹಂಬಲ್ ಪೊಲಿಟಿಷಿಯನ್ ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ‌ ಸದ್ಯ ಲಕ್ಷ್ಮಿ ನಿವಾಸ ಸೀರಿಯಲ್‌ ಅಲ್ಲಿ ಭಾವನಾ ಅನ್ನೋ ರೋಲ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಕುಲವಧು ಸೀರಿಯಲ್ ನಲ್ಲಿ ನಟನೆ ಮಾಡಿದ್ದರು. ಇನ್ನು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಭಾಗಿ ಆಗಿದ್ದು ಡಾನ್ಸಿಂಗ್ ಸ್ಟಾರ್, ಇಸ್ಮಾರ್ಟ್ ಸೂಪರ್ ಜೋಡಿ ಹೀಗೆ ಇನ್ನು ಹಲವು ಡ್ಯಾನ್ಸ್ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷ ಎಂದರೆ ಇತ್ತಿಚೆಗಷ್ಟೇ ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್‌ ಲಭಿಸಿತ್ತು. 2024ನೇ ಸಾಲಿನ ಪ್ರಶಸ್ತಿಯನ್ನು ಇವರು ಗಿಟ್ಟಿಸಿಕೊಂಡಿದ್ದರು.