ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಪರೇಷನ್‌ ಸಿಂದೂರ್‌ನಲ್ಲಿ ಹತನಾದ ಉಗ್ರನ ತಂದೆ ಹೇಳಿದ್ದೇನು ಗೊತ್ತಾ? ಛೇ..ಇದೆಂಥಾ ಹೀನ ಮನಸ್ಥಿತಿ?

Viral Video: ಭಾರತೀಯ ಸೇನೆಯ ಆಪರೇಷನ್ ಸಿಂಧೂರ್‌ನಲ್ಲಿ ಕೊಲ್ಲಲ್ಪಟ್ಟ ಲಷ್ಕರ್-ಎ-ತೊಯ್ಬಾ ಉಗ್ರನ ತಂದೆಯೊಬ್ಬ, ತನ್ನ ಮಕ್ಕಳ ಉಗ್ರವಾದಿ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದು, ತನ್ನ ಮಗ ಎಸಗಿದ ಹೀನಾ ಕೃತ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು, ಆ ವ್ಯಕ್ತಿಯನ್ನು ಹಫೀಜ್ ಅಬ್ದುರ್ ರೌಫ್ ಎಂದು ಗುರುತಿಸಲಾಗಿದೆ.

ಹತ ಉಗ್ರನ ತಂದೆಯ ಮಾತನ್ನೊಮ್ಮೆ ಕೇಳಿ; ವಿಡಿಯೊ ಫುಲ್‌ ವೈರಲ್‌

Profile Sushmitha Jain May 14, 2025 12:43 PM

ಮುರಿದ್ಕೆ: ಭಾರತೀಯ ಸೇನೆಯ (Indian Army) ಆಪರೇಷನ್ ಸಿಂಧೂರ್‌ನಲ್ಲಿ (Operation Sindoor,) ಕೊಲ್ಲಲ್ಪಟ್ಟ ಲಷ್ಕರ್-ಎ-ತೊಯ್ಬಾ (Lashkar-e-Taiba) ಉಗ್ರನ ತಂದೆಯೊಬ್ಬ, ತನ್ನ ಮಕ್ಕಳ ಉಗ್ರವಾದಿ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದು, ತನ್ನ ಮಗ ಎಸಗಿಸ ಹೀನಾ ಕೃತ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು, ಆ ವ್ಯಕ್ತಿಯನ್ನು ಹಫೀಜ್ ಅಬ್ದುರ್ ರೌಫ್(Hafiz Abdur Rauf) ಎಂದು ಗುರುತಿಸಲಾಗಿದೆ. ವಿಡೀಯೋದಲ್ಲಿ ಹಲವಾರು ಉಗ್ರರ ಜೊತೆ ಪಾಕಿಸ್ತಾನ ಸೇನೆಯಿಂದ "ಸಾಮಾನ್ಯ ವ್ಯಕ್ತಿ” ಎಂದು ಕಾಣಿಸಿಕೊಂಡಿರುವ ಹಫೀಜ್ ಅಬ್ದುರ್ ರೌಫ್ ಉಗ್ರವಾದಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವಂತೆ ಮಾತನಾಡಿದ್ದಾರೆ.

ವಿಡಿಯೋದಲ್ಲಿ ಉಗ್ರನ ತಂದೆ, ಭಾರತೀಯ ಸೇನೆಯ ದಾಳಿಯಲ್ಲಿ ಉಗ್ರವಾದಿ ಚಟುವಟಿಕೆಗಳಿಗಾಗಿ ಕೊಲ್ಲಲ್ಪಟ್ಟ ತನ್ನ ಇಬ್ಬರು ಮಕ್ಕಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. "ನನ್ನ ಇಬ್ಬರು ಮಕ್ಕಳು ಹುತಾತ್ಮರಾದರು. ನಾನು ಇದಕ್ಕೆ ಹೆಮ್ಮೆಪಡುತ್ತೇನೆ. ನನಗೆ ಐದು ಮಕ್ಕಳಿದ್ದರೂ, ಅವರನ್ನೂ ಬಲಿದಾನಕ್ಕೆ ಸಮರ್ಪಿಸುತ್ತಿದ್ದೆ," ಎಂದು ಅವರು ಹೇಳಿದ್ದಾರೆ.



ಈ ಸುದ್ದಿಯನ್ನು ಓದಿ: Operation Sindoor: ಆಪರೇಶನ್‌ ಸಿಂದೂರ್‌ ವೇಳೆ ಪಾಕ್‌ ಪರ ಘೋಷಣೆ ಕೂಗಿದ ವ್ಯಕ್ತಿ ಸೆರೆ

ಅವರ ಮಾತು ಮುಗಿಯುತ್ತಿದ್ದಂತೆ, ಸುತ್ತಲಿನ ಗುಂಪು "ನಾರಾ-ಎ-ತಕ್ಬೀರ್" ಮತ್ತು "ಅಲ್ಲಾಹು ಅಕ್ಬರ್" ಘೋಷಣೆಗಳನ್ನು ಕೂಗಿತು. ಬಳಿಕ "ಶಿ ಉಲ್ಲಾ, ಸಾಹಿ ಉಲ್ಲಾ; ಅಲ್ ಜಿಹಾದ್, ಅಲ್ ಜಿಹಾದ್" ಎಂಬ ಘೋಷಣೆಗಳು ಮೊಳಗಿದವು. ವಿಡಿಯೋದಲ್ಲಿ ಹಫೀಜ್ ಅಬ್ದುರ್ ರೌಫ್ ಕೂಡ ಕಾಣಿಸಿಕೊಂಡಿದ್ದಾನೆ. ಪಾಕಿಸ್ತಾನ ಸೇನೆ ಇವನನ್ನು "ಸಾಮಾನ್ಯ ವ್ಯಕ್ತಿ” ಎಂದು ಕರೆದರೂ, ಇವನು ಈ ಹಿಂದೆ ಆಪರೇಷನ್ ಸಿಂಧೂರ್‌ನಲ್ಲಿ ಕೊಲ್ಲಲ್ಪಟ್ಟ ಮೂವರು ಉಗ್ರರ ಅಂತ್ಯಕ್ರಿಯೆಯ ಪ್ರಾರ್ಥನೆಯ ಮುಂದಾಳತ್ವ ವಹಿಸಿದ್ದ.

ಈ ವಿಡಿಯೋ ಪಾಕಿಸ್ತಾನದ ಮುರಿದ್ಕೆ ಪ್ರದೇಶಕ್ಕೆ ಸೇರಿದೆ ಎಂದು ವರದಿಯಾಗಿದ್ದು, ಇದು ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತೀಯ ಸೇನೆ ಗುರಿಯಾಗಿಸಿಕೊಂಡಿದ್ದ ಸ್ಥಳಗಳಲ್ಲಿ ಒಂದಾಗಿದೆ. ಮುರಿದ್ಕೆಯ ನಂಗಲ್ ಸಾಹದಾನ್‌ನಲ್ಲಿರುವ ಮಾರ್ಕಜ್ ತೈಬಾ, ಲಷ್ಕರ್-ಎ-ತೊಯ್ಬಾದ ಪ್ರಮುಖ ತರಬೇತಿ ಕೇಂದ್ರವಾಗಿತ್ತು.